ಅಂಬಿಗರ ಚೌಡಯ್ಯ

Main Article Content

ಡಾ. ಭಾಗ್ಯಜ್ಯೋತಿ

Abstract

೧೨ನೇ ಶತಮಾನದ ಕಲ್ಯಾಣ ಕ್ರಾಂತಿ ಮತ್ತು ವಚನ ಚಳುವಳಿಯಲ್ಲಿ ಅಗ್ರಗಣ್ಯ ಶರಣರಾಗಿದ್ದ ಅಂಬಿಗರ ಚೌಡಯ್ಯನವರ ಬದುಕು, ಬರಹ ಹಾಗೂ ಸಮಾಜಮುಖಿ ಚಿಂತನೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಅನುಭವ ಮಂಟಪದಲ್ಲಿ ‘ನಿಜಶರಣ’ ಎಂಬ ಬಿರುದಿಗೆ ಪಾತ್ರರಾಗಿದ್ದ ಇವರು, ತಮ್ಮ ಕಾಯಕ ನಿಷ್ಠೆ ಮತ್ತು ದಿಟ್ಟತನದ ವಚನಗಳ ಮೂಲಕ ಮೂಢನಂಬಿಕೆ, ವೈದಿಕತೆ ಹಾಗೂ ಜಾತೀಯತೆಯನ್ನು ಕಟುವಾಗಿ ಟೀಕಿಸಿದರು. ಮನುಷ್ಯನ ದೇಹದ ಅಂಗಾಂಗಗಳಿಗೆ ೧೮ ಜಾತಿಗಳನ್ನು ಸಮೀಕರಿಸಿ ಜಾತಿ ಪದ್ಧತಿಯನ್ನು ಸಮಾಜದಿಂದ ಬೇರುಸಹಿತ ಕೀಳಲು ಅವರು ಬಳಸಿದ ರೂಪಕ ವಿಧಾನ ಅತ್ಯಂತ ವಿಶಿಷ್ಟವಾದದ್ದು. ವಚನ ಸಾಹಿತ್ಯದ ರಕ್ಷಣೆಯಲ್ಲಿ ವೀರ ಗಣಾಚಾರಿಯಾಗಿ ಹೋರಾಡಿದ ಚೌಡಯ್ಯನವರ ಕಾಲ, ಜನ್ಮಸ್ಥಳ, ಕಾಯಕ ಮತ್ತು ಶರಣ ಧರ್ಮದ ಪ್ರಚಾರಕ್ಕಾಗಿ ಅವರು ನೀಡಿದ ಅಪಾರ ಕೊಡುಗೆಯನ್ನು ಐತಿಹಾಸಿಕ ಹಿನ್ನೆಲೆ ಹಾಗೂ ಅವರ ವಚನಗಳ ಆಧಾರದ ಮೇಲೆ ಸಮಗ್ರವಾಗಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಡಾ. ಭಾಗ್ಯಜ್ಯೋತಿ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕಲಬುರಗಿ.

How to Cite

ಭಾಗ್ಯಜ್ಯೋತಿ. (2026). ಅಂಬಿಗರ ಚೌಡಯ್ಯ. ಅಕ್ಷರಸೂರ್ಯ (AKSHARASURYA), 17(05), 111 to 115. https://aksharasurya.com/index.php/latest/article/view/2373

References

ಗುರುಲಿಂಗಪ್ಪ ಧಬಾಲೆ, (2018), ಅಂಬಿಗರ ಚೌಡಯ್ಯ, ಬಸವಕಲ್ಯಾಣ: ಪ್ರಸಾರಾಂಗ, ವಚನ ವಿಶ್ವವಿದ್ಯಾಲಯ ಅನುಭವ ಮಂಟಪ.

ಬಸವರಾಜ ಸಬರದ, (2022), ಶರಣರ ಧಾರ್ಮಿಕ ಸಿದ್ದಾಂತಗಳು, ಭಾಲ್ಕಿ: ಬಸವಧರ್ಮ ಪ್ರಸಾರ ಸಂಸ್ಥೆ.