ಕನಕದಾಸರ ಸಾಹಿತ್ಯ ಕೃತಿಗಳಲ್ಲಿ ಸಾಮಾಜಿಕ ಮೌಲ್ಯಗಳು ಮತ್ತು ಪ್ರಸ್ತುತತೆ
Main Article Content
Abstract
ಕನ್ನಡದ ಪ್ರಮುಖ ಸಂತ ಕವಿ ದಾರ್ಶನಿಕ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಹದಿನಾರನೇ ಶತಮಾನದಲ್ಲಿಯೇ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದವರು. ಜಾತಿ ಪದ್ಧತಿ, ವರ್ಗ ತಾರತಮ್ಯ ಹಾಗೂ ಮೌಢ್ಯಗಳನ್ನು ಕಟುವಾಗಿ ಖಂಡಿಸಿದ ಅವರು, ‘ರಾಮಧಾನ್ಯ ಚರಿತೆ’ಯಂತಹ ಕೃತಿಗಳ ಮೂಲಕ ಸಾಮಾಜಿಕ ನ್ಯಾಯ, ಶ್ರಮಿಕ ವರ್ಗದ ಮಹತ್ವ ಮತ್ತು ಸಮಾನತೆಯನ್ನು ಗಟ್ಟಿಯಾಗಿ ಪ್ರತಿಪಾದಿಸಿದರು. ಹುಟ್ಟಿದ ಕುಲಕ್ಕಿಂತ ವ್ಯಕ್ತಿಯ ಸಾಧನೆ ಹಾಗೂ ಆಂತರಿಕ ಶುದ್ಧಿಯೇ ಮನುಷ್ಯನನ್ನು ಶ್ರೇಷ್ಠನನ್ನಾಗಿಸುತ್ತದೆ ಎಂದು ಸಾರಿದರು. ಕಂದಾಚಾರ ಮತ್ತು ಬಾಹ್ಯ ಆಡಂಬರಗಳಿಗಿಂತ ನೈಜ ಭಕ್ತಿ, ಮಾನವೀಯತೆಗೆ ಒತ್ತು ನೀಡಿದ ಅವರ ಚಿಂತನೆಗಳು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ. ಇಂದಿನ ಆಧುನಿಕ ಸಮಾಜದಲ್ಲಿ ವ್ಯಾಪಕವಾಗಿರುವ ಜಾತಿ ದ್ವೇಷ, ಅಸೂಯೆ ಮತ್ತು ಸ್ವಾರ್ಥಗಳ ನಡುವೆ, ಸಮಾನತೆಯ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕನಕದಾಸರ ವೈಚಾರಿಕ ಸಾಹಿತ್ಯವು ಇಂದಿಗೂ ದಾರಿದೀಪವಾಗಿ ಅತ್ಯಂತ ಪ್ರಸ್ತುತವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶ್ರೀರಾಮ ಅಚನೂರು, (2011), ಕನಕದಾಸರ ಚಿಂತನೆಯ ನೆಲೆ ಮತ್ತು ದರ್ಶನ, ಬಾಗಲಕೋಟೆ: ಗಗನ ಪ್ರಕಾಶನ.
ಶಿವಾನಂದ ಕೆಳಗಿನಮನಿ, (2015), ಕನಕದಾಸರ ಕೀರ್ತನೆಗಳ ಸಾಂಸ್ಕೃತಿಕ ಅನನ್ಯತೆ, ಬೆಂಗಳೂರು: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್.
ಚಿಕ್ಕಣ್ಣ ಕಾ.ತ., (2012), ಕನಕ ಕಿರಣ, ಬೆಂಗಳೂರು: ಶ್ರೀ ಮಾಲತೇಶ್ ಪ್ರಕಾಶನ.
ಶಿವರಾಮ ಶೆಟ್ಟಿ ಬಿ. (ಸಂ), (2018), ಕನಕ ಚಿಂತನ (2007-2008), ಮಂಗಳಗಂಗೋತ್ರಿ: ಕನಕದಾಸ ಸಂಶೋಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ.
ಶಿವರಾಮ ಶೆಟ್ಟಿ ಬಿ. (ಸಂ), (2010), ಕನಕ ಚಿಂತನ (2009-2010), ಮಂಗಳಗಂಗೋತ್ರಿ: ಕನಕದಾಸ ಸಂಶೋಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ.
ಪಾವಂಜೆ ಗುರುರಾವ್ (ಸಂ), (2011), ಕನಕದಾಸರ ಕೀರ್ತನೆ, ಮಂಗಳೂರು: ಆಕೃತಿ ಪ್ರಕಾಶನ.
ಶಿವರಾಮ ಶೆಟ್ಟಿ ಬಿ. (ಸಂ), (2013), ಕನಕನ ಸುತ್ತಮುತ್ತ: ಸಂಕಥನಗಳ ಜಿಜ್ಞಾಸೆ, ಮಂಗಳಗಂಗೋತ್ರಿ: ಕನಕದಾಸ ಸಂಶೋಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ.