ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಗೃಹಲಕ್ಷ್ಮಿ ಯೋಜನೆ: ಒಂದು ಅಧ್ಯಯನ

Main Article Content

ಸೌಮ್ಯ ಜಿ.ಆರ್.

Abstract

ಮಹಿಳೆಯರ ಆರ್ಥಿಕ ಸಬಲೀಕರಣ ಎಂದರೆ ಮಹಿಳೆಯರಿಗೆ ಉದ್ಯೋಗ, ಆದಾಯ, ಶಿಕ್ಷಣ, ಕೌಶಲ್ಯ, ಆಸ್ತಿ, ಹಣಕಾಸಿನ ಸಂಪನ್ಮೂಲಗಳು ಮತ್ತು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಪ್ರಕ್ರಿಯೆ. ಇದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದ ಅಭಿವೃದ್ಧಿಯಲ್ಲಿ ಸಮಾನವಾಗಿ ಭಾಗವಹಿಸಲು ಸಹಾಯ ಮಾಡುತ್ತದೆ. ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟಿರುವ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರನ್ನು ಸಶಕ್ತಗೊಳಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ರಾಜ್ಯ ಸರ್ಕಾರವು 2007-08ರಿಂದಲೇ ಮಹಿಳಾ ಉದ್ದೇಶಿತ ಆಯವ್ಯಯ ಮಂಡಿಸುವ ಮೂಲಕ ಮಹಿಳೆಯರಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡುತ್ತಿರುವುದು ವಿಶೇಷ. ಮಹಿಳೆಯರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು ಸಮಾಜದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಮಹತ್ವದ ಹೆಜ್ಜೆಯಾಗಿದೆ. ಪ್ರಸ್ತುತ ಅಧ್ಯಯನವು ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಮಹತ್ವವನ್ನು ತಿಳಿಯುವುದಾಗಿದೆ. ಈ ಅಧ್ಯಯನಕ್ಕೆ ಪೂರಕವಾಗಿ ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮದ ಮಹಿಳೆಯರನ್ನು ಸಮಗ್ರವಾಗಿ ಆಯ್ಕೆಮಾಡಿಕೊಂಡು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ ಅಧ್ಯಯನವು ಮಹಿಳೆಯರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ಮೇಲೆ ಬೆಳಕು ಚೆಲ್ಲುತ್ತದೆ. 

Article Details

Section

Research Articles

Author Biography

ಸೌಮ್ಯ ಜಿ.ಆರ್.

ಸಹ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಿಹರ.

How to Cite

ಸೌಮ್ಯ ಜಿ.ಆರ್. (2026). ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಗೃಹಲಕ್ಷ್ಮಿ ಯೋಜನೆ: ಒಂದು ಅಧ್ಯಯನ . ಅಕ್ಷರಸೂರ್ಯ (AKSHARASURYA), 17(05), 224 to 233. https://aksharasurya.com/index.php/latest/article/view/2386

References

ಕೃಷ್ಣಮೂರ್ತಿ ಹೊಸಬೀಡು ಎಚ್.ಆರ್., (2007-08), ಭಾರತದ ಆರ್ಥಿಕ ಅಭಿವೃದ್ಧಿ, ಬೆಂಗಳೂರು: ಸಪ್ನ ಬುಕ್ ಹೌಸ್.

ಕೃಷ್ಣಯ್ಯಗೌಡ ಎಚ್. ಆರ್, (2012), ಅಭಿವೃದ್ಧಿ ಅರ್ಥಶಾಸ್ತ್ರ, ಗದಗ: ವಿದ್ಯಾನಿಧಿ ಪ್ರಕಾಶನ.

ಕೃಷ್ಣಯ್ಯಗೌಡ ಎಚ್. ಆರ್., (2013), ಭಾರತೀಯ ಆರ್ಥಿಕತೆ, ಗದಗ: ವಿದ್ಯಾನಿಧಿ ಪ್ರಕಾಶನ.

ರಾಮ್ ಅಹುಜಾ, (2018), ರೀಸರ್ಚ್ ಮೆಥಡ್ಸ್, ನವದೆಹಲಿ: ರಾವತ್ ಪಬ್ಲಿಕೇಷನ್ಸ್.

ಲಾಲ್ ದಾಸ್ ಡಿ.ಕೆ., (2014), ಪ್ರಾಕ್ಟೀಸ್ ಆಫ್ ಸೋಷಿಯಲ್ ರೀಸರ್ಚ್, ನವದೆಹಲಿ: ರಾವತ್ ಪಬ್ಲಿಕೇಷನ್ಸ್.