ರಂಗಭೂಮಿ ಮತ್ತು ಚಲನಚಿತ್ರ: ಒಂದು ತುಲನಾತ್ಮಕ ಅಧ್ಯಯನ

Main Article Content

ಶಾಲಿನಿ ಯು.ಬಿ.

Abstract

ರಂಗಭೂಮಿ ಮತ್ತು ಚಲನಚಿತ್ರವು ಮಾನವ ನಾಗರಿಕತೆಯ ಸಾಂಸ್ಕೃತಿಕ ಅಭಿವ್ಯಕ್ತಿಯ ಎರಡು ಪ್ರಮುಖ ದೃಶ್ಯಕಲಾ ಮಾಧ್ಯಮಗಳಾಗಿವೆ. ರಂಗಭೂಮಿ ಪ್ರಾಚೀನ ಕಾಲದಿಂದಲೂ ಜೀವಂತ ಪ್ರದರ್ಶನದ ಮೂಲಕ ಸಮಾಜದ ಬದುಕು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತಾ ಬಂದಿದ್ದರೆ, ಚಲನಚಿತ್ರವು ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದೇ ಕಲಾತ್ಮಕ ಅಭಿವ್ಯಕ್ತಿಯನ್ನು ವಿಶ್ವವ್ಯಾಪಿಯಾಗಿ ವಿಸ್ತರಿಸಿದೆ. ಎರಡೂ ಮಾಧ್ಯಮಗಳ ಮೂಲ ಉದ್ದೇಶ ಮಾನವ ಜೀವನದ ಅನುಭವಗಳನ್ನು ಕಲಾತ್ಮಕವಾಗಿ ನಿರೂಪಿಸುವುದಾಗಿದ್ದರೂ, ಅವುಗಳ ಅಭಿವ್ಯಕ್ತಿ ವಿಧಾನ, ತಾಂತ್ರಿಕ ವಿನ್ಯಾಸ, ಪ್ರೇಕ್ಷಕರೊಂದಿಗೆ ಹೊಂದುವ ಸಂಬಂಧ, ಕಥಾನಿರೂಪಣೆಯ ಶೈಲಿ ಮತ್ತು ಸಾಮಾಜಿಕ ಪ್ರಭಾವದಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಈ ಪ್ರಬಂಧದಲ್ಲಿ ರಂಗಭೂಮಿ ಮತ್ತು ಚಲನಚಿತ್ರಗಳ ಸ್ವರೂಪ, ಬೆಳವಣಿಗೆ ಹಾಗೂ ಪರಸ್ಪರ ಸಂಬಂಧವನ್ನು ತುಲನಾತ್ಮಕ ದೃಷ್ಟಿಯಿಂದ ವಿಶ್ಲೇಷಿಸಲಾಗಿದೆ. ವಿಶೇಷವಾಗಿ ಕನ್ನಡ ರಂಗಭೂಮಿಯು ಕನ್ನಡ ಚಲನಚಿತ್ರರಂಗದ ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಪರಿಶೀಲಿಸಲಾಗಿದೆ. ಅಭಿನಯ, ನಿರ್ದೇಶನ, ದೃಶ್ಯಭಾಷೆ, ಕಾಲ ಮತ್ತು ಸ್ಥಳದ ಬಳಕೆ, ತಂತ್ರಜ್ಞಾನದ ಪಾತ್ರ ಹಾಗೂ ಪ್ರೇಕ್ಷಕರೊಂದಿಗೆ ಹೊಂದುವ ಸಂಬಂಧದ ಆಧಾರದ ಮೇಲೆ ಈ ಎರಡೂ ಮಾಧ್ಯಮಗಳ ಸಾಮ್ಯತೆ ಮತ್ತು ವೈಶಿಷ್ಟ್ಯಗಳನ್ನು ವಿವರಿಸಲಾಗಿದೆ. ಜೊತೆಗೆ, ಸಮಕಾಲೀನ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನ, ಒಟಿಟಿ (OTT) ವೇದಿಕೆಗಳು ಹಾಗೂ ಹೊಸ ಮಾಧ್ಯಮಗಳ ಪ್ರಭಾವದಿಂದ ಉಂಟಾಗಿರುವ ಬದಲಾವಣೆಗಳನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.
ಈ ಅಧ್ಯಯನವು ರಂಗಭೂಮಿ ಮತ್ತು ಚಲನಚಿತ್ರಗಳನ್ನು ಪರಸ್ಪರ ಸ್ಪರ್ಧಾತ್ಮಕ ಮಾಧ್ಯಮಗಳಾಗಿ ನೋಡುವುದಕ್ಕಿಂತ, ಒಂದಕ್ಕೊಂದು ಪೂರಕವಾದ ಸಾಂಸ್ಕೃತಿಕ ಅಭಿವ್ಯಕ್ತಿಗಳೆಂದು ಪರಿಗಣಿಸುವ ಅಗತ್ಯವನ್ನು ಒತ್ತಿಹೇಳುತ್ತದೆ.

Article Details

Section

Research Articles

Author Biography

ಶಾಲಿನಿ ಯು.ಬಿ.

ಉಪನ್ಯಾಸಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡ್ಕ.

How to Cite

ಶಾಲಿನಿ ಯು.ಬಿ. (2026). ರಂಗಭೂಮಿ ಮತ್ತು ಚಲನಚಿತ್ರ: ಒಂದು ತುಲನಾತ್ಮಕ ಅಧ್ಯಯನ. ಅಕ್ಷರಸೂರ್ಯ (AKSHARASURYA), 17(06), 88 to 97. https://aksharasurya.com/index.php/latest/article/view/2401

References

ಅಯ್ಯಪ್ಪ ಪಣಿಕ್ಕರ್, ಅಕ್ಷರ (ಅನು.), (1982), ರಂಗಭೂಮಿಯ ಪೂರ್ವ ಪಶ್ಚಿಮ, ಸಾಗರ: ಅಕ್ಷರ ಪ್ರಕಾಶನ.

ನಾಗೇಂದ್ರ, (2017), ಸಿನಿಮಾ ಜಗತ್ತು, ತುಮಕೂರು: ಶ್ರೀ ಚೆನ್ನಕೇಶವ ಪ್ರಕಾಶನ.

ಪುಟ್ಟಸ್ವಾಮಯ್ಯ, (1983), ಕನ್ನಡ ರಂಗಭೂಮಿ ನಡೆದು ಬಂದ ದಾರಿ, ಬೆಂಗಳೂರು: ಐ ಬಿ ಎಚ್ ಪ್ರಕಾಶನ.

ಪುಟ್ಟಸ್ವಾಮಿ ಕೆ., (2019), ಸಿನಿಮಾ ಯಾನ, ಬೆಂಗಳೂರು: ಅಭಿನವ ಪ್ರಕಾಶನ.

ಮರುಳ ಸಿದ್ದಪ್ಪ ಕೆ., (2018), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪುಸ್ತಕ.

ವೈಕುಂಠ ರಾಜು ಬಿ. ವಿ., (1997), ಕನ್ನಡ ರಂಗಭೂಮಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ವೈಕುಂಠ ರಾಜು ಬಿ. ವಿ., (2004), ಸಿನಿ ಮಾತು, ಬೆಂಗಳೂರು: ಸನತ್ ಪ್ರಕಾಶನ.