ಡಾ. ರಾಜಶೇಖರ ನೀರಮಾನ್ವಿ ಕಥೆಗಳಲ್ಲಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಜನ-ಜೀವನ
Main Article Content
Abstract
ಡಾ. ರಾಜಶೇಖರ ನೀರಮಾನ್ವಿ ಪ್ರಕಟಿಸಿದ್ದು ಎರಡೇ ಕವನ ಸಂಕಲನ. ಆದರೆ ಅವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಹೆಜ್ಜೆಗುರುತನ್ನು ಉಳಿಸಿವೆ. ನೀರಮಾನ್ವಿ ಕಥೆಗಳ ಕುರಿತಾದ ಈ ಲೇಖನವು ಸಾಮಾಜಿಕ, ಸಾಹಿತ್ಯಕ, ಪ್ರಾದೇಶಿಕ ಅಧ್ಯನವಾಗಿದ್ದು ವಸ್ತು ವಿಶ್ಲೇಷಣಾತ್ಮಕವಾಗಿದೆ. ಮಾತ್ರವಲ್ಲ ನೀರಮಾನ್ವಿಯವರ ಕಥೆಗಳಲ್ಲಿ ಬರುವ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಭಾಷೆಯ ಸೊಗಡನ್ನು ಗುರುತಿಸುವುದು. ಕಥೆಯಲ್ಲಿ ಬರುವ ತಾತ್ವಿಕತೆ ಮತ್ತು ಸಾತ್ವಿಕ ಸ್ವಭಾವವನ್ನು ಗುರುತಿಸುವುದು. ಕಥೆಯ ನಿರ್ವಹಣಾ ತಂತ್ರವನ್ನು ಗುರುತಿಸುವುದು. ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನುಡಿಗಟ್ಟನ್ನು ಗುರುತಿಸಿ. ಆ ಮೂಲಕ ಇಲ್ಲಿಯ ಜನಜೀವನವನ್ನು ಲೇಖಕರು ತಮ್ಮ ಕಥೆಯಲ್ಲಿ ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಕುರಿತ ಅಧ್ಯಯನವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಡೋಜ ಡಾ. ಮನು. ಬಳಿಗಾರ್ (ಪ್ರ. ಸಂ.), ಡಾ. ಬಸವರಾಜ ಸಬರದ (ಸಂ), ಹೈದ್ರಬಾದ ಕರ್ನಾಟಕದ ಆಧುನಿಕ ಸಾಹಿತ್ಯ ಚರಿತ್ರೆ (2018), ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.
ಡಾ. ಜಿ. ಆರ್. ತಿಪ್ಪೇಸ್ವಾಮಿ, ಸಣ್ಣಕಥೆ (2022), ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.
ಡಾ. ಹರಿಕೃಷ್ಣ ಭರಣ್ಯ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ (2021, 3ನೇ ಮುದ್ರಣ), ಸಪ್ನ ಬುಕ್ ಹೌಸ್, ಬೆಂಗಳೂರು.
ಜಿ. ಎಚ್. ನಾಯಕ, ಕನ್ನಡ ಸಣ್ಣಕಥೆಗಳು (ಸಂ) (2018, 10ನೇ ಮುದ್ರಣ), ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ಹೊಸದೇಹಲಿ.
ಡಿ. ಎಲ್. ನರಸಿಂಹಾಚಾರ್, 'ಶಿವಕೋಟ್ಯಾಚಾರ ವಿರಚಿತ ವಡ್ಡರಾಧಾನೆ'(ಸಂ) (2005, 19ನೇ ಮುದ್ರಣ), ಡಿ.ವಿ.ಕೆ. ಪ್ರಕಾಶನ, ಮೈಸೂರು.
ನಾಡೋಜ ಡಾ. ಮನು. ಬಳಿಗಾರ್ (ಪ್ರ. ಸಂ.), ಡಾ. ಪದ್ಮರಾಜ ದಂಡಾವತಿ (ಸಂ), ಕಲ್ಯಾಣ ಕಿರಣ (2021), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಅಶೋಕ ಟಿ. ಪಿ., ಹೊಸ ಓದು ಮರು ಓದು (2021), ರವೀಂದ್ರ ಪುಸ್ತಕಾಲಯ, ಶಿವಮೊಗ್ಗ.
ಪ್ರೊ. ಅಲ್ಲಮಪ್ರಭು ಬೆಟ್ಟದೂರ, ಸಹಜ ವಿಮರ್ಶೆ (2011), ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು, ಗುಲ್ಬರ್ಗಾ.