ಭಾರತದಲ್ಲಿ ಸ್ಥಳೀಯ ಆಡಳಿತ ಮತ್ತು ಮಾಹಿತಿ ಹಕ್ಕು ಕಾಯ್ದೆ
Main Article Content
Abstract
ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಪ್ರಾಚೀನ ಕಾಲದ ಪಂಚಾಯತ್ ರಾಜ್ ಸಂಸ್ಥೆಗಳ ರಚನೆ, ಅಧಿಕಾರ, ಆಡಳಿತವೆಲ್ಲವೂ ಗ್ರಾಮಗಳಿಂದ ಆಯ್ಕೆಯಾದ ಹಿರಿಯ ಮುಖಂಡರುಗಳನ್ನು ಅವಲಂಬಿಸಿತ್ತು. ಋಗ್ವೇದ ಕಾಲದಲ್ಲಿ ಜನ್ಮ (ಹಳ್ಳಿಗಳು) ವಿಷ (ಬ್ಲಾಕ್) ಮತ್ತು ಜ್ಞಾನಷ್ ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದ್ದು, ಗ್ರಾಮವು ಆಡಳಿತದ ಪ್ರಮುಖ ಕೇಂದ್ರಬಿಂದುವಾಗಿತ್ತು. ಗ್ರಾಮದ ಮುಖ್ಯಸ್ಥನ ನಿರ್ದೇಶನ ಮತ್ತು ಆತನ ನಿಯಂತ್ರಣದಲ್ಲಿಯೂ ಇಡೀ ಗ್ರಾಮದ ಆಡಳಿತ ನಡೆಯುತ್ತಲಿದ್ದು, ಗ್ರಾಮದ ಉಸ್ತುವಾರಿ ನಡೆಸುವುದು, ಸೈನ್ಯದ ನಿರ್ವಹಣೆ, ಸರ್ಕಾರದ ತೆರಿಗೆಯನ್ನು ಸಂಗ್ರಹಿಸುವುದು, ಅಗತ್ಯ ದಾಖಲೆಗಳನ್ನು ರಕ್ಷಿಸುವ ಕಾರ್ಯಗಳನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸ್ಥಳೀಯ ಜನರಿಗೂ ಆದ್ಯತೆ ನೀಡಿ, ಎಲ್ಲರೂ ಆಡಳಿತದಲ್ಲಿ ಭಾಗವಹಿಸುವಂತಾಗಲು ಮತ್ತು ಸ್ಥಳೀಯ ಆಡಳಿತದ ಬಗ್ಗೆ ಅರಿವನ್ನು ಪಡೆದುಕೊಳ್ಳುವ ಸಲುವಾಗಿ ಸಂವಿಧಾನದಲ್ಲಿ ಸೂಕ್ತ ಅವಕಾಶವನ್ನು ಕಲ್ಪಿಸಲಾಯಿತು. ಹಾಗೆಯೇ ಅಧಿಕಾರ ವಿಕೇಂದ್ರೀಕರಣ ತತ್ವದ ಪರಿಣಾಮಕಾರಿ ಅನುಷ್ಠಾನದಿಂದಾಗಿ ಇಂದು ಎಲ್ಲರೂ ಸ್ಥಳೀಯ ಆಡಳಿತದಲ್ಲಿ ತಮ್ಮದೇ ಆದ ಭಾಗವಹಿಸುವಿಕೆಯನ್ನು ಕಾಣಲು ಸಾಧ್ಯವಾಗಿದೆ. ಸ್ಥಳೀಯ ಆಡಳಿತದಲ್ಲಿ ನಾಗರೀಕರಿಗೆ ಸುಲಭವಾಗಿ ಮಾಹಿತಿ ದೊರೆಯುವಂತೆ ಮಾಡುವುದು, ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಹಾಗೂ ಆಡಳಿತದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಮೂಲಕ ನೌಕರಶಾಹಿ ವರ್ಗಗಳಲ್ಲಿ ಹೊಣೆಗಾರಿಕೆಯನ್ನು ಮೂಡಿಸುವುದು ಕಾನೂನಿನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಲೇಖನದಲ್ಲಿ ಹಲವಾರು ಉದ್ದೇಶಗಳು ಸಫಲವಾಗಲು ಮಾಹಿತಿ ಹಕ್ಕು ಕಾಯಿದೆಯು ಪರಿಣಾಮಕಾರಿಯಾಗಿ ಅನುಷ್ಠಾನವಾಗುವುದನ್ನು ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಂದ್ರಶೇಖರ್ ಕೆ., (2009), ಅಭಿವೃದ್ಧಿ ಪಥದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು, ಬೆಂಗಳೂರು: ದೀಪ ಪಬ್ಲಿಕೇಶನ್ಸ್.
ಶಂಕರ್‌ರಾವ್ ಚ.ನ., (2014-15), ಭಾರತದಲ್ಲಿ ಗ್ರಾಮೀಣ ಅಭಿವೃದ್ಧಿ, ಮಂಗಳೂರು: ಜೈಭಾರತ್ ಪ್ರಕಾಶನ.
ಸುರೇಶ್ ಕೆ.ಎಂ., (2015), ಭಾರತದ ಸಂವಿಧಾನ, ಬೆಂಗಳೂರು: ಸ್ಪರ್ಧಾ ವಿಜೇತ ಪ್ರಕಾಶನ.
ಹಾಲಪ್ಪ ಎನ್., (2010), ಸಾರ್ವಜನಿಕ ಆಡಳಿತ, ಎಂ.ಇ.ಎಸ್. ಗುರುಕುಲ ಪಬ್ಲಿಕೇಶನ್ಸ್.
ಮಧುಸೂದನ ಕೆ.ವಿ. ಮತ್ತು ಮಂಜಪ್ಪ ಸಿ.ಎನ್., (2006), ಮಾಹಿತಿ ಹಕ್ಕು ಅಧಿನಿಯಮ-2005, ಬೆಂಗಳೂರು: ಸಿರಿ ಸವಿ ಕನ್ನಡ ಕಾನೂನು ಪುಸ್ತಕ ಪ್ರಕಾಶನ.
ಶೇಖರ್ ಡಿ. ಸಜ್ಜನರ, (2019), ಮಾಹಿತಿ ಹಕ್ಕು ಅಧಿನಿಯಮ, 2005–ಒಂದು ವಿಶ್ಲೇಷಣೆ, ಗದಗು: ವಿಕ್ರಂ ಪ್ರಕಾಶನ.
Mukesh Sharma, Panchayati Raj System and Empowerment, Jaipur.
Ministry of Law and Justice (Government of India), (2005), The Right to Information Act, 2005, New Delhi: Ministry of Law and Justice.
Abhe Singh Yadav, (2008), Right to Information Act 2005: An Analysis, New Delhi: Central Law publications.
Harsha Mandar and Abha Singhal Joshi, (2001), The Movement for Right to Information in India: Peoples Power for the Control of Corruption, New Delhi: Commonwealth Human Rights initiative.