ಪರಿಸರ ಕಾಳಜಿ ಹವಾಮಾನ ಬದಲಾವಣೆಯ ವಿಚಾರಗಳು

Main Article Content

ಡಾ. ಶಶಿಕಲಾ ಯು.

Abstract

ಮಾನವನ ಅತಿಯಾದ ಕೈಗಾರಿಕೀಕರಣ, ನಗರೀಕರಣ ಮತ್ತು ಪ್ಲಾಸ್ಟಿಕ್ ಬಳಕೆಯಂತಹ ಅವೈಜ್ಞಾನಿಕ ಚಟುವಟಿಕೆಗಳು ಪ್ರಕೃತಿಯ ಸಮತೋಲನವನ್ನು ತೀವ್ರವಾಗಿ ಕದಡುತ್ತಿವೆ. ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ, ಮೇಘಸ್ಫೋಟ, ಭೂಕುಸಿತ ಹಾಗೂ ಮರುಭೂಮೀಕರಣದಂತಹ ವಿನಾಶಕಾರಿ ಪ್ರಾಕೃತಿಕ ವಿಕೋಪಗಳು ಎದುರಾಗುತ್ತಿವೆ. ಪಶ್ಚಿಮಘಟ್ಟಗಳ ನಾಶ, ಅರಣ್ಯನಾಶ ಹಾಗೂ ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯು ಜೈವಿಕ ಆಹಾರ ಸರಪಳಿಯನ್ನು ಕತ್ತರಿಸಿ ಜೀವಸಂಕುಲವನ್ನು ಅಳಿವಿನಂಚಿಗೆ ನೂಕಿದೆ. ಸಮಸ್ತ ಜೀವಿಗಳಿಗೂ ಆಸರೆಯಾಗಿರುವ ಏಕೈಕ ಗ್ರಹವಾದ ಭೂಮಿಯನ್ನು ರಕ್ಷಿಸಿಕೊಳ್ಳಲು ಪರಿಸರ ಜಾಗೃತಿ ಇಂದು ಅತ್ಯಗತ್ಯವಾಗಿದೆ. ಇಂಗಾಲದ ಹೊರಸೂಸುವಿಕೆ ತಗ್ಗಿಸುವುದು, ಪರಿಸರ ಸ್ನೇಹಿ ವಾಹನಗಳ ಬಳಕೆ, ಕಾಡುಗಳ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಿಸುವ ಮೂಲಕ ನಾವು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಇಡೀ ಜೀವಜಾಲವೇ ನಾಶವಾಗುವ ಅಪಾಯವಿದೆ. ಆದ್ದರಿಂದ, ಪರಿಸರ ಕಾಳಜಿ ಬೆಳೆಸಿಕೊಂಡು ಭೂಮಿಯ ನೈಸರ್ಗಿಕ ಸಮತೋಲನವನ್ನು ಕಾಪಾಡುವುದು ಪ್ರತಿಯೊಬ್ಬರ ತುರ್ತು ಜವಾಬ್ದಾರಿಯಾಗಿದೆ ಎನ್ನುವುದನ್ನು ಇಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಡಾ. ಶಶಿಕಲಾ ಯು.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸೈಂಟ್ ಕ್ಲಾರೆಟ್ ಕಾಲೇಜು (ಸ್ವಾಯತ್ತ), ಜಾಲಹಳ್ಳಿ, ಬೆಂಗಳೂರು.

How to Cite

ಶಶಿಕಲಾ ಯು. (2026). ಪರಿಸರ ಕಾಳಜಿ ಹವಾಮಾನ ಬದಲಾವಣೆಯ ವಿಚಾರಗಳು. ಅಕ್ಷರಸೂರ್ಯ (AKSHARASURYA), 17(05), 168 to 177. https://aksharasurya.com/index.php/latest/article/view/2381

References

ನಾಗೇಶ ಹೆಗಡೆ, (2018), ಸೈನ್ಸ್ ಮತ್ತು ಪರಿಸರ ಸಿಂಚನ, ಬೆಂಗಳೂರು: ಭೂಮಿ ಬುಕ್ಸ್.

ನಾಗೇಶ ಹೆಗಡೆ, (2021), ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಾಗತ, ಬೆಂಗಳೂರು: ಭೂಮಿ ಬುಕ್ಸ್.

ನಾಗೇಶ ಹೆಗಡೆ, (2016), ಭೋಗ ಪ್ರಳಯ, ಬೆಂಗಳೂರು: ಭೂಮಿ ಬುಕ್ಸ್.