ಸಾಹಿತ್ಯ ಮತ್ತು ಚಿತ್ರಕಲೆಗಳ ಐತಿಹಾಸಿಕ ಬೆಳವಣಿಗೆ
Main Article Content
Abstract
ಚಿತ್ರಕಲೆ ಮತ್ತು ಸಾಹಿತ್ಯಗಳು ಮೂಲದಲ್ಲಿ ಶುದ್ಧ ಜನಪದೀಯವಾಗಿದ್ದವು. ಯಾವುದೇ ಶಿಸ್ತಿಗೆ ಒಳಪಡದ ಹಾಗೆ ಜನಸಾಮಾನ್ಯರ ವಲಯದಲ್ಲಿ ರಚನೆಯಾಗುತ್ತಿದ್ದವು. ಕೇವಲ ಚಿತ್ರಕಲೆ ಮತ್ತು ಸಾಹಿತ್ಯವಷ್ಟೇ ಅಲ್ಲ. ಎಲ್ಲ ಬಗೆಯ ಕಲಾಪ್ರಕಾರಗಳಿಗೂ ಈ ಮಾತು ಅನ್ವಯಿಸುತ್ತದೆ. ರಂಗಭೂಮಿಯು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಕೆ.ವಿ.ಅಕ್ಷರ ಅವರು ಹೀಗೆ ಹೇಳಿದ್ದಾರೆ: “ನಾಟಕ ಸಾಹಿತ್ಯ, ಅಭಿನಯ, ರಂಗತಂತ್ರಗಳು ಮುಂತಾದ ಎಲ್ಲಾ ಅಂಗೋಪಾಂಗಗಳನ್ನು ಬೆಳೆಸಿಕೊಂಡ ಸಂಘಟಿತ ಮಾಧ್ಯಮಗಳನ್ನು ಮಾತ್ರ ನಾವು 'ರಂಗಭೂಮಿ' ಎಂದು ಕರೆಯುವುದಾದರೆ, ಅಂತಹ ರಂಗಭೂಮಿ ಹುಟ್ಟಿದ್ದು ತುಂಬ ತಡವಾಗಿ. ಅಂದರೆ, ಮೊದಲು ವಿಕಾಸಗೊಂಡ ಮನುಷ್ಯಜೀವಿಗಳಿಗಿಂತ ಎಷ್ಟೋ ಸಾವಿರ ವರ್ಷಗಳಷ್ಟು ತಡವಾಗಿ. ಕಾಲಾಂತರದಲ್ಲಿ ಸಾಹಿತ್ಯ ಮತ್ತು ಚಿತ್ರಕಲೆಗಳು ವ್ಯವಸ್ಥಿತವಾಗಿ ರಚನೆಯಾಗಿ ಲಲಿತಕಲೆಗಳಲ್ಲಿ ಸ್ಥಾನಗಳಿಸಿದವು. ಆದರೆ ಈಗಾಗಲೇ ಚಿತ್ರಕಲೆ ಮತ್ತು ಸಾಹಿತ್ಯಗಳು ಪ್ರತ್ಯೇಕ ಕಲಾಶಿಸ್ತುಗಳಾಗಿ ಬೆಳವಣಿಗೆಯನ್ನು ಪಡೆದಿದ್ದವು. ಈ ಹಿನ್ನೆಲೆಯಲ್ಲಿ ಇಲ್ಲಿ ಚಿತ್ರಕಲೆ ಮತ್ತು ಸಾಹಿತ್ಯಗಳ ಬೆಳವಣಿಗೆಯ ಹಂತವನ್ನು ಗಮನಿಸುವ ಪ್ರಯತ್ನವನ್ನು ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅಕ್ಷರ ಕೆ.ವಿ., ರಂಗಪ್ರಪಂಚ (1994), ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಪು. 19.
ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ, ಕನ್ನಡ ಸಂಸ್ಕೃತ ನಿಘಂಟು (1988,), ಪ್ರಥಮ ಭಾಗ, ಬೆಂಗಳೂರು, ಪು. 489.
ತಿಪ್ಪೇಸ್ವಾಮಿ ಪಿ.ಆರ್., ಕರ್ನಾಟಕ ಚರಿತ್ರೆ: ಅವಲೋಕನ (1985), ಕನ್ನಡ ಸಂಸ್ಕೃತಿ, ನಿರ್ದೇಶನಾಲಯ, ಬೆಂಗಳೂರು, ಪು. 328.
ಶಿಲಾಮಾಧ್ಯಮದಲ್ಲಿರುವ ಬಹುಪಾಲು ಶಾಸನಗಳು ವ್ಯಕ್ತಿಚಿತ್ರಗಳೇ ಆಗಿರುವುದನ್ನು ಗಮನಿಸಬೇಕು. ಹಲ್ಮಿಡಿ ಶಾಸನವು ಒಂದು ದಾನ ಶಾಸನವೇ ಆಗಿದ್ದರೂ ಮೂರುತಃ ಅದೂ ಸಹ ಒಂದು ವ್ಯಕ್ತಿಚಿತ್ರವೇ. ಬಾದಾಮಿ ಶಾಸನವಂತೂ ಕಪ್ಪೆ ಅರಭಟ್ಟನೆಂಬ ರಾಜನ ವ್ಯಕ್ತಿತ್ವದ ವರ್ಣನೆಯೇ ಆಗಿದೆ. ದೃಶ್ಯಮಾಧ್ಯಮಕ್ಕೆ ಸೇರಿದವರೆ ಎನಿಸುವ ಹಲವು ಬಹುಪಾಲು ಚಿತ್ರಗಳು ಸಹ ಹೆಚ್ಚೆಕಡಿಮೆ ವ್ಯಕ್ತಿಚಿತ್ರಗಳಾಗಿರುವುದನ್ನು ಗಮನಿಸಬೇಕು. ಇದು ಕೇವಲ ಕಾಕತಾಳೀಯವಲ್ಲ.
ಅನಂತರಂಗಾಚಾರ್ ಎನ್., ಪಂಪಭಾರತ (2005), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪು. 80.
ನೃಪತುಂಗನ ಆಸ್ಥಾನಕವಿಯಾಗಿದ್ದ ಶ್ರೀವಿಜಯನು ತನ್ನ ಆಶ್ರಯದಾತನ ಬಗ್ಗೆ ಹೀಗೆ ವಿನಯವನ್ನು ಪ್ರಕಟಿಸಿದ ಕಾರಣದಿಂದಲೇ ಕವಿರಾಜಮಾರ್ಗವನ್ನು ಬರೆದದ್ದು ಶ್ರೀವಿಜಯನೋ ಅಥವಾ ನೃಪತುಂಗನೋ ಎಂಬ ಜಿಜ್ಞಾಸೆ ನಡೆದದ್ದು.
ಭಾರತದ ಗ್ಯಾಜೆಟಿಯರ್, ಕರ್ನಾಟಕ ರಾಜ್ಯ, ಬಿಜಾಪುರ ಜಿಲ್ಲೆ, 1996.