ಕನ್ನಡ ರಂಗಭೂಮಿಯ ಪರಂಪರೆ ಮತ್ತು ಪ್ರಸ್ತುತ ಸ್ಥಿತಿ

Main Article Content

ಡಾ. ಗೀತಾ ಕುಮಾರಿ ಟಿ.

Abstract

ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ನಾಟಕ ಕಲೆ ಹಾಗೂ ಕನ್ನಡ ರಂಗಭೂಮಿಯ ಉಗಮ, ವಿಕಾಸ ಮತ್ತು ಇಂದಿನ ಸವಾಲುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜನಪದ, ವೃತ್ತಿ ಮತ್ತು ಹವ್ಯಾಸಿ ಎಂದು ಮೂರು ವಿಭಾಗಗಳಲ್ಲಿ ಬೆಳೆದುಬಂದ ರಂಗಭೂಮಿಯು ಕೇವಲ ಮನರಂಜನೆಯ ಮಾಧ್ಯಮವಾಗಿರದೆ ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯಾಗಿದೆ. ಪ್ರಸ್ತುತ ಡಿಜಿಟಲ್ ಯುಗದ ಆಕರ್ಷಣೆಗಳಿಂದಾಗಿ ನಾಟಕ ಕ್ಷೇತ್ರವು ಪ್ರೇಕ್ಷಕರು ಮತ್ತು ಕಲಾವಿದರ ಕೊರತೆಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ಶಾಲಾ-ಕಾಲೇಜು ಮಟ್ಟದಲ್ಲಿ ನಾಟಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಗ್ರಾಮ ಮಟ್ಟದಲ್ಲಿ ರಂಗಮಂದಿರಗಳ ನಿರ್ಮಾಣ ಹಾಗೂ ಸರ್ಕಾರದ ಆರ್ಥಿಕ ಬೆಂಬಲ ಅತ್ಯಗತ್ಯ. ನಾಟಕವನ್ನು ಕೇವಲ ಕಲೆಯಾಗಿ ನೋಡದೆ, ಸ್ಕ್ರಿಪ್ಟ್ ರಚನೆ, ಬೆಳಕು ಸಂಯೋಜನೆ ಮತ್ತು ನಿರ್ದೇಶನದಂತಹ ವೃತ್ತಿಪರ ಕೌಶಲಾಧಾರಿತ ಉದ್ಯೋಗವಾಗಿ ಯುವಜನತೆ ಸ್ವೀಕರಿಸಿದರೆ ಕನ್ನಡ ರಂಗಭೂಮಿಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಲಾಗಿದೆ.

Article Details

Section

Research Articles

Author Biography

ಡಾ. ಗೀತಾ ಕುಮಾರಿ ಟಿ.

ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು. ದ.ಕ.

How to Cite

ಗೀತಾ ಕುಮಾರಿ ಟಿ. (2026). ಕನ್ನಡ ರಂಗಭೂಮಿಯ ಪರಂಪರೆ ಮತ್ತು ಪ್ರಸ್ತುತ ಸ್ಥಿತಿ. ಅಕ್ಷರಸೂರ್ಯ (AKSHARASURYA), 17(06), 34 to 41. https://aksharasurya.com/index.php/latest/article/view/2394

References

ಮರುಳಸಿದ್ದಪ್ಪ ಕೆ., (1983), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಪ್ರಿಂಟರ್ಸ್ ಪ್ರಕಾಶನ.

ಶಿವರುದ್ರಪ್ಪ ಜಿ. ಎಸ್., (1978), ಕನ್ನಡ ನಾಟಕ ಪರಂಪರೆ ಮತ್ತು ಪ್ರಯೋಗ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.

ರಾಮನಾಥ್ ಎಚ್. ಕೆ., (1990), ಕನ್ನಡ ರಂಗಭೂಮಿಯ ವಿಕಾಸ, ಮೈಸೂರು: ಅಭಿನಯ ಪ್ರಕಾಶನ.

ಕೃಷ್ಣಯ್ಯ ಎಂ. ಎಚ್., (2009), ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ, ಬೆಂಗಳೂರು: ಇಳಾ ಪ್ರಕಾಶನ.

ಮರುಳಸಿದ್ದಪ್ಪ ಕೆ., (1986), ಕನ್ನಡ ನಾಟಕ ಸಮೀಕ್ಷೆ, ಬೆಂಗಳೂರು: ಪ್ರತಿಮಾ ನಾಟಕ ಪ್ರಕಾಶನ.

ನಾಗಭೂಷಣ ಎ. ಆರ್. (ಸಂ.), (1981), ನಾಟಕ ರಚನೆ, ಶಿವಮೊಗ್ಗ: ಪರಿಸರ ಸಾಹಿತ್ಯ ಪ್ರಕಾಶನ.

ಶಾಮರಾಯರು ತ. ಸು., (1962), ಕನ್ನಡ ನಾಟಕ, ಮೈಸೂರು: ಗೀತಾ ಬುಕ್ ಹೌಸ್.