ನಾಗರಾಳ ಮನೆತನದ ಕೃಷಿ ತಾತ್ವಿಕತೆ, ಪ್ರಾಯೋಗಿಕತೆಯ ಅನುಸಂಧಾನ
Main Article Content
Abstract
ನಾಗರಾಳ ಮನೆತನವು ಶ್ರೀ ಘನಮಠ ಶಿವಯೋಗಿಗಳ ‘ಕೃಷಿಜ್ಞಾನ ಪ್ರದೀಪಿಕೆ’ಯ ತಾತ್ವಿಕ ಬೋಧನೆಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು, ಸತತ ಮೂರು ತಲೆಮಾರುಗಳಿಂದ ಒಣಬೇಸಾಯದಲ್ಲಿ ಕ್ರಾಂತಿಕಾರಕ ಸಾಧನೆಗೈದಿದೆ. ಸಂಗನಬಸಪ್ಪನವರು ಹಸ್ತಪ್ರತಿಯಾಗಿ ತಂದ ಈ ಅಮೂಲ್ಯ ಜ್ಞಾನವು, ಬರದ ವಿರುದ್ಧ ಸಮರ ಸಾರುವ ‘ಗುಂಡಾವರ್ತಿ’ಯಂತಹ ದೇಶೀ ಜಲ-ಮಣ್ಣು ಸಂರಕ್ಷಣಾ ತಂತ್ರಗಳ ಮೂಲಕ ಇಡೀ ರೈತ ಸಮುದಾಯಕ್ಕೆ ದಾರಿದೀಪವಾಗಿದೆ. ಎರಡನೇ ತಲೆಮಾರಿನ ಶಂಕರಣ್ಣ ನಾಗರಾಳರು ಕೃಷಿ ವಚನಗಳ ರಚನೆಯ ಮೂಲಕ ಅನಕ್ಷರಸ್ಥ ರೈತರಲ್ಲಿ ಬೌದ್ಧಿಕ ಜಾಗೃತಿ ಮೂಡಿಸಿದರೆ, ಡಾ. ಮಲ್ಲಣ್ಣ ನಾಗರಾಳರು ಆಧುನಿಕ ವಿಜ್ಞಾನ, ಪರಿಸರ ಕಾಳಜಿ ಹಾಗೂ ಜಲಸಾಕ್ಷರತೆಯೊಂದಿಗೆ ಈ ಪರಂಪರೆಗೆ ಸಾಂಸ್ಥಿಕ ಮಾನ್ಯತೆ ತಂದುಕೊಟ್ಟರು. ಕೃಷಿಯನ್ನು ಕೇವಲ ಆರ್ಥಿಕ ಲಾಭದ ವೃತ್ತಿಯಾಗಿ ನೋಡದೆ, ಶರಣರ ಕಾಯಕ ಮತ್ತು ದಾಸೋಹ ತತ್ವದಂತೆ ಮುನ್ನಡೆಸಿದ ಈ ಯಶೋಗಾಥೆಯು ಸ್ವಾವಲಂಬನೆ ಮತ್ತು ಸಮರ್ಥ ಬರ ನಿರ್ವಹಣೆಯ ನೈಜ ದ್ಯೋತಕವಾಗಿದೆ. ಕೃಷಿ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಇಂದಿನ ದಿನಮಾನಗಳಿಗೆ ಈ ಮಣ್ಣಿನ ಪರಂಪರೆ ಅತ್ಯಂತ ಪ್ರಸ್ತುತವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮಲ್ಲಣ್ಣ ಶಂಕರಣ್ಣ ನಾಗರಾಳ, (2010), ಒಣ ಬೇಸಾಯ ಪದ್ಧತಿಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಶ್ರೀಪಡ್ರೆ, (2004), ಶರಣು ಬನ್ನಿ ಜಲಕಾಯಕಕೆ, ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್.
ಕೊನೆಸಾಗರ ಎಸ್. ಕೆ., (2006), ಅಂಗೈ ಅಗಲ ಭೂಮಿಯಲ್ಲಿ ಭರ್ಜರಿ ಇಳುವರಿ ಪಡೆದ ಮಲ್ಲಣ್ಣ (ಪ್ರಜಾವಾಣಿ ಪತ್ರಿಕೆ ಲೇಖನ), ಹುಬ್ಬಳ್ಳಿ: ಪ್ರಜಾವಾಣಿ ಪತ್ರಿಕಾ ಪ್ರಕಾಶನ.
ಬಸವರಾಜ ತೆಗ್ಗಿನಮಠ, (2001), ಶಂಕರಣ್ಣ ನಾಗರಾಳ (ವೀರಶೈವ ಪುಣ್ಯಪುರುಷ ಸಾಹಿತ್ಯರತ್ನಮಾಲೆ-168), ಗದಗ: ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಸಂಸ್ಥಾನಮಠ.
ಶ್ರೀಪಡ್ರೆ, (2008), ಕರ್ನಾಟಕದ ಬರನಿರೋಧಕ ಜಾಣ್ಮೆಗಳು (ಮಣ್ಣು ಮತ್ತು ನೀರು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಮಲ್ಲಣ್ಣ ನಾಗರಾಳ ಮತ್ತು ಡಾ. ವಿರೂಪಾಕ್ಷ ಬಡಿಗೇರ, (2018), ಘನಮಠ ಶಿವಯೋಗಿ ವಿರಚಿತ ಕೃಷಿಜ್ಞಾನ ಪ್ರದೀಪಿಕೆ – ಒಂದು ಸಮೀಕ್ಷೆ, ಧಾರವಾಡ: ಕೃಷಿ ಕಾಮಧೇನು ಪ್ರಕಾಶನ.
ಮಲ್ಲಣ್ಣ ನಾಗರಾಳ, (2019), ಕೃಷಿನಿಧಿ ಘನಮಠದಪ್ಪ, ಸಂತೆಕೆಲ್ಲೂರ: ಘನಮಠೇಶ್ವರ ಮಠ.
ಮಾಗಿ ಬಿ. ಎಂ., ನಾಗರಾಳ ಸಂಗನಬಸಪ್ಪನವರು (ವೀರಶೈವ ಪುಣ್ಯಪುರುಷರ ಮಾಲೆ), ಗದಗ: ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಸಂಸ್ಥಾನಮಠ.