ಸಮ ಸಮಾಜದ ನೇತಾರ ಭಕ್ತಿ ಸಾಹಿತ್ಯದ ಅನನ್ಯ ಚೈತನ್ಯ: ದ್ವಿಭಾಷಿ ತತ್ವಪದಕಾರ ಕೈವಾರ ತಾತಯ್ಯ

Main Article Content

ಡಾ. ಎಂ.ಎನ್. ಕವಿತಾ

Abstract

ನಿರ್ಗುಣ ಭಕ್ತಿ ಮತ್ತು ತತ್ವಪದ ಪರಂಪರೆಯ ಮಹತ್ವದ ಕೊಂಡಿಯಾಗಿರುವ ಕೈವಾರ ತಾತಯ್ಯನವರ (ಯೋಗಿ ನಾರೇಯಣಪ್ಪ) ಜೀವನ ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತತ್ವಪದಗಳನ್ನು ರಚಿಸಿದ ಇವರು, ಕೇವಲ ಭಕ್ತರಾಗಿರದೇ ಸಮಾಜ ಸುಧಾರಕರಾಗಿ, ಕಾಲಜ್ಞಾನಿಯಾಗಿ ಮತ್ತು ಜಾತಿ ವಿರೋಧಿಯಾಗಿ ಮೂಡಿಬಂದಿದ್ದಾರೆ. ತಮ್ಮ ‘ಕಾಲಜ್ಞಾನ’, ‘ನಾದ ಬ್ರಹ್ಮಾನಂದ ನಾರೇಯಣಕವಿ ಶತಕ’ ಮುಂತಾದ ಕೃತಿಗಳ ಮೂಲಕ ಮಾನವ ಕುಲ ಒಂದೇ ಎಂಬ ವಿಶ್ವಬಂಧುತ್ವದ ಸಂದೇಶವನ್ನು ಸಾರಿದ್ದಾರೆ. ಹುಟ್ಟಿನಿಂದ ಮೇಲು-ಕೀಳು ಎಂಬ ಮೌಢ್ಯವನ್ನು ಖಂಡಿಸಿ, ಜಾತಿ ಪದ್ಧತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಮನುಷ್ಯನು ಲೌಕಿಕ ಭೋಗಗಳನ್ನು ತ್ಯಜಿಸಿ, ಪರೋಪಕಾರಿಯಾಗಿ ಬಾಳುವ ಮೂಲಕ ತನ್ನಲ್ಲಿ ಅಡಗಿರುವ ತತ್ವಜ್ಞಾನವೆಂಬ ‘ಕೋಟಿ ಧನ’ವನ್ನು ಅರಿಯಬೇಕು ಎಂಬ ಅವರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆಶಯಗಳನ್ನು ಈ ಬರಹವು ಎತ್ತಿ ತೋರಿಸುತ್ತದೆ.

Article Details

Section

Research Articles

Author Biography

ಡಾ. ಎಂ.ಎನ್. ಕವಿತಾ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಬ್ಬಹಳ್ಳಿ.

How to Cite

ಎಂ.ಎನ್. ಕವಿತಾ. (2026). ಸಮ ಸಮಾಜದ ನೇತಾರ ಭಕ್ತಿ ಸಾಹಿತ್ಯದ ಅನನ್ಯ ಚೈತನ್ಯ: ದ್ವಿಭಾಷಿ ತತ್ವಪದಕಾರ ಕೈವಾರ ತಾತಯ್ಯ. ಅಕ್ಷರಸೂರ್ಯ (AKSHARASURYA), 17(04), 29 to 34. https://aksharasurya.com/index.php/latest/article/view/2333

References