ಪತ್ರಗಳಲ್ಲಿ ಕಂಡ ಕುವೆಂಪು

Main Article Content

ಡಾ. ಶಿಲ್ಪಶ್ರೀ ಎಚ್.ವಿ.

Abstract

ರಾಷ್ಟ್ರಕವಿ ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಗೆ ಬರೆದ ಪತ್ರಗಳ ಹಿನ್ನೆಲೆಯಲ್ಲಿ ಅವರ ಬಹುಮುಖಿ ವ್ಯಕ್ತಿತ್ವದ ಅಪರೂಪದ ಮುಖಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. 1955ರಿಂದ 1980ರವರೆಗೆ ಬರೆದ ಈ ಪತ್ರಗಳು ಕುವೆಂಪು ಅವರನ್ನು ಕೇವಲ ದಾರ್ಶನಿಕ ಕವಿಯಾಗಿ ಮಾತ್ರವಲ್ಲದೆ, ಕಾಳಜಿಯುಕ್ತ ತಂದೆಯಾಗಿ, ಕೌಟುಂಬಿಕ ಜವಾಬ್ದಾರಿಯುಳ್ಳ ಸಂಸಾರಸ್ಥನಾಗಿ ಹಾಗೂ ಲೌಕಿಕ ವಾಸ್ತವಗಳ ಸ್ಪಷ್ಟ ಅರಿವಿದ್ದ ಮಾರ್ಗದರ್ಶಕನಾಗಿ ಪರಿಚಯಿಸುತ್ತವೆ. ಮಗನ ವಿದ್ಯಾಭ್ಯಾಸ, ಸಾಹಿತ್ಯ ಕೃಷಿ, ತೋಟದ ನಿರ್ವಹಣೆ, ಆರ್ಥಿಕ ಶಿಸ್ತು ಹಾಗೂ ಸಮಕಾಲೀನ ಸಾಮಾಜಿಕ-ರಾಜಕೀಯ ವಿದ್ಯಮಾನಗಳ ಬಗೆಗಿನ ಅವರ ನಿಲುವುಗಳು ಇಲ್ಲಿ ದಾಖಲಾಗಿವೆ. ಕವಿಯೊಬ್ಬ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸದೆ, ದೈನಂದಿನ ವಾಸ್ತವ ಬದುಕಿನ ಆಗುಹೋಗುಗಳೊಂದಿಗೆ ಹೇಗೆ ನಿಕಟ ಸಂಪರ್ಕ ಹೊಂದಿರುತ್ತಾನೆ ಎಂಬುದನ್ನು ಸಾಬೀತುಪಡಿಸುವ ಈ ಅಧ್ಯಯನವು, ಕುವೆಂಪು ಅವರ ಆಂತರಿಕ ಹಾಗೂ ಲೌಕಿಕ ಬದುಕಿನ ಸುಂದರ ಸಮನ್ವಯತೆಯನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಡುತ್ತದೆ.

Article Details

Section

Research Articles

Author Biography

ಡಾ. ಶಿಲ್ಪಶ್ರೀ ಎಚ್.ವಿ.

ಸಹ ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ಸಾಗರ, ಮಂಡ್ಯ.

How to Cite

ಶಿಲ್ಪಶ್ರೀ ಎಚ್.ವಿ. (2026). ಪತ್ರಗಳಲ್ಲಿ ಕಂಡ ಕುವೆಂಪು . ಅಕ್ಷರಸೂರ್ಯ (AKSHARASURYA), 16(01), 51 to 60. https://aksharasurya.com/index.php/latest/article/view/2132

References

ಹರಿಹರಪ್ರಿಯ, (1979), ಕುವೆಂಪು ಒಲವು ನಿಲುವು, ಬೆಂಗಳೂರು: ಬಯಲು ಪರಿಷತ್ತು.

ರಾಜೇಶ್ವರಿ ತೇಜಸ್ವಿ, (2011), ನನ್ನ ತೇಜಸ್ವಿ, ಮೈಸೂರು: ಪುಸ್ತಕ ಪ್ರಕಾಶನ.

ಶಿವಾ ರೆಡ್ಡಿ ಕೆ. ಸಿ., (2020), ಕುವೆಂಪು ಸಮಗ್ರ ಗದ್ಯ ಸಂಪುಟ 8, ಹಂಪಿ: ಕನ್ನಡ ವಿ. ವಿ.

ತಾರಿಣಿ ಚಿದಾನಂದ, (2006), ಮಗಳು ಕಂಡ ಕುವೆಂಪು, ಮೈಸೂರು: ಪುಸ್ತಕ ಪ್ರಕಾಶನ.