ಬೆಟ್ಟದ ಜೀವ: ಒಂದು ರೂಪಾತ್ಮಕ ವಿಶ್ಲೇಷಣೆ
Main Article Content
Abstract
ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯ ಕಥಾವಸ್ತು ಹಾಗೂ ನಿರೂಪಣಾ ತಂತ್ರಗಳನ್ನು ರೂಪಾತ್ಮಕ ವಿಶ್ಲೇಷಣೆಯ ನೆಲೆಯಲ್ಲಿ ಇಲ್ಲಿ ಪರಿಶೀಲಿಸಲಾಗಿದೆ. ಕಾರಂತರು ತಮ್ಮ ವೈಯಕ್ತಿಕ ಆದರ್ಶಗಳನ್ನು ಪಾತ್ರಗಳ ಮೇಲೆ ಹೇರದೆ, ಸಮಷ್ಟಿಯ ಜೀವನ ವ್ಯಾಪಾರದಿಂದ ಹೊಮ್ಮುವ ನೈಜ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ನಿರೂಪಕ ‘ಶಿವರಾಮಯ್ಯ’ನ ಪಾತ್ರವು ವಾಸ್ತವವನ್ನು ಮೀರದ, ನಿರ್ಲಿಪ್ತ ಹಾಗೂ ವಸ್ತುನಿಷ್ಠ ಸಾಕ್ಷಿಪ್ರಜ್ಞೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗುರುತಿಸಲಾಗಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ನಿರಂತರ ಹೋರಾಟವನ್ನು ಅತಿರಂಜಿತವಾಗಿ ನಾಟಕೀಯಗೊಳಿಸದೆ (Undramatized narration), ಸಾವಯವ ನೆಲೆಯಲ್ಲಿ ಹಾಗೂ ರೂಪರಹಿತ ಸಂವೇದನೆಯಾಗಿ ಅಭಿವ್ಯಕ್ತಿಸಿರುವ ಕಾರಂತರ ಕಲಾತ್ಮಕ ಎಚ್ಚರಿಕೆಯನ್ನು ಈ ಬರಹವು ಶೋಧಿಸುತ್ತದೆ. ಕಥನ ಕೌಶಲ್ಯವು ಕೃತಕವಾಗದೆ, ಪ್ರಾದೇಶಿಕ ಅನುಭವಗಳು ಹೇಗೆ ಸಾರ್ವತ್ರಿಕ ಮೌಲ್ಯಗಳಾಗಿ ಮಾರ್ಪಟ್ಟಿವೆ ಎಂಬ ತಾತ್ವಿಕ ಚರ್ಚೆಯನ್ನು ಮಂಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಿವರಾಮ ಕಾರಂತ ಕೆ., (2023), ಬೆಟ್ಟದ ಜೀವ, ಬೆಂಗಳೂರು: ಎಸ್‌ಬಿಎಸ್ ಪಬ್ಲಿಷರ್ಸ್, ಪು.ಸಂ. 09
ಅದೇ, ಪು.ಸಂ. 39
ಆಮೂರ ಜಿ.ಎಸ್., (2022), ಬೆಟ್ಟದ ಜೀವ: ನಿಸರ್ಗ ಮತ್ತು ಮನುಷ್ಯ (ಪುಸ್ತಕ: ಶಿವರಾಮ ಕಾರಂತರ ಬೆಟ್ಟದ ಜೀವ ವಿಮರ್ಶಾ ಲೇಖನಗಳು, ಸಂ: ಡಾ. ಶ್ರೀಧರ್ ಹೆಗಡೆ ಭದ್ರನ್), ವಿಜಯನಗರ, ಬೆಂಗಳೂರು: ಅರವಿಂದ ಇಂಡಿಯಾ
ಶಿವರಾಮ ಕಾರಂತ ಕೆ., (2023), ಬೆಟ್ಟದ ಜೀವ, ಬೆಂಗಳೂರು: ಎಸ್‌ಬಿಎಸ್ ಪಬ್ಲಿಷರ್ಸ್, ಪು.ಸಂ. 46
ಅದೇ, ಪು.ಸಂ. 23
ಯಶೋಧಾ ರಾಜೇಂದ್ರ, (2002), ಕಾರಂತರ ಕಾದಂಬರಿಗಳಲ್ಲಿ ಮಾನವ ಮತ್ತು ನಿಸರ್ಗ ಸಂಘರ್ಷ (ಪುಸ್ತಕ: ಶತಮಾನದ ಕೊನೆಯಲ್ಲಿ ಶಿವರಾಮ ಕಾರಂತ, ಸಂ: ಡಾ. ಬಿ. ವಿವೇಕ ರೈ), ಮಂಗಳೂರು: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ಪು.ಸಂ. 50