ಸ್ವಾತಂತ್ರ್ಯ ಪೂರ್ವ ಮೈಸೂರು ಪರಿಸರದ ಕನ್ನಡ ಪ್ರಕಟಣಾ ಸಂಸ್ಥೆಗಳು

Main Article Content

ರಘು ಎನ್.ಎ.

Abstract

ಸ್ವಾತಂತ್ರ್ಯ ಪೂರ್ವದ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಸಾಹಿತ್ಯದ ಪುನರುಜ್ಜೀವನ ಮತ್ತು ಬೆಳವಣಿಗೆಯಲ್ಲಿ ಮುದ್ರಣಾಲಯಗಳು ಹಾಗೂ ಪ್ರಕಟಣಾ ಸಂಸ್ಥೆಗಳು ವಹಿಸಿದ ಐತಿಹಾಸಿಕ ಪಾತ್ರವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಒಡೆಯರ ಆಡಳಿತ, ಬ್ರಿಟಿಷ್ ಆಡಳಿತ ಹಾಗೂ ಕ್ರೈಸ್ತ ಮಿಷನರಿಗಳ ಆಗಮನದ ಹಿನ್ನೆಲೆಯಲ್ಲಿ ಕನ್ನಡ ಮುದ್ರಣ ಕಾರ್ಯವು ಆರಂಭವಾಯಿತು. ಧರ್ಮ ಪ್ರಚಾರ ಹಾಗೂ ಶೈಕ್ಷಣಿಕ ಉದ್ದೇಶಗಳಿಗಾಗಿ ಮಿಷನರಿಗಳು ಮುದ್ರಣಯಂತ್ರಗಳನ್ನು ಸ್ಥಾಪಿಸಿದರೆ, ನಂತರದ ದಿನಗಳಲ್ಲಿ ಅಂಬವಿಲಾಸ ಅರಮನೆಯ ಶಿಲಾಯಂತ್ರ, ವೆಸ್ಲಿಯನ್ ಪ್ರೆಸ್, ಸದ್ವಿದ್ಯಾ ಮಂದಿರ ಮುದ್ರಾಶಾಲೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ದೇಶೀಯ ಸಂಸ್ಥೆಗಳು ಈ ಕಾರ್ಯವನ್ನು ಮುಂದುವರೆಸಿದವು. ಓಲೆಗರಿಗಳು ಹಾಗೂ ಹಸ್ತಪ್ರತಿಗಳಲ್ಲಿದ್ದ ಪ್ರಾಚೀನ ಕಾವ್ಯಗಳು, ಶಾಸನಗಳು ಮತ್ತು ಧಾರ್ಮಿಕ ಗ್ರಂಥಗಳನ್ನು ಹುಡುಕಿ, ಪರಿಷ್ಕರಿಸಿ, ಮುದ್ರಿಸುವ ಮೂಲಕ ಈ ಸಂಸ್ಥೆಗಳು ಕಣ್ಮರೆಯಾಗುತ್ತಿದ್ದ ಅಸಂಖ್ಯಾತ ಕೃತಿಗಳನ್ನು ಸಂರಕ್ಷಿಸಿ, ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಬಗೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ರಘು ಎನ್.ಎ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ರಘು ಎನ್.ಎ. (2026). ಸ್ವಾತಂತ್ರ್ಯ ಪೂರ್ವ ಮೈಸೂರು ಪರಿಸರದ ಕನ್ನಡ ಪ್ರಕಟಣಾ ಸಂಸ್ಥೆಗಳು. ಅಕ್ಷರಸೂರ್ಯ (AKSHARASURYA), 17(04), 127 to 136. https://aksharasurya.com/index.php/latest/article/view/2343

References

ಶ್ರೀನಿವಾಸ ಹಾವನೂರು, (2021), ಹೊಸಗನ್ನಡದ ಅರುಣೋದಯ, ಬೆಂಗಳೂರು: ರಾಜಾ ಪ್ರಿಂಟರ್ಸ್.

ಧಾರವಾಡಕರ್ ರಾ.ಯ., (2024), ಹೊಸಗನ್ನಡ ಸಾಹಿತ್ಯದ ಉದಯಕಾಲ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಗೀತಾಚಾರ್ಯ ನಾ., (2009), ಹಸ್ತಪ್ರತಿ ಅಧ್ಯಯನಶಾಸ್ತ್ರ, ಬೆಂಗಳೂರು: ಬಿ. ಎಂ. ಶ್ರೀ. ಪ್ರತಿಷ್ಠಾನ.

ಮೈಸೂರು ವಿಶ್ವವಿದ್ಯಾನಿಲಯ, (1983), ಕನ್ನಡ ಗ್ರಂಥಸೂಚಿ 5ನೇ ಸಂಪುಟ-ಕಾದಂಬರಿ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

ವೆಂಕಟೇಶ ಸಾಂಗಲಿ, (1999), ಸಿರಿಗನ್ನಡ ಗ್ರಂಥಕರ್ತರ ಕೋಶ ಸಂಪುಟ-1, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಭಾನುಮತಿ ವೈ.ಸಿ., (2022), ಗ್ರಂಥಸಂಪಾದನೆ ಅಧ್ಯಯನದ ನೆಲೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಅಕಾಡೆಮಿ.