ರಾಜಕೀಯದಲ್ಲಿ ಮಹಿಳೆಯರು: ಪ್ರಜಾಪ್ರಭುತ್ವ ಮತ್ತು ಪ್ರಾತಿನಿಧ್ಯ
Main Article Content
Abstract
ಪ್ರಜಾಪ್ರಭುತ್ವದ ಯಶಸ್ಸು ಮತ್ತು ಸುಸ್ಥಿರ ಅಭಿವೃದ್ಧಿಗೆ ರಾಜಕೀಯದಲ್ಲಿ ಮಹಿಳೆಯರ ಸಕ್ರಿಯ ಪ್ರಾತಿನಿಧ್ಯ ಅತ್ಯಗತ್ಯವಾಗಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ಕೇವಲ ಮತದಾನಕ್ಕೆ ಸೀಮಿತವಾಗದೆ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಮತ್ತು ನಾಯಕತ್ವದಲ್ಲಿರಬೇಕು. ಪ್ರಸ್ತುತ ಲೋಕಸಭೆ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆಯಿದ್ದು, ಅದರಲ್ಲೂ ಶೋಷಿತ ವರ್ಗದ ಮಹಿಳೆಯರಿಗೆ ಅವಕಾಶಗಳು ಮರೀಚಿಕೆಯಾಗಿವೆ. ಪಿತೃಪ್ರಧಾನ ವ್ಯವಸ್ಥೆ, ಅಭದ್ರತೆ ಮತ್ತು ಆರ್ಥಿಕ ಸವಾಲುಗಳು ಮಹಿಳಾ ನಾಯಕತ್ವಕ್ಕೆ ಪ್ರಮುಖ ಅಡೆತಡೆಗಳಾಗಿವೆ. 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಎನ್‌ಜಿಒಗಳ ಬೆಂಬಲ ಮತ್ತು ಡಿಜಿಟಲ್ ತಂತ್ರಜ್ಞಾನದ ಬಳಕೆಯು ಮಹಿಳಾ ಸಬಲೀಕರಣಕ್ಕೆ ಹೊಸ ಮಾರ್ಗಗಳನ್ನು ತೆರೆದಿವೆ. ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ನೀತಿಗಳ ಮೂಲಕ ಸಮಾನ ಸಮಾಜ ನಿರ್ಮಾಣ ಮಾಡಲು ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅನಿವಾರ್ಯ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮೇರಿ ವೋಲ್ಸ್‌ಸ್ಟೋನ್‌ಕ್ರಾಫ್ಟ್, (1792), ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್, ಲಂಡನ್: ಜೋಸೆಫ್ ಜಾನ್ಸನ್.
ಭಾರತ ಸರ್ಕಾರ, (1993), ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಕಾಯ್ದೆಗಳು, ನವದೆಹಲಿ: ಭಾರತ ಸರ್ಕಾರ.
ಭಾರತ ಸರ್ಕಾರ, (2023), ನಾರಿ ಶಕ್ತಿ ವಂದನ್ ಅಧಿನಿಯಮ (106ನೇ ಸಂವಿಧಾನ ತಿದ್ದುಪಡಿ), ನವದೆಹಲಿ: ಭಾರತ ಸರ್ಕಾರ.
ಭಾರತಿ ಬಿ.ಎಂ., (2008), ಭಾರತದಲ್ಲಿ ಮಹಿಳೆ, ಗದಗ: ವಿದ್ಯಾನಿಧಿ ಪ್ರಕಾಶನ.
ಅನುಪಮಾ ಎಚ್.ಎಸ್., (2004), ಸಂವಿಧಾನ ಮತ್ತು ಮಹಿಳೆ, ಗದಗ: ಲಡಾಯಿ ಪ್ರಕಾಶನ.