ಮೊದಲನೆಯ ನಾಗವರ್ಮನ 'ಕರ್ನಾಟಕ ಕಾದಂಬರಿ' ಕಥನಕ್ರಮ

Main Article Content

ತಿಮ್ಮಪ್ಪ ಎ. ಕೆ.

Abstract

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ರಚನೆ ಮಾಡಿದ ಕವಿಗಳಲ್ಲಿ ಪ್ರಮುಖರಾದವರು ಮೊದಲನೆಯ ನಾಗವರ್ಮ. ಸಾಹಿತ್ಯ ಚರಿತ್ರೆಯ ಯಾವ ಕಾಲಘಟ್ಟದಲ್ಲಿಯೂ ಪ್ರಣಯ ಪ್ರಸಂಗಳಿಗೆ ಯಾವುದೇ ಕೊರೆತೆಯಿಲ್ಲ. ಕರ್ನಾಟಕ ಕಾದಂಬರಿಯಲ್ಲಿ ಬರುವ ಕಾದಂಬರಿ, ಚಂದ್ರಪೀಡ, ಮಹಾಶ್ವೇತೆ, ವೈಶಂಪಾಯನ, ಕಪಿಂಜಲ, ಪುಂಡರೀಕ ಇಂತಹ ಪ್ರಮುಖ ಪಾತ್ರಗಳನ್ನೊಳಗೊಂಡಿರುವ ಕೃತಿ ಇದಾಗಿದೆ. ಇದರ ಕಥಾಸಂವಿಧಾನ ಅತ್ಯಂತ ಜಟಿಲವು ದಿಗ್ಧಾಂತವು ಆಗಿದ್ದು, ಕಥೆಯೊಳಗೆ ಕಥೆ ಸೇರಿಕೊಂಡು ಹಲವಾರು ಒಳಪದರುಗಳು ನಿರ್ಮಿತವಾಗಿರುವುದರ ಜೊತೆಗೆ ಶಾಪ, ಪ್ರತಿಶಾಪ, ಪುನರ್‌ಜನ್ಮಗಳ ಗೊಂದಲಗಳಿವೆ. ಮೂರು ಜನ್ಮಗಳ ಕಥೆಯನ್ನು ಕವಿ ಒಂದು ಸಂಕೀರ್ಣ ವಿನ್ಯಾಸದಲ್ಲಿ ನಿರೂಪಿಸಿದ್ದಾರೆ. ಇದರಲ್ಲಿ ಸಂಕೀರ್ಣವಾದ ತಂತ್ರಗಳನ್ನು ಬಳಸಿಕೊಳ್ಳುತ್ತಾ ಹೋಗುತ್ತಾನೆ. ಇದರಲ್ಲಿನ ಪಾತ್ರಗಳೆಲ್ಲವು ಕಥೆಗಳನ್ನು ಹೇಳುತ್ತಾ ಹೋಗುತ್ತವೆ. ಗಿಳಿಕಥೆ, ಜಾಬಾಲಿಋಷಿ, ಮತ್ತೊಂದು ಕಡೆ ಮಹಾಶ್ವೇತೆ, ಇನ್ನೊಂದು ಕಡೆ ಕಪಿಂಜಲ ಕಥೆಗಳನ್ನು ಹೇಳುತ್ತಿರುತ್ತಾರೆ. ಇದೊಂದು ಕಾವ್ಯ ತಂತ್ರವನ್ನು ರೂಪಿಸಿದ ಬಗೆಯಾಗಿದೆ. ಹಿಮ್ಮುಖ ಚಲನೆಯಲ್ಲಿ ಬಂದು ಅವುಗಳ ನಡುವಿನ ಸಂಬಂಧವನ್ನು ಜ್ಞಾಪಿಸಿಕೊಳ್ಳುವ ಬಗೆಯೇ ಈ ಕಾವ್ಯದ ವಿಷೇಶವಾಗಿದೆ. ಓದುಗರಿಗೆ ಹೊಸ ಆಲೋಚನೆ ಮತ್ತು ಆನಂದವನ್ನು ಈ ಕೃತಿ ಕೊಡುತ್ತದೆ ಎಂಬ ಭರವಸೆಯ ಹಿನ್ನಲೆಯಲ್ಲಿ ಅವಲೋಕಿಸಲಾಗಿದೆ.

Article Details

Section

Research Articles

Author Biography

ತಿಮ್ಮಪ್ಪ ಎ. ಕೆ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ, ಶಿವಮೊಗ್ಗ.

How to Cite

ತಿಮ್ಮಪ್ಪ ಎ. ಕೆ. (2023). ಮೊದಲನೆಯ ನಾಗವರ್ಮನ ’ಕರ್ನಾಟಕ ಕಾದಂಬರಿ’ ಕಥನಕ್ರಮ. ಅಕ್ಷರಸೂರ್ಯ (AKSHARASURYA), 2(10), 36 to 47. https://aksharasurya.com/index.php/latest/article/view/234

References

ವೀ. ಸೀತಾರಾಮಯ್ಯ (ಸಂ), ಒಂದನೆಯ ನಾಗವರ್ಮ (1973), ಐ.ಬಿ.ಹೆಚ್ ಪ್ರಕಾಶನ, ಬೆಂಗಳೂರು.

ಸಿ.ಪಿ.ಕೆ. (ಸಂ), ನಾಗವರ್ಮನ ಕರ್ನಾಟಕ ಕಾದಂಬರಿ (2002), ಚೇತನ್‌ಬುಕ್‌ಹೌಸ್‌, ಮೈಸೂರು.

ರಂ.ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ (1993), ಗೀತಾ ಬುಕ್‌ ಹೌಸ್, ಮೈಸೂರು.

ಪ್ರಥಮ ಬಿ.ಎ. ಐಚ್ಛಿಕ ಕನ್ನಡ ಪಠ್ಯ ಪುಸ್ತಕ (1992), ಕ.ರಾ.ಮು.ವಿ.ವಿ., ಮೈಸೂರು.

ವೀ. ಸೀತಾರಾಮಯ್ಯ, ಕರ್ನಾಟಕ ಕಾದಂಬರಿ (1964), ಪ್ರಸಾರಂಗ, ಮೈ. ವಿ. ವಿ. ಮೈಸೂರು.