ರಾಂಪುರದ ಬಕ್ಕಪ್ಪನವರ ತತ್ವಪದಗಳ ಆಶಯ
Main Article Content
Abstract
ಕನ್ನಡ ನಾಡಿನಲ್ಲಿ ಇಂದಿಗೂ ಜೀವಂತ ಪರಂಪರೆಯಾಗಿರುವ ತತ್ವಪದಗಳು ಒಂದು ಭಿನ್ನ ಜೀವನ ಕ್ರಮವೂ ಹೌದು. ಕನ್ನಡದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಬಹುತ್ವವನ್ನು ಪ್ರತಿಫಲಿಸುವ ರೀತಿಯಲ್ಲಿ ತತ್ವಪದಕಾರರು ಎಲ್ಲಾ ಸ್ತರದಿಂದ ಬಂದವರಾಗಿದ್ದಾರೆ. ನಾಡಿನ ಉದ್ದಗಲಕ್ಕೂ ಇರುವ ಪರಂಪರೆಯ ವಿಸ್ತಾರವಾದ ಅಧ್ಯಯನ ಅನೇಕ ಸಾಂಸ್ಕೃತಿಕ ಹೊಳಹುಗಳನ್ನು ನೀಡಬಲ್ಲದು. ಕನ್ನಡ ಸಾಹಿತ್ಯ ದಾಖಲೆಗೊಂಡ ಇತಿಹಾಸದಲ್ಲಿ ಅತ್ಯಂತ ವಿಸ್ತಾರವಾದ ಭಾಗವೆಂದರೆ ತತ್ವಪದಗಳೇ ಆಗಿವೆ. ಈ ಪ್ರಮಾಣದಲ್ಲಿ ಕನ್ನಡ ಸಾಹಿತ್ಯದ ಯಾವ ಪ್ರಕಾರದಲ್ಲಿಯೂ ಸಾಹಿತ್ಯ ಸೃಷ್ಟಿಯಾಗಿಲ್ಲ. ಆದರೆ ಸಾಹಿತ್ಯದ ಚರಿತ್ರೆಯಲ್ಲಿ ತತ್ವಪದಗಳ ಏಕತಾರಿಯನ್ನು ಇಂದಿಗೂ ಹೊರಗೆ ಇಟ್ಟಿದ್ದಾರೆ. ಕನ್ನಡದ ನೆಲದಲ್ಲಿ ಜಾತ್ಯಾತೀತ ಅನುಭಾವೀ ಸಾಧಕ ಪರಂಪರೆಯೊಂದು ಇನ್ನು ಜೀವಂತವಾಗಿದೆ. ತತ್ವಪದಕಾರರು, ಮುಟ್ಟು – ಮೈಲಿಗೆ ಎಂಬ ಅನೈಸರ್ಗಿಕ ನಿಲುವನ್ನಾಧರಿಸಿದ ತಾರತಮ್ಯವನ್ನು ನಿರಾಕರಿಸಿದರು. ಆ ಮೂಲಕ ಹೆಣ್ಣನ್ನು ಅವಮಾನಿಸುವ ಆಚರಣೆಗಳನ್ನು ತ್ಯಜಿಸಿದರು. ತತ್ವಪದಕಾರರ ಗದ್ದುಗೆಗಳಲ್ಲಿ ಜಾತಿ, ಧರ್ಮ, ದರ್ಶನಗಳ ಯಾವ ತಡೆಗೋಡೆಗಳೂ ಇಲ್ಲ. ಅಲ್ಲಿ ಎಲ್ಲರೂ ಸಮಾನರು ಮತ್ತು ವಿಶ್ವಮಾನವರು ಇವುಗಳ ಆಚರಣೆ ವಿಧಿ ನಿಷೇಧಗಳು ಮತ್ತು ಯಥೇಚ್ಛವಾಗಿ ದೊರಕುವ ಸಾಹಿತ್ಯವು ಈ ಪಂಥದ ತಾತ್ವಿಕತೆ ಮತ್ತು ಆಶಯವನ್ನು ಅರಿತುಕೊಳ್ಳಲು ಸಹಾಯಕವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪೂಜಾರ ವಿ.ಜಿ., (2012), ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳ ತತ್ವಪದಕಾರರ ಸ್ಮಾರಕಗಳು, ಕಲಬುರಗಿ: ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ.
ಬಸವರಾಜ ಸಬರದ (ಸಂ.), (2008), ಹೈದ್ರಾಬಾದ ಕರ್ನಾಟಕ ತತ್ವಪದಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ರಹಮತ್ ತರೀಕೆರೆ ಮತ್ತು ಡಾ. ಅರುಣ ಜೋಳದ ಗುಡಲಗಿ (ಸಂ.), (2011), ತತ್ವಪದ ಪ್ರವೇಶಿಕೆ (ಸಂಪುಟ-1), ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ.
ಅಮರೇಶ ನುಗಡೋಣಿ (ಸಂ.), (2011), ತತ್ವಪದ ಸಾಹಿತ್ಯ ಅಧ್ಯಯನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.