ಕನ್ನಡ ಸಾಹಿತ್ಯದಲ್ಲಿ ದ. ರಾ. ಬೇಂದ್ರೆಯವರ ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗ

Main Article Content

ಪ್ರವೀಣ ಪೂಜಾರ

Abstract

ಕನ್ನಡ ಸಾಹಿತ್ಯದಲ್ಲಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಮುಖ್ಯವಾಗಿ ನವೋದಯ ಯುಗದ ಶ್ರೇಷ್ಠ ಕವಿಯಾಗಿ, ವಿಮರ್ಶಕರಾಗಿ, ಅನುವಾದಕರಾಗಿ ಪ್ರಸಿದ್ಧರಾಗಿದ್ದರೂ ಸಹ ನಾಟಕ ಸಾಹಿತ್ಯದಲ್ಲಿಯೂ ತಮ್ಮದೇ ಆದಂತಹ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಅವರ ನಾಟಕಗಳಲ್ಲಿ ಕಾವ್ಯಾತ್ಮಕ ಭಾಷೆ, ತಾತ್ವಿಕಚಿಂತನೆ, ಜನಪದ ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಪ್ರಜ್ಞೆಗಳನ್ನು ಒಳಗೊಂಡಿವೆ. ಬೇಂದ್ರೆಯವರ ನಾಟಕಗಳು ಕೇವಲ ಮನರಂಜನೆಯ ಉದ್ದೇಶವನ್ನು ಹೊಂದಿಲ್ಲದೆ, ಅವು ಮಾನವನ ಅಂತರಂಗ, ಬದುಕಿನ ಅರ್ಥ, ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ರಂಗಭಾಷೆಯ ಮೂಲಕ ಅಭಿವ್ಯಕ್ತಿಸುತ್ತವೆ. ಅವರು ರಚಿಸಿದ ನಾಟಕಗಳು ವಿಶೇಷವಾಗಿ ಸಾಯೋ ಆಟ, ಗೋಲ್, ತಿರುಕರ ಪಿಡುಗು, ಜಾತ್ರೆ, ಉದ್ದಾರ, ನಗೆಯ ಹೊಗೆ ಮುಂತಾದ ಕೃತಿಗಳು ಸಂಪ್ರದಾಯಬದ್ಧವಾದ ಪೌರಾಣಿಕ - ಐತಿಹಾಸಿಕ ನಾಟಕಗಳಿಗಿಂತಲೂ ಭಿನ್ನವಾಗಿ, ಆಂತರಿಕ ಸಂವೇದನೆ, ವ್ಯಂಗ್ಯ, ಸಮಾಜದ ಸಂಕೀರ್ಣತೆ ಮತ್ತು ರಂಗಭಾಷೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತವೆ. ರಂಗಪ್ರಯೋಗದ ದೃಷ್ಟಿಯಿಂದ ಬೇಂದ್ರೆಯವರು ಜನಪದ ಸಂಗೀತ, ಸಂಕೇತಾತ್ಮಕ ವೇದಿಕೆ, ಮನೋವೈಜ್ಞಾನಿಕ ಪಾತ್ರಚಿತ್ರಣ ಮತ್ತು ಕಾವ್ಯ - ನಾಟಕದ ಸಮನ್ವಯವನ್ನು ಯಶಸ್ವಿಯಾಗಿ ಬಳಸಿದ್ದಾರೆ. ಈ ಲೇಖನದಲ್ಲಿ ಬೇಂದ್ರೆಯವರ ನಾಟಕ ಸಾಹಿತ್ಯದ ಸ್ವರೂಪ, ಅದರ ವೈಶಿಷ್ಟ್ಯಗಳು ಹಾಗೂ ಕನ್ನಡ ರಂಗಭೂಮಿಗೆ ಅವರು ನೀಡಿದ ಕೊಡುಗೆಯನ್ನು ವಿಶ್ಲೇಷಿಸಲಾಗಿದೆ. 

Article Details

Section

Research Articles

Author Biography

ಪ್ರವೀಣ ಪೂಜಾರ

ಸಂಶೋಧನಾ ವಿದ್ಯಾರ್ಥಿ, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು.

How to Cite

ಪ್ರವೀಣ ಪೂಜಾರ. (2026). ಕನ್ನಡ ಸಾಹಿತ್ಯದಲ್ಲಿ ದ. ರಾ. ಬೇಂದ್ರೆಯವರ ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗ. ಅಕ್ಷರಸೂರ್ಯ (AKSHARASURYA), 17(06), 01 to 05. https://aksharasurya.com/index.php/latest/article/view/2389

References

ಬೇಂದ್ರೆ ದ. ರಾ., (1955), ಬೇಂದ್ರೆ ನಾಟಕಗಳು, ಧಾರವಾಡ: ಮನೋಹರ ಗ್ರಂಥಮಾಲಾ.

ಆಮೂರ ಜಿ. ಎಸ್., (1996), ಭುವನದ ಭಾಗ್ಯ, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.

ಕೀರ್ತಿನಾಥ ಕುರ್ತಕೋಟಿ, (1962), ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, ಧಾರವಾಡ: ಮನೋಹರ ಗ್ರಂಥಮಾಲಾ.

ವಾಮನ ಬೇಂದ್ರೆ, (2010), ಸಂವಾದ ಕಂಡ ಅಂದತ್ತ, ಹುಬ್ಬಳ್ಳಿ: ಡಾ. ದ. ರಾ. ಬೇಂದ್ರೆ ಸಂಶೋಧನಾ ಸಂಸ್ಥೆ, ಶ್ರೀಮಾತಾ ಪ್ರಕಾಶನ.

ಶೇಷಗಿರಿರಾವ್ ಎಲ್. ಎಸ್., (2002), ಹೊಸಗನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಅಂಕಿತ ಪುಸ್ತಕ.

ವಾಮನ ಬೇಂದ್ರೆ, (2008), ಅಂಬಿಕಾತನಯದತ್ತರ ಸಾಯೋ ಆಟ, ಹುಬ್ಬಳ್ಳಿ: ಡಾ. ದ. ರಾ. ಬೇಂದ್ರೆ ಸಂಶೋಧನಾ ಸಂಸ್ಥೆ, ಶ್ರೀಮಾತಾ ಪ್ರಕಾಶನ.

ವಾಮನ ಬೇಂದ್ರೆ, (2008), ಅಂಬಿಕಾತನಯದತ್ತರ ತಿರುಕರ ಪಿಡುಗು, ಹುಬ್ಬಳ್ಳಿ: ಡಾ. ದ. ರಾ. ಬೇಂದ್ರೆ ಸಂಶೋಧನಾ ಸಂಸ್ಥೆ, ಶ್ರೀಮಾತಾ ಪ್ರಕಾಶನ.

ತಿರುಮಲೇಶ್ ಕೆ. ವಿ., (2013), ಬೇಂದ್ರೆಯವರ ಕಾವ್ಯ ಶೈಲಿ, ಬೆಂಗಳೂರು: ಅಭಿನವ.