ಕಲಾತ್ಮಕ ಅಭಿವ್ಯಕ್ತಿಗೆ ಬೇಕು ಭಾರತೀಯ ಸಂಗೀತ ಮತ್ತು ನೃತ್ಯ

Main Article Content

ಡಾ. ಜಯಮ್ಮ ಯಶವಂತಪ್ಪ ಡಿ.

Abstract

ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳು ಕೇವಲ ಮನರಂಜನೆಯ ಸಾಧನಗಳಾಗಿರದೆ, ಮಾನವನ ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಕಾರಣವಾದ ಅತ್ಯಂತ ಪ್ರಾಚೀನ ಸಾಂಸ್ಕೃತಿಕ ಪರಂಪರೆಯಾಗಿವೆ. ವೇದಕಾಲದಿಂದ ಆರಂಭಗೊಂಡು, ರಾಮಾಯಣ, ಮಹಾಭಾರತ ಹಾಗೂ ಮೊಘಲರ ಕಾಲಘಟ್ಟಗಳಲ್ಲಿ ವಿಕಸನಗೊಂಡ ಈ ಕಲೆಗಳು, ಗಾಯನ, ವಾದನ ಮತ್ತು ನರ್ತನಗಳೆಂಬ ತ್ರಿವೇಣಿ ಸಂಗಮವನ್ನು ಪ್ರತಿನಿಧಿಸುತ್ತವೆ. ಭರತಮುನಿಯ ‘ನಾಟ್ಯಶಾಸ್ತ್ರ’ದಂತಹ ಮೌಲಿಕ ಕೃತಿಗಳ ತಳಹದಿಯ ಮೇಲೆ ನಿಂತಿರುವ ಇವು ದೈವೀ ಸಾಕ್ಷಾತ್ಕಾರದ ಮಾರ್ಗಗಳೆಂದೇ ಪೂಜಿಸಲ್ಪಡುತ್ತವೆ. ಕಾಲಾನಂತರದಲ್ಲಿ ಅನೇಕ ಬದಲಾವಣೆಗಳಿಗೆ ತೆರೆದುಕೊಂಡರೂ, ಇವು ತಮ್ಮ ಮೂಲ ಸಂಪ್ರದಾಯವನ್ನು ಉಳಿಸಿಕೊಂಡಿವೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸಾಂಸ್ಥಿಕ ಬೆಂಬಲದೊಂದಿಗೆ ಜಾಗತಿಕ ಮಟ್ಟದಲ್ಲಿ ಅಪಾರ ಮನ್ನಣೆ ಪಡೆದಿರುವ ಈ ಕಲಾಪ್ರಕಾರಗಳು, ತಮ್ಮ ಜೀವಾಳಕ್ಕೆ ಚ್ಯುತಿ ಬಾರದಂತೆ ಸಮಕಾಲೀನ ಪ್ರಯೋಗಗಳಿಗೂ ಒಗ್ಗಿಕೊಂಡಿವೆ. ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿರುವ ಸಂಗೀತ ಮತ್ತು ನೃತ್ಯಗಳು ಕಲಾತ್ಮಕ ಅಭಿವ್ಯಕ್ತಿಯ ಪ್ರಬಲ ಶಕ್ತಿಯಾಗಿ ಭಾರತದ ಭವ್ಯ ಪರಂಪರೆಯನ್ನು ಇಂದಿಗೂ ಜಗತ್ತಿಗೆ ಸಾರುತ್ತಿವೆ.

Article Details

Section

Research Articles

Author Biography

ಡಾ. ಜಯಮ್ಮ ಯಶವಂತಪ್ಪ ಡಿ.

ಸಂಗೀತ ಉಪನ್ಯಾಸಕಿ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ.

How to Cite

ಜಯಮ್ಮ ಯಶವಂತಪ್ಪ ಡಿ. (2026). ಕಲಾತ್ಮಕ ಅಭಿವ್ಯಕ್ತಿಗೆ ಬೇಕು ಭಾರತೀಯ ಸಂಗೀತ ಮತ್ತು ನೃತ್ಯ. ಅಕ್ಷರಸೂರ್ಯ (AKSHARASURYA), 17(04), 41 to 47. https://aksharasurya.com/index.php/latest/article/view/2335

References

ಕಪಿಲ ವಾತ್ಸ್ಯಾಯನ, (1974), ಇಂಡಿಯನ್ ಕ್ಲಾಸಿಕಲ್ ಡಾನ್ಸ್, ದೆಹಲಿ: ಮಿನಿಸ್ಟರಿ ಆಫ್ ಇನ್‌ಫಾರ್ಮೇಶನ್ ಆಂಡ್ ಬ್ರಾಡ್‌ಕಾಸ್ಟಿಂಗ್ ಗೌರ್ನಮೆಂಟ್ ಆಫ್ ಇಂಡಿಯಾ.

ಠಾಕೂರ್ ಜಯದೇವ ಸಿಂಗ್ ಮತ್ತು ಪ್ರೇಮಲತಾ ಶರ್ಮಾ, (1995), ಇಂಡಿಯನ್ ಮ್ಯೂಸಿಕ್, ಕಲ್ಕತ್ತ: ಸಂಗೀತ ರಿಸರ್ಚ್ ಅಕಾಡೆಮಿ.

ವಿವೇಕ ಕುಮಾರ್ ಪಾಂಡೆ ಮತ್ತು ಶಂಭುನಾಥ, ಡಾನ್ಸ್ ವಿಥ್ ಮ್ಯೂಸಿಕ್.

ಆದ್ಯ ರಂಗಾಚಾರ್ಯ, (1984), ನಾಟ್ಯಶಾಸ್ತ್ರ, ಹೆಗ್ಗೋಡು (ಸಾಗರ): ಅಕ್ಷರ ಪ್ರಕಾಶನ.

ಪಾಟೀಲ್ ಎ.ಯು., (1974), ಸಂಗೀತ ಶಾಸ್ತ್ರ ದರ್ಪಣ, ಧಾರವಾಡ: ಕನ್ನಡ ಅಧ್ಯಯನ ಪೀಠ ಪಠ್ಯಪುಸ್ತಕ ನಿರ್ದೇಶನಾಲಯ, ಕರ್ನಾಟಕ ವಿಶ್ವವಿದ್ಯಾಲಯ.

ಜಯದೇವಿ ಜಂಗಮಶೆಟ್ಟಿ, (2016), ಕೇಡಿಲ್ಲವಾಗಿ ಹಾಡುವೆ, ಚೆನ್ನಪಟ್ಟಣ: ಪಲ್ಲವ ಪ್ರಕಾಶನ.