ಕುವೆಂಪು ಕವಿತೆಗಳಲ್ಲಿ ಪುರಾಣ ಮತ್ತು ಸ್ತ್ರೀ

Main Article Content

ಆಶಾ ಎನ್.ಆರ್.
ಡಾ. ಟಿ.ಎನ್. ವಾಸುದೇವಮೂರ್ತಿ

Abstract

ಇಪ್ಪತ್ತನೇ ಶತಮಾನದ ಕವಿ ಕುವೆಂಪು ತಮ್ಮ ವೈಚಾರಿಕ ಚಿಂತನೆಗಳು, ಸಾಮಾಜಿಕ ಕಳಕಳಿಗೆ ಹೆಸರಾದವರು. ಪಾಶ್ಚಾತ್ಯ ಸಾಹಿತ್ಯ, ತತ್ವಶಾಸ್ತ್ರವನ್ನು ಓದಿಕೊಂಡು ಆಧುನಿಕತೆಗೆ ತೆರೆದುಕೊಂಡಿದ್ದವರು. ಕುವೆಂಪು ತಮ್ಮ ಕಾಲದ ಪಲ್ಲಟಗಳಿಗೆ ಸಾಹಿತ್ಯಿಕ ಸ್ಪಂದನ ನೀಡಿ ಭೂತವನ್ನು ವರ್ತಮಾನದ ಸಂಗತಿಗಳಿಗನುಸಾರ ಸೂಕ್ಷ್ಮ ದೃಷ್ಟಿಯಿಂದ ಸಂವೇದಿಸಿದ ವಿಶ್ವಪ್ರಜ್ಞೆಯ ಲೇಖಕರು. ಕುವೆಂಪು ಚಿಂತನೆಯಲ್ಲಿ ಸ್ತ್ರೀಯರ ಸ್ಥಾನಮಾನದ ಅವಲೋಕನ, ಅವರ ಕವಿತೆಗಳಲ್ಲಿ ಸ್ತ್ರೀ ಸಂವೇದನೆಯು ಮೂಡಿಬಂದಿರುವ ಬಗೆಯನ್ನು ಅರಿಯುವುದು ಈ ಲೇಖನದ ಉದ್ದೇಶ. ಇಲ್ಲಿ ಪುರಾಣ ಎಂದರೆ ಹಳೆಯ ವಸ್ತು, ಮೌಲ್ಯ, ವಿಚಾರ, ಪಾತ್ರಗಳು, ಪ್ರಸಂಗಗಳೆಂದು ಪರಿಗಣಿಸಲಾಗಿದೆ. ಹಳೆಯ ಮೌಲ್ಯಗಳ ಸ್ವೀಕರಣ, ಹಳೆಯ ಮೌಲ್ಯಗಳ ನಿರಾಕರಣ, ಪುರಾಣ ಸ್ತ್ರೀ ಪ್ರತಿಮೆಗಳ ಆದರ್ಶದ ಚಿತ್ರಣ ಎಂಬ ನೆಲೆಗಳಲ್ಲಿ ಸ್ತ್ರೀಯರ ಕುರಿತಾದ ಕುವೆಂಪು ದೃಷ್ಟಿಕೋನವನ್ನು ಮತ್ತು ಅವರ ಕವಿತೆಗಳಲ್ಲಿ ಪುರಾಣ ಪ್ರಜ್ಞೆಗೆ ಸ್ತ್ರೀ ರೂಪಕಗಳು ಹೇಗೆ ಎದುರಾಗುತ್ತವೆ ಎಂಬುದರ ಪರಿಶೀಲನೆ ಈ ಲೇಖನದಲ್ಲಿದೆ.

Article Details

Section

Research Articles

Author Biographies

ಆಶಾ ಎನ್.ಆರ್.

ಸಂಶೋಧನಾರ್ಥಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ.

ಡಾ. ಟಿ.ಎನ್. ವಾಸುದೇವಮೂರ್ತಿ

ಪ್ರಾಧ್ಯಾಪಕರು, ಕನ್ನಡ ವಿಭಾಗ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ.

How to Cite

ಆಶಾ ಎನ್.ಆರ್., & ಟಿ.ಎನ್. ವಾಸುದೇವಮೂರ್ತಿ. (2026). ಕುವೆಂಪು ಕವಿತೆಗಳಲ್ಲಿ ಪುರಾಣ ಮತ್ತು ಸ್ತ್ರೀ. ಅಕ್ಷರಸೂರ್ಯ (AKSHARASURYA), 17(05), 07 to 18. https://aksharasurya.com/index.php/latest/article/view/2362

References

ರಾಮೇಗೌಡ, (2015), ಕುವೆಂಪು ಅಧ್ಯಯನ ಆಯಾಮ, ಮಂಡ್ಯ: ಕರ್ನಾಟಕ ಸಂಘ, ಪು.ಸಂ. 220.

ಹೆಚ್.ಎಸ್. ಶ್ರೀಮತಿ, (2020), ಜನಸಾಮಾನ್ಯರಿಗೆ ಸ್ತ್ರೀವಾದ - ಭಾಗ 11, ಆನ್‌ಲೈನ್: ಋತುಮಾನ (ಯೂಟ್ಯೂಬ್ ಚಾನೆಲ್).

ಕುವೆಂಪು, (2017), ನೆನಪಿನ ದೋಣಿಯಲ್ಲಿ (ಕುವೆಂಪು ಸಮಗ್ರ ಗದ್ಯ ಸಂಪುಟ - 5), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 797.

ಕುವೆಂಪು, (2017), ಮನೆ ಮನೆಯ ತಪಸ್ವಿನಿಗೆ - ಇಕ್ಷುಗಂಗೋತ್ರಿ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 2), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 80.

ಸಿ.ಪಿ.ಕೆ., (2012), ಕುವೆಂಪು ಸಾಹಿತ್ಯ ಸಂವಾದ, ಮೈಸೂರು: ಪ್ರಸಾರಾಂಗ, ಮಾನಸಗಂಗೋತ್ರಿ, ಪು.ಸಂ. 150.

ಕುವೆಂಪು, (2017), ನಾಗಿ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 2), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 608.

ಕುವೆಂಪು, (2017), ಕುಮುದಿನಿ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 2), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 668.

ಪಾಟಣಕರ ಚಂದ್ರಶೇಖರಭಟ್ಟ (ಅನು.), (1954), ಮಾರ್ಕಂಡೇಯ ಪುರಾಣಂ, ಮೈಸೂರು: ಶ್ರೀ ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್, ಪು.ಸಂ. 328.

ಪಾಟಣಕರ ಚಂದ್ರಶೇಖರಭಟ್ಟ (ಅನು.), (1954), ಮಾರ್ಕಂಡೇಯ ಪುರಾಣಂ, ಮೈಸೂರು: ಶ್ರೀ ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್, ಪು.ಸಂ. 330.

ಕುವೆಂಪು, (2017), ಭೈರವನಾರಿ - ಪಾಂಚಜನ್ಯ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 1), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 125.

ತಾರಿಣಿ ಶುಭದಾಯಿನಿ, (2024), ಪ್ರೇಮೋಪನಿಷತ್ತು (ಸಾಹಿತ್ಯ), ಆನ್‌ಲೈನ್: ಚಿಲುಮೆ - ಕನ್ನಡ ನಲ್ಬರಹ ತಾಣ (ಡಿಜಿಟಲ್).

ಕುವೆಂಪು, (2017), ಜೇನಾಗುವಾ! (ಕುವೆಂಪು ಸಮಗ್ರ ಕಾವ್ಯ, ಸಂಪುಟ -1), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 917.

ಕುವೆಂಪು, (2017), ಸ್ವರ್ಗದ್ವಾರದಿ ಯಕ್ಷಪ್ರಶ್ನೆ - ಅನುತ್ತರಾ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 2), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 228.

ಕುವೆಂಪು, (2017), ಸತಿ - ಹೊನ್ನ ಹೊತ್ತಾರೆ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 2), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 539.

ಕುವೆಂಪು, (2017), ಬಾಲ ವಿಧವೆ - ಹೊನ್ನ ಹೊತ್ತಾರೆ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 2), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 551.

ಟಿ.ಎಸ್. ವೆಂಕಣ್ಣಯ್ಯ, (1948), ಪ್ರಾಚೀನ ಸಾಹಿತ್ಯ - ಕಾವ್ಯದ ಅನಾದರ, ಮೈಸೂರು: ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್, ಪು.ಸಂ. 79.

ಕುವೆಂಪು, (2017), ಊರ್ಮಿಳಾದೇವಿ - ಕೃತ್ತಿಕೆ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 1), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 484.

ಕುವೆಂಪು, (2017), ಹೋಮರ್ - ಕೃತ್ತಿಕೆ (ಕುವೆಂಪು ಸಮಗ್ರ ಕಾವ್ಯ, ಸಂಪುಟ - 1), ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಪು.ಸಂ. 485.