ಅಕ್ಕಮ್ಮನವರ ವಚನಗಳಲ್ಲಿ ತಾತ್ವಿಕ ಮತ್ತು ವೈಜ್ಞಾನಿಕ ಪ್ರಜ್ಞೆ: ಒಂದು ವಿಮರ್ಶಾತ್ಮಕ ನೋಟ

Main Article Content

ಮಮತ ಬಿ.ಆರ್‌.
ಡಾ. ಜ್ಯೋತಿಶಂಕರ್

Abstract

12ನೇ ಶತಮಾನದ ಬಸವಯುಗದ ಪ್ರಮುಖ ವಚನಕಾರ್ತಿ ಅಕ್ಕಮ್ಮನವರ ವಚನಗಳು ಕೇವಲ ಭಕ್ತಿಯ ಅಭಿವ್ಯಕ್ತಿಯಾಗಿರದೆ, ಅಪರೂಪದ ತಾತ್ವಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿವೆ. ವ್ರತ, ನೇಮ, ಶೀಲ ಮತ್ತು ಕಾಯಕ ತತ್ವಗಳ ಮೂಲಕ ಆಚಾರ-ವಿಚಾರಗಳ ಸಮನ್ವಯವನ್ನು ಈ ವಚನಗಳು ಎತ್ತಿಹಿಡಿಯುತ್ತವೆ. ಅಂತರಂಗ ಮತ್ತು ಬಹಿರಂಗದ ಶುದ್ಧಿಗೆ ಒತ್ತು ನೀಡುತ್ತಾ, ಇಂದ್ರಿಯ ನಿಗ್ರಹದ ಮೂಲಕ ಅತ್ಯುನ್ನತ ನೈತಿಕ ಮೌಲ್ಯಗಳನ್ನು ಅವರು ಬೋಧಿಸಿದ್ದಾರೆ. ಮಾದಕ ವಸ್ತುಗಳು ಮತ್ತು ತಾಮಸ ಆಹಾರಗಳು (ಬೆಳ್ಳುಳ್ಳಿ, ಈರುಳ್ಳಿ) ಮಾನವನ ನರಮಂಡಲದ ಮೇಲುಂಟುಮಾಡುವ ದುಷ್ಪರಿಣಾಮಗಳ ವಿಶ್ಲೇಷಣೆ ಹಾಗೂ ಹತ್ತಿರದ ರಕ್ತಸಂಬಂಧಿಗಳ ನಡುವಿನ ವಿವಾಹದಿಂದ ಎದುರಾಗುವ ಅನುವಂಶಿಕ ದೋಷಗಳ ಬಗೆಗಿನ ಎಚ್ಚರಿಕೆಗಳು ಅವರ ವೈಜ್ಞಾನಿಕ ದೂರದೃಷ್ಟಿಗೆ ಸಾಕ್ಷಿಯಾಗಿವೆ. ಮೂಢನಂಬಿಕೆಗಳನ್ನು ಧಿಕ್ಕರಿಸಿ, ಅರಿವು ಮತ್ತು ಸತ್ಯಶೋಧನೆಯತ್ತ ಸಾಗುವ ಅವರ ಒಳನೋಟಗಳು ಮಾನವನ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಇಂದಿಗೂ ಪ್ರಸ್ತುತವಾಗಿವೆ.

Article Details

Section

Research Articles

Author Biographies

ಮಮತ ಬಿ.ಆರ್‌.

ಸಂಶೋಧನಾರ್ಥಿ, ಕನ್ನಡ ವಿಭಾಗ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು. 

ಡಾ. ಜ್ಯೋತಿಶಂಕರ್

ಸಹ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.

How to Cite

ಮಮತ ಬಿ.ಆರ್‌., & ಜ್ಯೋತಿಶಂಕರ್. (2026). ಅಕ್ಕಮ್ಮನವರ ವಚನಗಳಲ್ಲಿ ತಾತ್ವಿಕ ಮತ್ತು ವೈಜ್ಞಾನಿಕ ಪ್ರಜ್ಞೆ: ಒಂದು ವಿಮರ್ಶಾತ್ಮಕ ನೋಟ. ಅಕ್ಷರಸೂರ್ಯ (AKSHARASURYA), 17(04), 98 to 104. https://aksharasurya.com/index.php/latest/article/view/2339

References

ವೀರಣ್ಣ ರಾಜೂರ, (2021), ಶಿವಶರಣೆಯರ ವಚನ ಸಂಪುಟ (ಸಮಗ್ರ ವಚನ ಸಂಪುಟ 5), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಪುಷ್ಪ ಎಚ್.ಎಲ್., (2004), ಅಕ್ಕಮ್ಮ, ಮೈಸೂರು: ಶ್ರೀ ಬಸವ ಅಧ್ಯಯನ ಪೀಠ, ಮೈಸೂರು ವಿಶ್ವವಿದ್ಯಾಲಯ.

ಶಿವಕುಮಾರ ಎಸ್. ಬಳಿಗಾರ, (2021), ವಚನ ಚಿಂತನ ವಿಭಿನ್ನ ನೆಲೆಗಳು, ಧಾರವಾಡ: ಶ್ರೀ ಬಸವೇಶ್ವರ ಪೀಠ, ಕರ್ನಾಟಕ ವಿಶ್ವವಿದ್ಯಾಲಯ.

ಕಾವ್ಯಶ್ರೀ ಜಿ., (2015), ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ, ಚಿತ್ರದುರ್ಗ: ಆದಿತ್ಯ ಪ್ರಕಾಶನ.