ಎಸ್.ಜಿ. ಸಿದ್ದರಾಮಯ್ಯನವರ ಕಾವ್ಯದಲ್ಲಿ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಗಳು

Main Article Content

ಮಲ್ಲಿಕಾರ್ಜುನಪ್ಪ ಎನ್.ಎಸ್.

Abstract

ಸಂಪ್ರದಾಯ, ನಂಬಿಕೆ ಮತ್ತು ಆಚರಣೆಗಳು ಮಾನವ ಸಮಾಜದ ಸಾಂಸ್ಕೃತಿಕ ಬೇರುಗಳಾಗಿದ್ದು, ಇವುಗಳ ದಟ್ಟವಾದ ಚಿತ್ರಣ ಎಸ್.ಜಿ. ಸಿದ್ದರಾಮಯ್ಯನವರ ಕಾವ್ಯದಲ್ಲಿ ಅನಾವರಣಗೊಂಡಿದೆ. ಕವಿಯು ಗ್ರಾಮೀಣ ಬದುಕಿನ ಜಾತ್ರೆ ಹಾಗೂ ಹಬ್ಬಗಳಂತಹ ಸಕಾರಾತ್ಮಕ ಆಚರಣೆಗಳನ್ನು ನೆಲಮೂಲ ಸಂಸ್ಕೃತಿಯ ಜೀವಂತ ಪ್ರತೀಕಗಳಾಗಿ ಗೌರವಿಸುತ್ತಾರೆ. ಆದರೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆಯನ್ನು ಬಿಂಬಿಸುವ ‘ಮಡೆಸ್ನಾನ’ದಂತಹ ಅಮಾನವೀಯ ಮೂಢನಂಬಿಕೆಗಳನ್ನು, ಜ್ಯೋತಿಷ್ಯದ ಅವೈಜ್ಞಾನಿಕ ನಂಬಿಕೆಗಳನ್ನು ಹಾಗೂ ಶಕುನ-ಅಪಶಕುನಗಳನ್ನು ತಾರ್ಕಿಕ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ ಕಟುವಾಗಿ ವಿರೋಧಿಸುತ್ತಾರೆ. ಕನಸುಗಳನ್ನು ಕೇವಲ ಸುಪ್ತಪ್ರಜ್ಞೆಯ ನೆನಪುಗಳೆಂದು ವಿಶ್ಲೇಷಿಸುವ ಇವರು, ಸಮಾಜದ ಏಳಿಗೆಗಾಗಿ ಮೌಲ್ಯಯುತವಾದ ಸಂಪ್ರದಾಯಗಳನ್ನು ಉಳಿಸಿಕೊಂಡು, ಹಾನಿಕಾರಕ ಮೌಢ್ಯಗಳನ್ನು ತ್ಯಜಿಸುವ ಮೂಲಕ ಆರೋಗ್ಯಕರ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸುವ ಆಶಯವನ್ನು ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.

Article Details

Section

Research Articles

Author Biography

ಮಲ್ಲಿಕಾರ್ಜುನಪ್ಪ ಎನ್.ಎಸ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ.

How to Cite

ಮಲ್ಲಿಕಾರ್ಜುನಪ್ಪ ಎನ್.ಎಸ್. (2026). ಎಸ್.ಜಿ. ಸಿದ್ದರಾಮಯ್ಯನವರ ಕಾವ್ಯದಲ್ಲಿ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಗಳು. ಅಕ್ಷರಸೂರ್ಯ (AKSHARASURYA), 17(04), 111 to 118. https://aksharasurya.com/index.php/latest/article/view/2341

References

ದೇಜಗೌ, (2001), ಜಾನಪದ ಅಧ್ಯಯನ, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ, ಪು.ಸಂ. 338.

ಗಂಗಾನಾಯಕ್ ಕೆ.ಎನ್. (ಸಂ), (2011), ಕನ್ನಡ ಜನಪದ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ (ಮೈಸೂರು ವಿಶ್ವವಿದ್ಯಾಲಯ), ಪು.ಸಂ. 93.

ಸಿದ್ದರಾಮಯ್ಯ ಎಸ್.ಜಿ., (2018), ಸಮಗ್ರ ಕಾವ್ಯ ಸಂಪುಟ-2, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ಪು.ಸಂ. 350.

ಅದೇ, ಪು.ಸಂ. 110.

ಸಿದ್ದರಾಮಯ್ಯ ಎಸ್.ಜಿ., (2018), ಸಮಗ್ರ ಕಾವ್ಯ ಸಂಪುಟ-1, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ಪು.ಸಂ. 117.

ಸಿದ್ದರಾಮಯ್ಯ ಎಸ್.ಜಿ., (2018), ಸಮಗ್ರ ಕಾವ್ಯ ಸಂಪುಟ-2, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ಪು.ಸಂ. 325.

ಸಿದ್ದರಾಮಯ್ಯ ಎಸ್.ಜಿ., (2021), ಯರೆಬೇವು-ಆತ್ಮಕಥನ, ಬೆಂಗಳೂರು: ಬಹುರೂಪಿ ಬುಕ್ ಹಬ್, ಪು.ಸಂ. 33.

ಸಿದ್ದರಾಮಯ್ಯ ಎಸ್.ಜಿ., (2018), ಸಮಗ್ರ ಕಾವ್ಯ ಸಂಪುಟ-1, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ಪು.ಸಂ. 411.

ಸಿದ್ದರಾಮಯ್ಯ ಎಸ್.ಜಿ., (2018), ಸಮಗ್ರ ಕಾವ್ಯ ಸಂಪುಟ-2, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ಪು.ಸಂ. 34.