ಜಾನಪದ ರಂಗಭೂಮಿಯಲ್ಲಿ ಬಯಲಾಟ ಪ್ರದರ್ಶನ ಕಲೆಯ ಸವಾಲುಗಳು ಮತ್ತು ಸಾಧ್ಯತೆಗಳು
Main Article Content
Abstract
ಗ್ರಾಮೀಣ ಶ್ರಮ ಸಂಸ್ಕೃತಿಯ ಜೀವಂತ ಪ್ರತೀಕವಾದ ಮೂಡಲಪಾಯ ಬಯಲಾಟವು ಕೇವಲ ಮನರಂಜನೆಯಲ್ಲದೆ, ಸಮುದಾಯಗಳ ನಡುವಿನ ಸಾಮರಸ್ಯದ ಪ್ರಮುಖ ಕೊಂಡಿಯಾಗಿದೆ. ಬಳ್ಳಾರಿ ಜಿಲ್ಲೆಯಂತಹ ಬಯಲುಸೀಮೆಯಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಕಲೆಯು, ಅನಕ್ಷರಸ್ಥ ಕಲಾವಿದರ ಅದ್ಭುತ ಸ್ಮರಣಶಕ್ತಿ ಮತ್ತು ಕಲಾಬದ್ಧತೆಯಿಂದ ತಲೆಮಾರುಗಳನ್ನು ದಾಟಿಬಂದಿದೆ. ಆದರೆ, ಪ್ರಸ್ತುತ ಆರ್ಥಿಕ ಮುಗ್ಗಟ್ಟು, ಸೂಕ್ತ ತರಬೇತುದಾರರ ಕೊರತೆ, ಜಾತಿ ವ್ಯವಸ್ಥೆಯ ಮಿತಿಗಳು, ಯುವಜನರ ನಿರಾಸಕ್ತಿ ಹಾಗೂ ಆಧುನಿಕ ದೃಶ್ಯ ಮಾಧ್ಯಮಗಳ ಅಬ್ಬರದಿಂದಾಗಿ ಈ ವಿಶಿಷ್ಟ ರಂಗಭೂಮಿ ಅಳಿವಿನಂಚಿನಲ್ಲಿದೆ. ಕರಾವಳಿಯ ಯಕ್ಷಗಾನ ಪಡೆದುಕೊಂಡ ಬೆಂಬಲದ ಮಾದರಿಯಲ್ಲಿಯೇ ಬಯಲಾಟಕ್ಕೂ ಕಾಯಕಲ್ಪದ ತುರ್ತು ಅವಶ್ಯಕತೆಯಿದೆ. ಸ್ತ್ರೀಯರಿಗೆ ಹೆಚ್ಚಿನ ರಂಗಾವಕಾಶ ನೀಡುವುದು, ಮೂರು ಗಂಟೆಗಳ ಕಾಲಮಿತಿಯೊಳಗೆ ಪ್ರದರ್ಶನವನ್ನು ಅಚ್ಚುಕಟ್ಟಾಗಿ ರೂಪಿಸುವುದು, ಸಮಕಾಲೀನ ಹೊಸ ಕಥಾವಸ್ತುಗಳನ್ನು ಪ್ರಯೋಗಿಸುವುದು ಮತ್ತು ಸರ್ಕಾರದ ಸಕ್ರಿಯ ಆರ್ಥಿಕ ಬೆಂಬಲದೊಂದಿಗೆ ಈ ದೇಶೀಯ ಕಲೆಯನ್ನು ಭವಿಷ್ಯದ ಪೀಳಿಗೆಗೆ ಸಮರ್ಥವಾಗಿ ದಾಟಿಸಬಹುದಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶ್ರೀರಂಗ (ಸಂ.), (1987), ಕನ್ನಡ ರಂಗಭೂಮಿ ನಡೆದು ಬಂದ ದಾರಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್.
ರಾಮನಾಥ್ ಹೆಚ್. ಕೆ., (1990), ಕನ್ನಡ ರಂಗಭೂಮಿಯ ವಿಕಾಸ, ಮೈಸೂರು: ಅಭಿನಯ.
ಶಿವರುದ್ರಪ್ಪ ಜಿ. ಎಸ್., (2012), ಕನ್ನಡ ನಾಟಕ ಪರಂಪರೆ ಮತ್ತು ಪ್ರಯೋಗ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.
ಕರಿಶೆಟ್ಟಿ ರುದ್ರಪ್ಪ, ಬಯಲಾಟ ಸಂಕ್ಷಿಪ್ತ ಚರಿತ್ರೆ ಮತ್ತು ಪದಗಳು, ಕೊಂಬಳಿ (ಬಳ್ಳಾರಿ): ಏಕಪರ್ಣ ಪ್ರಕಾಶನ.
ಬೋರಲಿಂಗಯ್ಯ ಹಿ. ಚಿ., (1996), ಕರ್ನಾಟಕ ಜಾನಪದ ಕಲೆಗಳ ಕೋಶ, ಹಂಪಿ: ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ.
ಚನ್ನಬಸಪ್ಪ ಗೋ. ರು., (1977), ಕರ್ನಾಟಕ ಜನಪದ ಕಲೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.