ಜನಪದ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ
Main Article Content
Abstract
ಮಾನವನ ಸಹಜ ಭಾವನಾತ್ಮಕ ಅಭಿವ್ಯಕ್ತಿಗಳು, ನಂಬಿಕೆಗಳು ಹಾಗೂ ಗ್ರಾಮೀಣ ಆಚರಣೆಗಳ ಒಗ್ಗೂಡುವಿಕೆಯಿಂದ ಜಾನಪದ ರಂಗಭೂಮಿ ಜೀವತಳೆದಿದೆ. ಕೇವಲ ಮನರಂಜನೆಯ ವೇದಿಕೆಯಾಗಿರದೆ, ಇದು ಧಾರ್ಮಿಕ ಶ್ರದ್ಧೆ, ನೈತಿಕ ಮೌಲ್ಯಗಳ ಬೋಧನೆ ಮತ್ತು ಸಾಮಾಜಿಕ ಒಗ್ಗಟ್ಟಿನ ಪ್ರಬಲ ಸಂವಹನ ಸಾಧನವಾಗಿ ಬೇರೂರಿದೆ. ಯಕ್ಷಗಾನ, ಬಯಲಾಟ, ಸಣ್ಣಾಟ ಹಾಗೂ ವಿಭಿನ್ನ ಗೊಂಬೆಯಾಟಗಳಂತಹ ವಿಶಿಷ್ಟ ಕಲಾ ಪ್ರಕಾರಗಳು ಸಮುದಾಯದ ವಾಸ್ತವಿಕ ಬದುಕಿನ ತಲ್ಲಣಗಳನ್ನು, ಸಂಭ್ರಮವನ್ನು ಹಾಗೂ ಸಾಂಸ್ಕೃತಿಕ ಜೀವಂತಿಕೆಯನ್ನು ನೇರವಾಗಿ ಪ್ರತಿಬಿಂಬಿಸುತ್ತವೆ. ದೇವಾಲಯಗಳ ಜಾತ್ರೆ ಮತ್ತು ಉತ್ಸವಗಳ ಆವರಣದಲ್ಲಿ ಬೆಳೆದುಬಂದ ಈ ಕಲೆಯು ಮಾನವೀಯ ಸಂಬಂಧಗಳನ್ನು ಬೆಸೆಯುವ ಜೊತೆಗೆ ಸಮಾಜದ ತಪ್ಪು-ಒಪ್ಪುಗಳನ್ನು ತಿದ್ದುವ ಜಾಗೃತಿಯನ್ನೂ ಮೂಡಿಸುತ್ತದೆ. ಆಧುನಿಕತೆಯ ಭರಾಟೆ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಕಲಾಪ್ರಕಾರಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ, ನಮ್ಮ ಮಣ್ಣಿನ ಮೂಲ ಸಂಸ್ಕೃತಿಯನ್ನು ಹಾಗೂ ಅಸ್ಮಿತೆಯನ್ನು ಕಾಪಾಡಲು ಇಂತಹ ಗ್ರಾಮೀಣ ರಂಗಪರಂಪರೆಯ ರಕ್ಷಣೆ ಅತ್ಯಂತ ಅವಶ್ಯಕವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಕ್ಷರ ಕೆ. ವಿ., (2000), ರಂಗ ಪ್ರಪಂಚ, ನವ ದೆಹಲಿ: ನ್ಯಾಷನಲ್ ಬುಕ್ ಇಂಡಿಯಾ.
ಅಪ್ಪಗೆರೆ ತಿಮ್ಮರಾಜು, (2017), ಬದಲಾಗುತ್ತಿರುವ ಜಾನಪದ ಸಮಗ್ರ ಜಾನಪದ ಲೇಖನಗಳು, ಬೆಂಗಳೂರು: ಸಿರಿವರ ಪ್ರಕಾಶನ.
ಜಯಪ್ರಕಾಶ ಮಾವಿನಕುಳಿ, (2001), ರಂಗ ಪ್ರತಿಸ್ಪಂದನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಪಾರ್ಶ್ವನಾಥ್ ಎಚ್. ಎ., (1995), ರಂಗಸಂಗ, ಮೈಸೂರು: ನಿತಿನ್ ಪ್ರಕಾಶನ.
ಬಸವರಾಜ ಮಲ್ಲಶೆಟ್ಟಿ ಕೆ. ಎಸ್., (2008), ಉತ್ತರ ಕರ್ನಾಟಕದ ಬಯಲಾಟಗಳು, ಕೃಷ್ಣಪುರ ದೊಡ್ಡಿ: ಮುದ್ದಪ್ಪ ಸ್ಮಾರಕ ಟ್ರಸ್ಟ್.
ಭೀಮನಗೌಡ ಎಫ್. ಪಾಟೀಲ್, (2010), ರಂಗ ಪರದೆಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಬೆಟಗೇರಿ ಕೃಷ್ಣಶರ್ಮಾ, (1976), ಕನ್ನಡ ಜಾನಪದ ಸಾಹಿತ್ಯ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
ಬೋರಲಿಂಗಯ್ಯ ಹಿ. ಚಿ., (2015), ಕರ್ನಾಟಕ ಜಾನಪದ ಕಲೆಗಳ ಕೋಶ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ರಾಜೇಂದ್ರ ಡಿ. ಕೆ., (1986), ಮುರಾವು, ಮೈಸೂರು: ತಳಗವಾಡಿ ಪ್ರಕಾಶನ.