ಡಾ. ಸಿದ್ಧಲಿಂಗಯ್ಯನವರ ನಾಟಕಗಳಲ್ಲಿ ಪರ್ಯಾಯ ಸಾಂಸ್ಕೃತಿಕ ಚಿಂತನೆ
Main Article Content
Abstract
ದಲಿತ ಕವಿ ಡಾ. ಸಿದ್ಧಲಿಂಗಯ್ಯನವರ ‘ಏಕಲವ್ಯ’, ‘ಪಂಚಮ’ ಹಾಗೂ ‘ನೆಲಸಮ’ ನಾಟಕಗಳು ಶೋಷಿತ ಸಮುದಾಯಗಳ ಪರ್ಯಾಯ ಸಾಂಸ್ಕೃತಿಕ ಹಾಗೂ ತಾತ್ವಿಕ ನಿರೂಪಣೆಯಾಗಿ ಮೂಡಿಬಂದಿವೆ. ಪುರಾಣದ ಕಥೆಯನ್ನು ಮರುಸೃಷ್ಟಿಸಿ ಶೂದ್ರ ಪ್ರಜ್ಞೆಯನ್ನು ಜಾಗೃತಗೊಳಿಸುವ ‘ಏಕಲವ್ಯ’, ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿದ್ಯಾವಂತ ದಲಿತರು ಎದುರಿಸುತ್ತಿರುವ ನೌಕರಶಾಹಿಯ ಜಾತಿ ತಾರತಮ್ಯವನ್ನು ವಿಡಂಬಿಸುವ ‘ಪಂಚಮ’ ಮತ್ತು ನಗರೀಕರಣದ ಸೌಂದರ್ಯೀಕರಣದ ಹೆಸರಿನಲ್ಲಿ ನಿರ್ಗತಿಕರನ್ನು ಒಕ್ಕಲೆಬ್ಬಿಸುವ ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನಿಸುವ ‘ನೆಲಸಮ’ ನಾಟಕಗಳು ಶೋಷಣೆಯ ಮೂಲವನ್ನು ಶೋಧಿಸುತ್ತವೆ. ಧಾರ್ಮಿಕ ಮೌಢ್ಯ, ಹುಸಿ ಮೌಲ್ಯಗಳು ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಬಂಡಾಯವೆದ್ದು, ಸಮಸಮಾಜದ ನಿರ್ಮಾಣಕ್ಕಾಗಿ ನಿರಂತರ ಹೋರಾಟವೇ ಅನಿವಾರ್ಯ ಎಂಬ ದಲಿತ ಸ್ವಾಭಿಮಾನದ ಎಚ್ಚರವನ್ನು ಈ ಕೃತಿಗಳು ಹೇಗೆ ಕಟ್ಟಿಕೊಟ್ಟಿವೆ ಎಂಬುದನ್ನು ಇಲ್ಲಿ ವಸ್ತುನಿಷ್ಠವಾಗಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ದಂಡಪ್ಪ ಎಚ್. (ಸಂ.), (2001), ಬಡವರ ನಗುವಿನ ಶಕ್ತಿ, ಬೆಂಗಳೂರು: ಅಂಕಿತ ಪುಸ್ತಕ, ಪು.ಸಂ. 226
ಡಾ. ಸಿದ್ಧಲಿಂಗಯ್ಯ, (2025), ಏಕಲವ್ಯ, ಬೆಂಗಳೂರು: ಅಂಕಿತ ಪುಸ್ತಕ, ಪು.ಸಂ. 35
ಅದೇ, ಪು.ಸಂ. 28-29
ಉಮಾಶಂಕರ ಎಚ್.ಡಿ. (ಸಂ.), ಸುಡುವ ನೆತ್ತಿಯ ಸಿಂಬೆ, ಪು.ಸಂ. 116
ಡಾ. ಸಿದ್ಧಲಿಂಗಯ್ಯ, (2025), ಏಕಲವ್ಯ, ಬೆಂಗಳೂರು: ಅಂಕಿತ ಪುಸ್ತಕ, ಪು.ಸಂ. 56
ಅರವಿಂದ ಮಾಲಗತ್ತಿ (ಪ್ರ.ಸಂ.), (2015), ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ: ಸಂಪುಟ-6: ಕಾದಂಬರಿ-ನಾಟಕ-ಸಂಶೋಧನೆ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಪು.ಸಂ. 493
ಮರುಳಸಿದ್ದಪ್ಪ ಕೆ. (ಸಂ.), (2001), ಶತಮಾನದ ನಾಟಕ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಪು.ಸಂ. 823