ಕನ್ನಡ ಶಾಸನಗಳಲ್ಲಿ ಸಾಹಿತ್ಯಾಂಶ

Main Article Content

ಜ್ಯೋತಿಲಕ್ಷ್ಮಿ ಹೆಚ್.

Abstract

ಶಾಸನಗಳು ರಾಜರು, ರಾಣಿಯರಲ್ಲದೆ ಇತರೆ ಅಧಿಕಾರಿಗಳು ತಮ್ಮ ಆಜ್ಞೆಗಳು, ದಾನಗಳನ್ನು ಪ್ರಜೆಗಳ ಗಮನಕ್ಕೆ ತರಲು ತಾಳೆಗರಿ, ಮರ, ಕಾಗದ, ಲೋಹಗಳು ಮತ್ತು ಶಿಲೆಗಳ ಮೇಲೆ ಲಿಖಿತ ರೂಪದಲ್ಲಿ ಬರೆಯಿಸಿ ಬಹುಕಾಲ ಉಳಿಯುವಂತೆ ಪ್ರಕಟಿಸಲಾಗುತ್ತಿದ್ದ ದಾಖಲೆ. ಕರ್ನಾಟಕದಲ್ಲಿ ಕಲ್ಲಿನ ಮೇಲೆ, ಸ್ತಂಭಗಳ ಮೇಲೆ ದೇವಾಲಯಗಳ ಗೋಡೆಗಳ ಮೇಲೆ, ವಿಗ್ರಹದ ಪೀಠಗಳ ಮೇಲೆ, ತಾಮ್ರಪಟಗಳ ಮೇಲೆ, ಪಾತ್ರೆಗಳಮೇಲೆ ಮಡಿಕೆಗಳ ಮೇಲೆ ಶಾಸನಗಳು ದೊರಕಿವೆ, ಇವುಗಳು ಇಂದು ರಾಜಮನೆತನಗಳ ಚರಿತ್ರೆಯ ವಿವರಗಳನ್ನು ನೀಡುವುದಲ್ಲದೆ ವಿವಿಧ ಭಾಷೆಗಳ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನೀಡುತ್ತವೆ. ಕನ್ನಡ ಶಾಸನಗಳಲ್ಲಿ ಹುದುಗಿರುವ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ರಾಜಕೀಯ ಅಂಶಗಳನ್ನು ಅಧ್ಯಯನ ಮಾಡುತ್ತಿರುವುದು ವಿವಿಧ ಅಧ್ಯಯನ ಶಿಸ್ತುಗಳಲ್ಲಿ ಹೆಚ್ಚು ಆಸಕ್ತಿಯ ವಿಷಯವಾಗಿದೆ. ಆ ನಿಟ್ಟಿನಲ್ಲಿ ಈ ಸಂಶೋಧನಾ ಪ್ರಬಂಧವು ಶಾಸನದ ಅರ್ಥ, ಅವುಗಳನ್ನು ನೆಡುವ ಉದ್ದೇಶ, ವಿವಿಧ ಪ್ರಾಚೀನ ಗ್ರಂಥಗಳಲ್ಲಿ ಅದರ ವ್ಯಾಖ್ಯಾನ, ಶಾಸನಗಳ ಆರಂಭ ಮತ್ತು ಅವಶ್ಯಕತೆ, ಶಾಸನಗಳಲ್ಲಿ ಕವಿಗಳು ಮತ್ತು ವಿದ್ವಾಂಸರು ನಿರೂಪಿಸಿರುವ ಲಿಪಿ, ಭಾಷೆ, ವಾಕ್ಯ ರಚನೆ, ವರ್ಣನೆ, ಪಂಪ, ರನ್ನ, ಜನ್ನ, ಮೊದಲಾದ ಉದ್ದಾಮ ಕವಿಗಳಲ್ಲಿ ಕಂಡುಬರುವ ಪ್ರೌಢವಾದ ಶೈಲಿ ಉಪಮೇ, ರೂಪಕ, ಉತ್ಪ್ರೇಕ್ಷೆ, ಶ್ಲೇಷ ಮುಂತಾದ ಅಲಂಕಾರಗಳಿಂದ ಕೂಡಿದೆ. ಸುಂದರವಾದ ವರ್ಣನೆ ಭವ್ಯವಾದ ಕಲ್ಪನಾ ವಿನ್ಯಾಸ ಹೃದಯವಾದ ಭಾವಸೌಂದರ್ಯ ಮುಂತಾದವುಗಳಿಂದ ತುಂಬಿವೆ. ಸಾಮಾನ್ಯವಾಗಿ ಪ್ರತಿಯೊಂದು ಶಾಸನದಲ್ಲಿ ವೀರರ ಪ್ರತಾಪ, ಸ್ಥಾವಾಚಾರ್ಯರ ಪ್ರಭಾವ, ದೇವಾಲಯಗಳ ಘನತೆ, ದತ್ತಿಗಳ ವಿವರ, ರಾಜರ ವಂಶಗಳ ವಿವರ ಇತ್ಯಾದಿ ವಿಷಯ ವರ್ಣನೆಗಳಿಂದ ಕೂಡಿದ್ದರೂ ಒಂದೊಂದರಲ್ಲಿಯೂ ಒಂದಿಲ್ಲೊಂದು ದೃಷ್ಟಿಯಿಂದ ಸಾಹಿತ್ಯಾಂಶವಿರುವುದನ್ನು ಈ ಪ್ರಬಂಧವು ಓದುಗರ ಗಮನ ಸೆಳೆಯುತ್ತದೆ. 

Article Details

Section

Research Articles

Author Biography

ಜ್ಯೋತಿಲಕ್ಷ್ಮಿ ಹೆಚ್.

ಸಂಶೋಧನಾ ವಿದ್ಯಾರ್ಥಿ, ಕನ್ನಡ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.

How to Cite

ಜ್ಯೋತಿಲಕ್ಷ್ಮಿ ಹೆಚ್. (2026). ಕನ್ನಡ ಶಾಸನಗಳಲ್ಲಿ ಸಾಹಿತ್ಯಾಂಶ . ಅಕ್ಷರಸೂರ್ಯ (AKSHARASURYA), 17(04), 48 to 58. https://aksharasurya.com/index.php/latest/article/view/2336

References

ಶಿವಕೋಟ್ಯಾಚಾರ್ಯ, ಡಿ.ಎಲ್.ಎಲ್. (ಸಂ), (1970), ವಡ್ಡಾರಾಧನೆ ಭದ್ರಬಾಹುಭಟಾರರ ಕಥೆ, ಪು.ಸಂ. 75

ಚಿದಾನಂದಮೂರ್ತಿ ಎಂ., (1966), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯನಯನ, ಬೆಂಗಳೂರು.

ಯಜ್ಞವಲ್ಕ್ಯ ಸಂಹಿತೆ-1-318-20

ಚಿದಾನಂದಮೂರ್ತಿ ಎಂ., (1966), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯನಯನ, ಬೆಂಗಳೂರು, ಪು.ಸಂ. 31

ಚಿದಾನಂದಮೂರ್ತಿ ಎಂ., ಸಂಶೋಧನ ತರಂಗ, ಭಾಗ-02

ಶ್ರೀನಿವಾಸ ರಿತ್ತಿ, (2009), Epigraphia Carnatica XI, ಚಿತ್ರದುರ್ಗ ಜಿಲ್ಲೆ-43

Indian Antiquary-X, Page-61

ಚಿದಾನಂದಮೂರ್ತಿ ಎಂ., ಸಂಶೋಧನ ತರಂಗ, ಬಾಗ-02, ಪು.ಸಂ 199

ಶ್ರೀನಿವಾಸ ರಿತ್ತಿ, 2009, Epigraphia Carnatica-XIII, Page-329

ಬೊಂ.ಕಾ.ವ.ಜ., ಪು.ಸಂ. 204

Karnataka Inscriptions, Vol-I Page-40