ವಚನಕಾರರ ಕಣ್ಣಲ್ಲಿ ಹೆಣ್ಣು

Main Article Content

ಡಾ. ಸುಧಾ ಬಿ.ಎಸ್.

Abstract

ಕನ್ನಡ ಸಾಹಿತ್ಯದಲ್ಲಿ ವಚನಗಳಿಗೆ ವಿಶೇಷ ಸ್ಥಾನವಿದೆ. ವಿಶ್ವಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ವಿಶಿಷ್ಟ ಕೊಡುಗೆ ವಚನಸಾಹಿತ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರ ಜೊತೆಗೆ ವಚನಕಾರರ ಹೆಣ್ಣನ್ನು ಕುರಿತ ಆಲೋಚನೆಗಳೂ ಕೂಡ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಒಳಗಾಗಬಹುದಾದ ವಿಷಯವೇ ಆಗಿದೆ. ಏಕೆಂದರೆ ವಚನಕಾರರ ಹೆಣ್ಣನ್ನು ಕುರಿತ ಆಲೋಚನೆಗಳು ಮೇಲ್ನೋಟಕ್ಕೆ ಸಾಂಪ್ರದಾಯಿಕ ನೋಟಕ್ರಮದಿಂದ ಕೂಡಿವೆ ಎಂದೆನಿಸಿದರೂ ಅವು ಆಂತರ್ಯದಲ್ಲಿ ಹೆಣ್ಣನ್ನು ಅವಳ ನಿಜದ ನೆಲೆಯಲ್ಲಿ ಗುರುತಿಸಿ, ಅವಳ ಶಕ್ತಿಯನ್ನು ಅನಾವರಣಗೊಳಿಸುತ್ತವೆ. ಈ ನಿಟ್ಟಿನಲ್ಲಿ ವಚನಕಾರರ ವಚನಗಳಲ್ಲಿ ಹೆಣ್ಣನ್ನು ಕುರಿತ ಆಲೋಚನೆಗಳು ಯಾವ ನೆಲೆಯಲ್ಲಿ ವ್ಯಕ್ತವಾಗಿವೆ ಎನ್ನುವುದು ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಿರುವ ವಿಷಯವೇ ಆಗಿದೆ. ವಚನಗಳನ್ನು ಹೆಚ್ಚು ಹೆಚ್ಚು ಚರ್ಚೆಗೆ ಒಳಪಡಿಸಿದಂತೆಲ್ಲಾ ವಚನಕಾರರ ನಿಲುವುಗಳು ಮತ್ತಷ್ಟು ಸ್ಪಷ್ಟವಾಗುತ್ತಿವೆ. ಹಾಗಾಗಿ ವಚನಗಳನ್ನು ಸೂಕ್ಷ್ಮ ಓದಿಗೆ ಒಳಪಡಿಸಿ ಹೆಣ್ಣನ್ನು ಕುರಿತ ಅವರ ನಿಲುವುಗಳನ್ನು ತಿಳಿಯುವುದು ಈ ಲೇಖನದ ಉದ್ದೇಶವಾಗಿದೆ.

Article Details

Section

Research Articles

Author Biography

ಡಾ. ಸುಧಾ ಬಿ.ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ.

How to Cite

ಸುಧಾ ಬಿ.ಎಸ್. (2026). ವಚನಕಾರರ ಕಣ್ಣಲ್ಲಿ ಹೆಣ್ಣು. ಅಕ್ಷರಸೂರ್ಯ (AKSHARASURYA), 16(01), 78 to 86. https://aksharasurya.com/index.php/latest/article/view/2133

References

ಕಲಬುರ್ಗಿ ಎಂ.ಎಂ. (ಸಂ.), (2016), ಬಸವಯುಗದ ವಚನ ಮಹಾಸಂಪುಟ -1, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಆಶಾದೇವಿ ಎಂ.ಎಸ್., (2011), ನಡುವೆ ಸುಳಿವಾತ್ಮ, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.

ರಹಮತ್ ತರೀಕೆರೆ (ಸಂ.), (2005), ಅಕ್ಕಮಹಾದೇವಿಯ ವಚನಗಳು ಸಾಂಸ್ಕೃತಿಕ ಮುಖಾಮುಖಿ, ಹಂಪಿ: ಪ್ರಸಾರಾಂಗ, ಕನ್ನಡ ವಿ.ವಿ.

ಸಬಿತಾ ಬನ್ನಾಡಿ, (2010), ಆಲಯವು ಬಯಲಾಗಿ, ಕುಂದಾಪುರ: ತಿಂಗಳುಬೆಳಕು ಪ್ರಕಾಶನ.