ಪಂಪ-ರನ್ನರ ಕಾವ್ಯಗಳಲ್ಲಿ ರಸ ಪ್ರಜ್ಞೆ
Main Article Content
Abstract
ವಿಶ್ವ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯದ ಪರಮ ಕೊಡುಗೆ ಎಂದರೆ ರಸ ಸಿದ್ಧಾಂತ. ಕಾವ್ಯಕ್ಕೆ ರಸವೇ ಚಕ್ರವರ್ತಿ. ಈ ರಸ ಸಿದ್ಧಾಂತವನ್ನು ಪ್ರತಿಪಾದಿಸಿದ ಪ್ರಥಮ ಅಲಂಕಾರಿಕ ಭರತ. ಹೀಗಾಗಿ ಭಾರತೀಯ ಕಾವ್ಯಮೀಮಾಂಸೆಯಲ್ಲಿ ರಸ ಸಿದ್ಧಾಂತವು ಅಡಿಗಲ್ಲಾಗಿ ಕಾಣಿಸುತ್ತದೆ. ರಸ ಸಿದ್ಧಾಂತದ ಬಗೆಗಿನ ಚರ್ಚೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ರಸ ಶಬ್ದದ ಪ್ರಯೋಗ ಅತ್ಯಂತ ಪ್ರಾಚೀನ ವೇದಗಳ ಕಾಲದಲ್ಲಿಯೇ ಬಳಕೆಯಾಗಿದೆ. ರಸನಿಷ್ಪತಿಯ ಬಗೆಗೆ ಹಲವು ವ್ಯಾಖ್ಯಾನಗಳಿವೆ. ಸಾಮಾನ್ಯವಾಗಿ ರಸ ಎಂದರೆ ನಾಟಕ, ಕಾವ್ಯಕಲೆಗಳನ್ನು ನೋಡುವುದರಿಂದ ನಮಗಾಗಬಹುದಾದ ಮಾನಸಿಕ ತೃಪ್ತಿ ಅಥವಾ ಆನಂದವನ್ನು ರಸ ಎಂದು ಕರೆಯಬಹುದು. ಆದಿಕವಿ ಪಂಪನು ತನ್ನ ಕಾವ್ಯಗಳಲ್ಲಿ ರಸ ಸಿದ್ದಾಂತದ ಮಟ್ಟುಗಳನ್ನು ಅತ್ಯಂತ ವಿವೇಚನೆಯಿಂದ ಪ್ರತಿಪಾದಿಸಿರುವುದನ್ನು ನಾವಿಲ್ಲಿ ಕಾಣಬಹುದು. ಕನ್ನಡ ಕಾವ್ಯಮೀಮಾಂಸೆಯು ಜನಪರ ಮೂಲದಿಂದ ಪ್ರಾರಂಭವಾದರೂ ಅದಕ್ಕೆ ಸೈದಾಂತಿಕ ನಿಲುವು ಮತ್ತು ರೂಪರೇಷೆಗಳನ್ನು ಕೊಟ್ಟವನು ಪಂಪ. ಪಂಪ ಭಾರತದಲ್ಲಿ ದುರ್ಯೋಧನ ಭೀಷ್ಮರಿಗೆ ಪಟ್ಟ ಕಟ್ಟಿದ ಸಂದರ್ಭವನ್ನು ನೆನಪು ಮಾಡಿಕೊಂಡರೆ, ಕರ್ಣನ ಯುದ್ಧ ಉತ್ಸಾಹದ ಮಾತುಗಳು ವೀರರಸವನ್ನ ಪ್ರತಿಪಾದಿಸಿದರೆ, ಭೀಷ್ಮರ ಬುದ್ಧಿ ಮಾತುಗಳು ಕರುಣರಸದಂತೆ ಕಾಣಿಸುತ್ತದೆ. ಕೌರವನಿಂದ ದೌಪದಿಗಾದ ಅವಮಾನವನ್ನು ಸಹಿಸದೆ ಭೀಮನು ಮಾಡಿ ಪ್ರತಿಜ್ಞೆಯೂ ಕೂಡ ವೀರರಸವನ್ನು ಸೂಚಿಸುತ್ತದೆ. ಹೀಗೆ ವೀರ, ಕರುಣ, ಹಾಸ್ಯ, ರೌದ್ರ, ಭಯಾನಕ ಮತ್ತು ಅದ್ಭುತ ಇತ್ಯಾದಿ ರಸಗಳು ಪ್ರತಿಪಾದನೆಯಾಗಿರುವುದನ್ನು ಗುರುತಿಸಬಹುದು. ಅಲ್ಲದೆ ಶಕ್ತಿ ಕವಿ ರನ್ನನು ಕೂಡ ತನ್ನ ಗದಾಯುದ್ಧದಲ್ಲಿ ರಸ ಸಿದ್ದಾಂತದ ಮಟ್ಟುಗಳನ್ನು ಪ್ರತಿಪಾದಿಸಿದ್ದಾನೆ. ರನ್ನನು ಪಂಪನ ಪಥವನ್ನು ಅನುಸರಿಸಿದವನಾಗಿರುವುದರಿಂದ ಪಂಪನ ಹಾಗೆ ತನ್ನ ಕಾವ್ಯದಲ್ಲಿ ರಸಗಳ ಕುರಿತು ನಿಲುವುಗಳನ್ನು ಪ್ರತಿಪಾದಿಸಿದಾನೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಪಂಪ ಮಹಾಕವಿ ವಿರಚಿತ ಆದಿಪುರಾಣಂ (ಗದ್ಯಾನುವಾದ) (2013), ಕೆ. ಎಲ್. ನರಸಿಂಹಶಾಸ್ತ್ರೀ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ಕವಿ ಚಕ್ರವರ್ತಿ ಕವಿರನ್ನ ವಿರಚಿತ ಸಾಹಸಭೀಮ ವಿಜಯಂ (2013), ಆರ್. ವಿ ಕುಲಕರ್ಣಿ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ಪಂಪಭಾತರ ದೀಪಿಕೆ (1971), ಡಾ. ಡಿ. ಎಲ್. ನರಸಿಂಹಾಚಾರ್ ಪ್ರಸಾರಾಂಗ, ಮಾನಸ ಗಂಗೋತ್ರಿ, ಮೈಸೂರು.
ಪಂಪ: ಒಂದು ಅಧ್ಯಾಯನ (2014), ಡಾ. ಜಿ. ಎಸ್. ಶಿವರುದ್ರಪ್ಪ, ಸ್ವಪ್ನ ಬುಕ್ ಹೌಸ್, ಬೆಂಗಳೂರು.
ನಾಡೋಜ ಪಂಪ (2006), ಮುಳಿಯ ತಿಮ್ಮಪ್ಪಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಪಂಪ ಮಹಾಕವಿ ವಿರಚಿತ ಆದಿಪುರಾಣಂ (ಗದ್ಯಾನುವಾದ) (2001), ಕೆ. ಎಲ್. ನರಸಿಂಹಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ಸೌಂದರ್ಯ ಸಮೀಕ್ಷೆ (2009), ಡಾ. ಜಿ. ಎಸ್. ಶಿವರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಭಾರತೀಯ ಕಾವ್ಯ ಮೀಮಾಂಸೆ (2006), ತೀ. ನಂ. ಶ್ರೀಕಂಠಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಕಾವ್ಯಾರ್ಥ ಚಿಂತನ (2009), ಡಾ. ಜಿ. ಎಸ್. ಶಿವರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಕನ್ನಡ ಸಾಹಿತ್ಯ ಮೀಮಾಂಸೆ ಕಟ್ಟುವ ಬಗೆ (2012), (ಸಂ) ಡಾ. ಬಿ. ಬಿ. ಸುವರ್ಣ, ಕನ್ನಡ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.
ಕವಿ ಚಕ್ರವರ್ತಿ ಕವಿರನ್ನ ವಿರಚಿತ-ಸಾಹಸಭೀಮಂ ವಿಜಯಂ (ಗದ್ಯಾನುವಾದ) (2013), ಆರ್. ವಿ ಕುಲಕರ್ಣಿ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ಚಂಪೂಕವಿಗಳು (2008), ಡಾ. ಪಿ. ವಿ. ನಾರಾಯಣ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಪಂಪ ಭಾರತಕಥಾಲೋಕ (2012), ಆರ್. ಎಲ್. ಅನಂತರಾಮಯ್ಯ, ಸಾಧನ ಪ್ರಕಾಶನ, ಬೆಂಗಳೂರು.