ಯುರೋಪ್ ಪ್ರವಾಸ ಕಥನಗಳು ನಡೆದು ಬಂದ ದಾರಿ

Main Article Content

ಗೋವಿಂದ ಮಲ್ಲಣ್ಣ

Abstract

ಆಲ್ಬರ್ಟ್ ಕಾಮು ಪ್ರವಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರ್ಥೈಸಿರುವುದು ಪ್ರವಾಸದ ಮಹತ್ವವನ್ನು, ಸಾಹಿತ್ಯದಲ್ಲಿ ಅದರ ಸ್ಥಾನವನ್ನು ಸೂಚಿಸುತ್ತದೆ. ‘ಪ್ರವಾಸ’ ಪದಕ್ಕೆ ಆಂಗ್ಲಭಾಷೆಯಲ್ಲಿ ‘ಟ್ರಾವೆಲ್’ ಎಂಬ ಪದ ಸಂವಾದಿಯಾಗಿದೆ. ಟ್ರಾವೆಲ್ ಎಂಬ ಪದಕ್ಕೆ ‘ಆಕ್ಸ್‌ಫರ್ಡ್ ಲರ್ನರ್’ ಒಂದು ಸ್ಥಳದಿಂದ ಮತ್ತೊಂದು ದೂರದ ಸ್ಥಳಕ್ಕೆ ಅಥವಾ ವಿದೇಶಕ್ಕೆ ಪ್ರಯಾಣ ಮಾಡುವುದೇ ಪ್ರವಾಸ’ ಎಂಬ ವಿವರಣೆ ನೀಡಲಾಗಿದೆ. ‘ಟ್ರಾವೆಲ್’ ಪದದ ನಿಷ್ಪತ್ತಿಯನ್ನು ಗಮನಿಸಿದಾಗ ಅದು ಫ್ರೆಂಚ್ ಮೂಲದ್ದು ಎಂದು ತಿಳಿದುಬರುತ್ತದೆ. ಯುರೋಪ್ ಖಂಡದಿಂದಲೇ ಪ್ರವಾಸದ ಪರಿಕಲ್ಪನೆ ಸ್ಪಷ್ಟ ರೂಪವನ್ನು ತಾಳಿದೆ ಎನ್ನಬಹುದು. 
ಪ್ರವಾಸವು ಭೌತಿಕ ಸ್ವರೂಪವನ್ನು ಹೊಂದಿದ್ದರೂ ಅದೊಂದು ಮಾನಸಿಕ ಪ್ರಕ್ರಿಯೆ. ಪ್ರವಾಸದಲ್ಲಿ ದೊರಕಿದ ನೈಜ ಅನುಭವಗಳು ಮನಸ್ಸಿನ ಮೇಲೆ ಪರಿಣಾಮ ಬೀರಿ ಹೊಸ ತಿಳುವಳಿಕೆಯನ್ನು ಕೊಡುತ್ತದೆ. ಶಿಕ್ಷಣದ ಒಂದು ಭಾಗವಾಗಿ ಹಲವು ಲಾಭಗಳು ದೊರೆಯುತ್ತವೆ. ಆಂಗ್ಲಕವಿ ವಿಲಿಯಂ ಷೇಕ್ಸ್‌ಪಿಯರ್ ಹೇಳುವಂತೆ “Home-keeping youths have ever homely wits”(ವಿ.ಕೃ. ಗೋಕಾಕ್.. ಸಮುದ್ರದಾಚೆಯಿಂದ., ಪು-30) ಎಂಬ ಮಾತು ಮಗುವಿನ ಬೌದ್ಧಿಕ ಮಟ್ಟದ ವೈಶಾಲತೆಗೆ ಪ್ರವಾಸ ಹೇಗೆ ಪ್ರೇರಕ ಮತ್ತು ಪೋಷಕ ಎಂಬುದನ್ನು ತಿಳಿಸುತ್ತದೆ. ದ.ರಾ. ಬೇಂದ್ರೆಯವರು “ವಿಭೂತಿಯಿರದ ಸ್ಥಳವು ಯಾತ್ರೆಗೆ ಯೋಗ್ಯವಲ್ಲ. ದೋಷ ತಗ್ಗಿಸಿ, ಗುಣ ಹಿಗ್ಗಿಸದ ಯಾತ್ರೆ ಯಾತ್ರೆಯಲ್ಲ”(ಪ್ರವಾಸ ಸಾಹಿತ್ಯ., ಸಾ. ಶಿ ಮರುಳಯ್ಯ, ಕನ್ನಡನುಡಿ ಬೆಳ್ಳಿ ಸಂಚಿಕೆ., ಕ. ಸಾ. ಪ., 1963., ಪು-75)ಎಂದಿದ್ದಾರೆ. ಬೇಂದ್ರೆ ಅವರು ಹೇಳುವಂತೆ ಪ್ರವಾಸವು ದೋಷವನ್ನು ತಗ್ಗಿಸಿ ಗುಣವನ್ನು ಹಿಗ್ಗಿಸುವ ಕಾರ್ಯವನ್ನು ಮಾಡುತ್ತದೆ. 

Article Details

Section

Research Articles

Author Biography

ಗೋವಿಂದ ಮಲ್ಲಣ್ಣ

ಸಂಶೋಧನಾ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿಸ್ತರಣಾ ಕೇಂದ್ರ, ದೇವದುರ್ಗ.

How to Cite

ಗೋವಿಂದ ಮಲ್ಲಣ್ಣ. (2026). ಯುರೋಪ್ ಪ್ರವಾಸ ಕಥನಗಳು ನಡೆದು ಬಂದ ದಾರಿ . ಅಕ್ಷರಸೂರ್ಯ (AKSHARASURYA), 17(04), 35 to 40. https://aksharasurya.com/index.php/latest/article/view/2334

References

ವೆಂಕಣ್ಣಯ್ಯ ಟಿ.ಎಸ್., (1948), ಪ್ರಾಚೀನ ಸಾಹಿತ್ಯ, ಮೈಸೂರು: ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್.

ನಾಯಕ ಹಾ.ಮಾ., (1987), ಕನ್ನಡವನ್ನು ಕಟ್ಟುವ ಕೆಲಸ, ಬೆಂಗಳೂರು: ಐ.ಬಿ.ಹೆಚ್. ಪ್ರಕಾಶನ.

ತಾರಾನಾಥ ಎನ್.ಎಸ್., (1990), ಪ್ರವಾಸ ಸಾಹಿತ್ಯ, ಮೈಸೂರು: ಶಕ್ತಿ ಪ್ರಕಾಶನ.

ವಿದ್ಯಾಶಂಕರ ಎಸ್., (1991), ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ, ಬೆಂಗಳೂರು: ಸ್ನೇಹ ಪ್ರಕಾಶನ.

ನಾಯಕ ಜಿ.ಹೆಚ್., (1992), ವಿಮರ್ಶೆ ಮಾರ್ಗ (ಪರಂಪರೆ ಮತ್ತು ಸಮಕಾಲೀನ ಕನ್ನಡ ಸಾಹಿತ್ಯ), ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ.

ಮಲ್ಲೇಪುರಂ ಜಿ. ವೆಂಕಟೇಶ, (1992), ಪ್ರವಾಸ ಸಾಹಿತ್ಯ: ಒಂದು ಅಧ್ಯಯನ, ಬೆಂಗಳೂರು: ಹೊನ್ನ ಪ್ರಕಾಶನ.

ಶೇಷಗಿರಿ ರಾವ್ ಎಲ್.ಎಸ್. (ಪ್ರಸಂ), (1993), ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಬೆಂಗಳೂರು: ಉದಯಭಾನು ಕಲಾಸಂಘ.

ಹೆಗಡೆ ಎಂ.ಜಿ. (ಸಂ), (1994), ಸಾಹಿತ್ಯ ವಿಮರ್ಶೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ರಹಮತ್ ತರೀಕೆರೆ (ಸಂ), (1998), ಕನ್ನಡ ಅಧ್ಯಯನ (ಚಳಿ ಸಂಚಿಕೆ), ವಿದ್ಯಾರಣ್ಯ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ರಹಮತ್ ತರೀಕೆರೆ (ಸಂ), (1999), ಕನ್ನಡ ಅಧ್ಯಯನ (ಗಾಳಿ ಸಂಚಿಕೆ), ವಿದ್ಯಾರಣ್ಯ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.