ಯುವ ಜನತೆ ಮತ್ತು ಸಾಮಾಜಿಕ ಮಾಧ್ಯಮ ಒಂದು ಅಧ್ಯಯನ

Main Article Content

ಡಾ. ನಯಾಜ್ ಅಹ್ಮದ್

Abstract

ಸಾಮಾಜಿಕ ಮಾಧ್ಯಮ ಎಂಬುದು ಆಧುನಿಕ ಸಮೂಹ ಮಾಧ್ಯಮಗಳ ಪ್ರಕಾರಗಳಲ್ಲೊಂದು. ಸಮೂಹ ಮಾಧ್ಯಮಗಳ ಪ್ರಕಾರಗಳಲ್ಲಿ ಇತ್ತೀಚಿನದಾಗಿದ್ದರೂ ಜಗತ್ತಿನಾದ್ಯಂತ ಮಿಲಿಯಾಂತರ ಜನರ ಮೇಲೆ ಮೋಡಿ ಮಾಡಿರುವ ಹಾಗೂ ಮೋಹಕ ಪ್ರಭಾವ ಬೀರಿರುವ ಖ್ಯಾತಿ ಅದಕ್ಕಿದೆ. ದಿನದಿಂದ ದಿನಕ್ಕೆ ಅದನ್ನು ಬಳಕೆ ಮಾಡುತ್ತಿರುವವರ ಸಂಖ್ಯೆ ಒಂದೇ ಸಮನೆ ಏರುತ್ತಲಿದೆ. “ಸೋಷಿಯಲ್ ಮೀಡಿಯಾ” ಆವಿಷ್ಕಾರವಾದದ್ದೇ ಒಂದೆರಡು ದಶಕಗಳ ಇತ್ತೀಚೆಗೆ. ಅರ್ಥಾತ್ 21ನೇ ಶತಮಾನದ ಆರಂಭದಿಂದ ಎನ್ನಬಹುದು.
ಪ್ರಸ್ತುತ ಅಧ್ಯಯನವು ಯುವ ಜನತೆಯ ಮೇಲೆ ಸಮೂಹ ಮಾಧ್ಯಮಗಳ ಪ್ರಭಾವವನ್ನು ತಿಳಿಯುವುದಾಗಿದೆ. ಈ ಅಧ್ಯಯನಕ್ಕೆ ಪೂರಕವಾಗಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಅಜ್ಜಂಪುರ ಪಟ್ಟಣದ 50 ಜನ ಯುವಕರನ್ನು ಆಯ್ಕೆಮಾಡಿಕೊಂಡು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ ಅಧ್ಯಯನವು ಯುವ ಜನತೆಯ ಮೇಲೆ ಸಮೂಹ ಮಾಧ್ಯಮಗಳ ಪ್ರಭಾವದ ಕುರಿತು ಬೆಳಕು ಚೆಲ್ಲುವುದಾಗಿದೆ.

Article Details

Section

Research Articles

Author Biography

ಡಾ. ನಯಾಜ್ ಅಹ್ಮದ್

ಸಹ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ.

How to Cite

ನಯಾಜ್ ಅಹ್ಮದ್. (2026). ಯುವ ಜನತೆ ಮತ್ತು ಸಾಮಾಜಿಕ ಮಾಧ್ಯಮ ಒಂದು ಅಧ್ಯಯನ. ಅಕ್ಷರಸೂರ್ಯ (AKSHARASURYA), 17(05), 93 to 100. https://aksharasurya.com/index.php/latest/article/view/2371

References

ರಾಮ್ ಅಹುಜಾ, (2010), ಸೋಷಿಯಲ್ ಪ್ರಾಬ್ಲಮ್ಸ್ ಇನ್ ಇಂಡಿಯಾ, ಜೈಪುರ: ರಾವತ್ ಪಬ್ಲಿಕೇಷನ್ಸ್.

ವಿನಿತಾ ಪಾಂಡೆ, (2016), ಇಂಡಿಯನ್ ಸೊಸೈಟಿ ಅಂಡ್ ಕಲ್ಚರ್, ಜೈಪುರ: ರಾವತ್ ಪಬ್ಲಿಕೇಷನ್ಸ್.

ರಾಮ್ ಅಹುಜಾ, (2018), ರಿಸರ್ಚ್ ಮೆಥೆಡ್ಸ್, ಜೈಪುರ: ರಾವತ್ ಪಬ್ಲಿಕೇಷನ್ಸ್.

ಶಂಕರ್ ರಾವ್ ಚ.ನ., (2022-23), ದೈನಂದಿನ ಜೀವನದ ಸಮಾಜಶಾಸ್ತ್ರ, ಮಂಗಳೂರು: ಜೈ ಭಾರತ್ ಪ್ರಕಾಶನ.

ಶಂಕರ್ ರಾವ್ ಚ.ನ., (2023-24), ಅಂಚೀಕರಣಗೊಂಡ ಸಮೂಹಗಳ ಸಮಾಜಶಾಸ್ತ್ರ, ಮಂಗಳೂರು: ಜೈ ಭಾರತ್ ಪ್ರಕಾಶನ.