ಜತ್ತಪ್ಪ ರೈ ಅವರ 'ಬೇಟೆಯ ನೆನಪುಗಳು' ಕೃತಿಯ ಅವಲೋಕನ

Main Article Content

ಮೋಹನ್ ಕುಮಾರ ಕೆ. ಎಸ್.

Abstract

ದಕ್ಷಿಣ ಕನ್ನಡ ಜಿಲ್ಲೆಯ ಕೆದಂಬಾಡಿ ಜತ್ತಪ್ಪ ರೈಯವರು ಹೊಸಗನ್ನಡದ ಮೃಗಯಾ ಸಾಹಿತ್ಯಕ್ಕೆ ನೀಡಿದ ಕೊಡುಗೆ ಹಿರಿದು. ಅವರು 1978ರಲ್ಲಿ ಪ್ರಕಟಿಸಿದ 'ಬೇಟೆಯ ನೆನಪುಗಳು' ಕೃತಿಯು ಮೃಗಯಾ ಸಾಹಿತ್ಯದಲ್ಲಿಯೇ ವಿಶಿಷ್ಟವಾದದ್ದಾಗಿದೆ. ಕೇವಲ ಬೇಟೆಯ ಅನುಭವಗಳನ್ನು ಮಾತ್ರವಲ್ಲದೆ, ಕಾಡಿನ ಶ್ರೀಮಂತಿಕೆ ಹಾಗೂ ಆಗಿನ ಕಾಲದ ಬದುಕನ್ನು ಇದು ಅನಾವರಣಗೊಳಿಸುತ್ತದೆ. ಕೋವಿ ಎತ್ತಿಕಟ್ಟುವ ಕ್ರಮ, ಕಾಡಿನ ದೈವಗಳ ಆರಾಧನೆ, ಬೇಟೆಯ ನಿಯಮಗಳು ಮತ್ತು ಹುಲಿ-ಹಂದಿಯ ಹೋರಾಟದ ರೋಚಕ ವಿವರಗಳನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಹಳ್ಳಿಯ ಬದುಕಿನ ರೀತಿ, ತಾರುಣ್ಯದ ಉತ್ಸಾಹ ಹಾಗೂ ಸಾಹಸಮಯ ಬೇಟೆಯ ಚಿತ್ರಣವು ಓದುಗರನ್ನು ರೋಮಾಂಚನಗೊಳಿಸುತ್ತದೆ.

Article Details

Section

Research Articles

Author Biography

ಮೋಹನ್ ಕುಮಾರ ಕೆ. ಎಸ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ.

How to Cite

ಮೋಹನ್ ಕುಮಾರ ಕೆ. ಎಸ್. (2023). ಜತ್ತಪ್ಪ ರೈ ಅವರ ’ಬೇಟೆಯ ನೆನಪುಗಳು’ ಕೃತಿಯ ಅವಲೋಕನ. ಅಕ್ಷರಸೂರ್ಯ (AKSHARASURYA), 2(08), 139 to 145. https://aksharasurya.com/index.php/latest/article/view/209

References

ಅನುಬೆಳ್ಳೆ (2011), ಕನ್ನಡ ಬೇಟೆ ಸಾಹಿತ್ಯದ ಪೆರ್ಬುಲಿ ಕೆದಂಬಾಡಿ ಜತ್ತಪ್ಪರೈ, ವಿಸ್ಮಯ ಪ್ರಕಾಶನ, ಮೈಸೂರು.

ಜತ್ತಪ್ಪ ರೈ ಕೆದಂಬಾಡಿ (1998), ಬೇಟೆಯ ನೆನಪುಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಪ್ರಭಾಕರ ಶಿಶಿಲ 92005), ಶಿಕಾರಿಯ ಶೀಳುನೋಟ, ರಾಜ್ ಪ್ರಕಾಶನ, ಮೈಸೂರು.

ಮಾಧವ ಪೆರಾಜೆ (ಸಂ. (2013)), ಸಾಹಿತ್ಯ ಶಿಶಿಲ, ರಾಜ್ ಪ್ರಕಾಶನ, ಮೈಸೂರು.