ಶಿವರಾಮ ಕಾರಂತರ ರಂಗಪ್ರಯೋಗಗಳು

Main Article Content

ಮಮತಾ ಎಮ್.

Abstract

ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯ ಕ್ಷೇತ್ರದಲ್ಲಿ ವಿಶಿಷ್ಟವಾದ ಛಾಪು ಮೂಡಿಸಿದ ಶಿವರಾಮ ಕಾರಂತರು ಬಹುಮುಖ ಪ್ರತಿಭೆಯ ಸೃಜನಶೀಲ ವ್ಯಕ್ತಿತ್ವದವರು. ಕಾದಂಬರಿ, ನಾಟಕ, ಯಕ್ಷಗಾನ, ಚಿತ್ರಕಲೆ, ಸಂಗೀತ, ನೃತ್ಯ ಹಾಗೂ ರಂಗಭೂಮಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಯೋಗಶೀಲತೆಯನ್ನು ಮೆರೆದವರು. ಕನ್ನಡ ರಂಗಭೂಮಿಯ ಆಧುನಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಇವರ ರಂಗಚಿಂತನೆ ಕೇವಲ ನಾಟಕ ರಚನೆಗೆ ಸೀಮಿತವಾಗಿರದೆ, ಗೀತನಾಟಕ, ನೃತ್ಯ ರೂಪಕ ಮತ್ತು ಯಕ್ಷಗಾನದ ಬಗ್ಗೆ ಒಲವು ತೋರಿದವರು. ಈ ಸಂಶೋಧನಾ ಪ್ರಬಂದವು ಶಿವರಾಮ ಕಾರಂತರ ರಂಗಭೂಮಿಯ ಕುರಿತ ಚಿಂತನೆ ಮತ್ತು ಅವರ ವಿವಿಧ ರಂಗಪ್ರಯೋಗಗಳನ್ನು ಕೇಂದ್ರವಾಗಿರಿಸಿಕೊಂಡಿದೆ. ಸಾಂಪ್ರದಾಯಿಕ ರಂಗಭೂಮಿಯ ಮಿತಿಗಳನ್ನು ಮೀರಿ ಹೊಸ ರಂಗಭಾಷೆಯನ್ನು ರೂಪಿಸುವಲ್ಲಿ ಕಾರಂತರು ಕೈಗೊಂಡ ಪ್ರಯತ್ನಗಳನ್ನು ಇಲ್ಲಿ ವಿಶ್ಲೇಷಿಸಲಾಗುವುದು. ರಂಗಭೂಮಿಯು ಜನಸಾಮಾನ್ಯರೊಂದಿಗೆ ನೇರ ಸಂವಹನ ನಡೆಸುವ ಜೀವಂತ ಕಲಾಮಾಧ್ಯಮವಾಗಬೇಕು ಎಂಬ ಕಾರಂತರ ನಿಲುವು ಅವರ ರಂಗಪ್ರಯೋಗಗಳ ಪ್ರಮುಖ ಆಶಯವಾಗಿದೆ. 

Article Details

Section

Research Articles

Author Biography

ಮಮತಾ ಎಮ್.

ಉಪನ್ಯಾಸಕರು, ಮಿಲಾಗ್ರಿಸ್ ಕಾಲೇಜು, ಮಂಗಳೂರು.

How to Cite

ಮಮತಾ ಎಮ್. (2026). ಶಿವರಾಮ ಕಾರಂತರ ರಂಗಪ್ರಯೋಗಗಳು . ಅಕ್ಷರಸೂರ್ಯ (AKSHARASURYA), 17(06), 28 to 33. https://aksharasurya.com/index.php/latest/article/view/2393

References

ಶಿವರಾಮ ಕಾರಂತ ಕೆ., (2015), ಯಕ್ಷಗಾನ ಬಯಲಾಟ, ಬೆಂಗಳೂರು: ರವೀಂದ್ರ ಪುಸ್ತಕಾಲಯ.

ಶಿವರಾಮ ಕಾರಂತ ಕೆ., (2014), ಹುಚ್ಚು ಮನಸ್ಸಿನ ಹತ್ತು ಮುಖಗಳು, ಬೆಂಗಳೂರು: ಸ್ವಪ್ನ ಬುಕ್ ಹೌಸ್.

ಶಿವರಾಮ ಕಾರಂತ ಕೆ., (1968), ಗೀತಾನಾಟಕಗಳು, ಪುತ್ತೂರು: ಹರ್ಷ ಮುದ್ರಣ ಪ್ರಕಾಶನಾಲಯ.

ಶಿವರಾಮ ಕಾರಂತ ಕೆ.,(2015), ಯಕ್ಷಗಾನ, ಶಿವಮೊಗ್ಗ: ರವೀಂದ್ರ ಪುಸ್ತಕಾಲಯ.

ಮಂಜುನಾಥ್ ಹೆಚ್. ಭಟ್, (2022), ಅನುಭವದೊಂದಿಗೆ ಪ್ರಯೋಗ: ಡಾ. ಕೆ. ಶಿವರಾಮ ಕಾರಂತ, ಬೆಂಗಳೂರು: ಉತ್ಥಾನ (ರಾಷ್ಟ್ರೋತ್ಥಾನ ಸಾಹಿತ್ಯ).

ವಿಜಯಾ ಸುಬ್ಬರಾಜ್, (1995), ಕನ್ನಡ ಗೀತನಾಟಕಗಳ ಅಧ್ಯಯನ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.