ಪಶ್ಚಿಮ ಮತ್ತು ಪೂರ್ವಗಳಲ್ಲಿ ಭಾಷಾಂತರ ಅಧ್ಯಯನದ ಪ್ರಾಥಮಿಕ ಚರ್ಚೆಗಳು
Main Article Content
Abstract
ಪಶ್ಚಿಮದ ಭಾಷಾಂತರ ಸಿದ್ದಾಂತಗಳ ಪ್ರಕಾರ ಭಾಷಾಂತರ ಪ್ರಕ್ರಿಯೆಯು ಆರಂಭವಾದದ್ದು ಲಿಖಿತ ರೂಪದ ಸಾಹಿತ್ಯ ರಚನೆಯಾದ ಮೇಲೆಯೇ. ಜನಪದ ಸಾಹಿತ್ಯಕ್ಕೆ ಪಶ್ಚಿಮವು ಅಷ್ಟೊಂದು ಪ್ರಾಮುಖ್ಯತೆ ನೀಡಲಿಲ್ಲವಾದ್ದರಿಂದ ಮತ್ತು ಅವರಲ್ಲಿ ಲಿಖಿತ ರೂಪದ ಸಾಹಿತ್ಯವನ್ನಷ್ಟೆ ಭಾಷಾಂತರ ಅಧ್ಯಯನದ ಶಿಸ್ತಿಗೆ ಒಳಪಡಿಸಿ ನೋಡುವ ಪರಿಪಾಠವಿದ್ದುದರಿಂದ ಅಲ್ಲಿ ಇಂತಹ ನಂಬಿಕೆ ಇದೆ. Oral Translation ಬಗೆಗೆ ಅವರು ಚರ್ಚೆ ನಡೆಸಿದ್ದಾರಾದರೂ, ಸಾಹಿತ್ಯವನ್ನು ಈ ಪರಿಧಿಯಲ್ಲಿ ಇಟ್ಟು ನೋಡಿಲ್ಲ. ಆದರೆ ನಮ್ಮ ಭಾರತೀಯ ಸಂದರ್ಭಕ್ಕೆ ಸಂಬಂಧಿಸಿದಂತೆ ಚರ್ಚಿಸುವಾಗ ಹೀಗೆ ಹೇಳಲಾಗುವುದಿಲ್ಲ. ಪುರಾಣಗಳು, ಪ್ರಾಚೀನ ಕಾವ್ಯ ಕೃತಿಗಳು ಮತ್ತು ಜನಪದ ಕೃತಿ ಸಮುಚ್ಚಯಗಳು ಲಿಖಿತ ರೂಪಕ್ಕೆ ಬರುವುದಕ್ಕಿಂತ ಮೊದಲೇ ಅನ್ಯ ಭಾಷೆಗಳಿಗೆ ಅನುವಾದಗೊಂಡಿವೆ. ಪೂರ್ಣ ಪ್ರಮಾಣದಲ್ಲಿ ಕೆಲವು ಕೃತಿಗಳು ಅನುವಾದಗೊಂಡಿದ್ದರೆ, ಇನ್ನು ಕೆಲವು ಭಾಗಶಃ ಅನುವಾದಗೊಂಡಿವೆ. ಒಂದೇ ಜನಪದ ಕಥೆಯು ಭಾರತದ ಹಲವು ಭಾಷೆಗಳಲ್ಲಿ ಬೇರೆ ಬೇರೆ ಆವೃತ್ತಿಗಳಲ್ಲಿ ಪ್ರಚಲಿತದಲ್ಲಿರುವುದನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. (ಗಮನಿಸಿ: ಫೋಕ್ ಟೇಲ್ಸ್ ಫ್ರಂ ಇಂಡಿಯಾ, ಎ.ಕೆ. ರಾಮಾನುಜನ್, 1992) ಈ ಹಿನ್ನೆಲೆಯಲ್ಲಿ ಪಶ್ಚಿಮ ಮತ್ತು ಪೂರ್ವಗಳಲ್ಲಿ ನಡೆದ ಭಾಷಾಂತರ ಪ್ರಕ್ರಿಯೆಗಳನ್ನು ತೌಲನಿಕ ಚರ್ಚೆಗೆ ಒಳಪಡಿಸಿ ಭಾಷಾಂತರ ಮೀಮಾಂಸೆಯು ಬೆಳೆದು ಬಂದ ಬಗೆಯನ್ನು ಅರಿಯಬೇಕಿದೆ. ಇಲ್ಲಿ ಅಂತಹ ಕಿರುಪ್ರಯತ್ನವನ್ನು ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಎಡ್ವಿನ್ ಜೆಂಟ್ಲರ್, ಕಾಂಟೆಂಪರರಿ ಟ್ರಾನ್ಸ್‌ಲೇಶನ್ ಥಿಯರಿ (2010), ವೈವಾ ಬುಕ್ಸ್, ದೆಹಲಿ.
ಕರೀಗೌಡ ಬೀಚನಹಳ್ಳಿ (ಸಂ), ಭಾಷಾಂತರದ ಸಾಂಸ್ಕೃತಿಕ ನೆಲೆಗಳು (1999), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕರೀಗೌಡ ಬೀಚನಹಳ್ಳಿ (ಅನು), ಕಥೆ ಮತ್ತು ಹಾಡು (2003), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕೀರ್ತಿನಾಥ ಕುರ್ತಕೋಟಿ, ಉರಿಯ-ಉಯಲೆ (1992), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕ್ಲಿಫೋರ್ಡ್ ಇ. ಲ್ಯಾಂಡರ್ಸ್, ಲಿಟರರಿ ಟ್ರಾನ್ಸ್‌ಲೇಶನ್: ಎ ಪ್ರಾಕ್ಟಿಕಲ್ ಗೈಡ್ (2010), ವೈವಾ ಬುಕ್ಸ್, ದೆಹಲಿ.
ತಾರಕೇಶ್ವರ ವಿ.ಬಿ., ವಸಾಹತುಶಾಹಿ ಮತ್ತು ಭಾಷಾಂತರ (2006), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ನಾಗರಾಜ್ ಡಿ.ಆರ್., ಸಾಹಿತ್ಯ ಕಥನ (2006), ಅಕ್ಷರ ಪ್ರಕಾಶನ, ಸಾಗರ.
ನಾಗರಾಜ್ ಡಿ.ಆರ್., ಸಂಸ್ಕೃತಿ ಕಥನ (2006), ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಪ್ರಧಾನ್ ಗುರುದತ್ತ, ಭಾಷಾಂತರ ಕಲೆ (1989), ಬಿ.ಎಂ. ಶ್ರೀ ಪ್ರತಿಷ್ಠಾನ, ಬೆಂಗಳೂರು.
ಪ್ರಧಾನ್ ಗುರುದತ್ತ, ಅನುವರಣ (2007), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಬಸವರಾಜ ಕಲ್ಗುಡಿ (ಪ್ರ.ಸಂ), ಬರಹಮುಖಿ-5 (2009), ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಮಹಾಬಲೇಶ್ವರರಾವ್(ಅನು), ಭಾರತೀಯ ಜನಪದ ಕಥೆಗಳು (2000), ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ದೆಹಲಿ.
ರಹಮತ್ ತರೀಕೆರೆ (ಸಂ), ಇಂಗ್ಲಿಷ್ ಗೀತೆಗಳು: ಸಾಂಸ್ಕೃತಿಕ ಮುಖಾಮುಖಿ (2007), ಕನ್ನಡ ವಿಶ್ವವಿದ್ಯಾಲಯ, ಹಂಪಿ.
ರಾಮಚಂದ್ರನ್ ಸಿ. ಎನ್., ವಸಾಹತೋತ್ತರ ಚಿಂತನೆ (2000), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ರಾಮಚಂದ್ರನ್ ಸಿ.ಎನ್., ತೌಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು (1998), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ರಾಮಾನುಜನ್ ಎ.ಕೆ., ಫೋಕ್ ಟೇಲ್ಸ್ ಫ್ರಂ ಇಂಡಿಯಾ (1992), ಪೆಂಗ್ವಿನ್ ಕ್ಲಾಸಿಕ್ಸ್.
ರಾಮಾನುಜನ್ ಎ.ಕೆ., ಸ್ಪೀಕಿಂಗ್ ಆಫ್ ಶಿವ (1973), ಪೆಂಗ್ವಿನ್ ಕ್ಲಾಸಿಕ್ಸ್.
ಶೇಷಗಿರಿರಾವ್ ಎಲ್.ಎಸ್., ಹೊಸಗನ್ನಡ ಸಾಹಿತ್ಯ ಚರಿತ್ರೆ (2006), ಅಂಕಿತ ಪುಸ್ತಕ, ಬೆಂಗಳೂರು.
ಶ್ರೀಕಂಠೇಶಗೌಡ ಎಂ.ಎಲ್., ಶ್ರೀಕಂಠೇಶಗೌಡರ ಕೃತಿಗಳು (1974), ಸಂ:ಹ. ಕ.ರಾಜೇಗೌಡ, ಶ್ರೀಕಂಠೇಶಗೌಡ ಸ್ಮಾರಕ ಸಮಿತಿ, ಮೈಸೂರು.
ಶ್ರೀನಿವಾಸ ಹಾವನೂರು, ಹೊಸಗನ್ನಡದ ಅರುಣೋದಯ (2000), ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಷೆಲ್ಡನ್ ಪೊಲಾಕ್, ವಿಶ್ವಾತ್ಮಕ ದೇಶಭಾಷೆ (2003), ಅಕ್ಷರ ಪ್ರಕಾಶನ, ಸಾಗರ.
ಸಿ.ಪಿ.ಕೆ., ಭಾಷಾಂತರ ಭಾರತಿ (2007), ಮೈಸೂರು.
ಸುಬ್ಬಣ್ಣ ಕೆ.ವಿ., ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (2000), ಅಕ್ಷರ ಪ್ರಕಾಶನ, ಸಾಗರ.
ಸುಸಾನ್ ಬಾಸ್ನೆಟ್, ತೌಲನಿಕ ಸಾಹಿತ್ಯ (ಅನು) (2008), ಸಂ: ಕೆ. ವಿ. ಶಿವರೆಡ್ಡಿ, ರಾಮಲಿಂಗಪ್ಪ ಟಿ.ಬೇಗೂರು, ಅಧ್ಯಯನ ಮಂಡಲ, ಬೆಂಗಳೂರು.
ಸುಸಾನ್ ಬಾಸ್ನೆಟ್, ಟ್ರಾನ್ಸ್‌ಲೇಶನ್ ಸ್ಟಡೀಸ್ (1981), ಲಂಡನ್, ರೂಟ್ಲೆಡ್ಜ್.