ಮಹಿಳೆಯರ ದೃಷ್ಟಿಯಲ್ಲಿ ಅಂಬೇಡ್ಕರ್
Main Article Content
Abstract
ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಮಹಿಳೆಯು ಒಂದು ಅದ್ಭುತ ಶಕ್ತಿಯಾಗಿದ್ದಾಳೆ. ಅವಳ ಏಳಿಗೆಗಾಗಿ ಹಾಗೂ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಗೌರವಗಳನ್ನು ಒದಗಿಸಿಕೊಡುವಲ್ಲಿ ಅಂಬೇಡ್ಕರ್ ಅವರ ಹೋರಾಟವು ಇಂದಿಗೂ ನೆನಪಿನಲ್ಲಿ ಉಳಿಯುವಂತಹುದು. ಭಾರತದಲ್ಲಿ ಮಹಿಳೆಯರು ‘ತಾನಿಲ್ಲದೆ ಸಮಾಜವಿಲ್ಲ’ ಎಂಬಂತೆ ಎಂದಿಗೂ ಬದುಕಲೇ ಇಲ್ಲ; ಮತ್ತು ಈ ಸಮಾಜವು ಆಕೆಗೆ ‘ನೀನು ಸಮಾಜದಲ್ಲಿ ಅತ್ಯಮೂಲ್ಯವಾದ ಪಾತ್ರವನ್ನು ನಿರ್ವಹಿಸುತ್ತಿರುವೆ’ ಎಂಬ ಸತ್ಯವನ್ನು ತಿಳಿಸಲಿಲ್ಲ. ಇಂತಹ ಸಂದರ್ಭದಲ್ಲಿದ್ದ ಮಹಿಳೆಯ ಸ್ಥಿತಿಯನ್ನು ಬದಲಾಯಿಸಬೇಕೆಂದು ಅಂಬೇಡ್ಕರ್ ಅವರು ಹೋರಾಟ ಹಾಗೂ ಚಳುವಳಿಗಳನ್ನು ರೂಪಿಸಿದರು. ಇದರಿಂದ ಮಹಿಳೆಯರ ಸ್ಥಾನಮಾನ ಹಾಗೂ ಸಾಮಾಜಿಕ ಸಮಾನತೆಯಲ್ಲಿ ಬದಲಾವಣೆಗಳಾದವು. ಮಹಿಳೆಯರಿಗಾಗಿಯೇ ಸಂವಿಧಾನದಲ್ಲಿ ಹಲವಾರು ಕಾನೂನುಗಳನ್ನು ಜಾರಿಗೆ ತಂದರು; ಅವುಗಳಲ್ಲಿ 14ನೇ ವಿಧಿ ಸಮಾನತೆಗಾಗಿ, 15ನೇ ವಿಧಿ ತಾರತಮ್ಯ ನಿವಾರಣೆಗಾಗಿ, ಅಸ್ಪೃಶ್ಯತೆ ನಿವಾರಣೆ ಹಾಗೂ 39(ಡಿ) ವಿಧಿಗಳು ಪ್ರಮುಖವಾಗಿವೆ ಮತ್ತು ಮಹಿಳೆಯರಿಗಾಗಿ ರಾಜಕೀಯ ಮೀಸಲಾತಿಯನ್ನು ಒದಗಿಸಿದರು. ಇಷ್ಟೆಲ್ಲಾ ಕಾರ್ಯಗಳನ್ನು ನಿರ್ವಹಿಸಿದ ಅಂಬೇಡ್ಕರ್ ಅವರನ್ನು ಮಹಿಳೆಯರು ಮಾರ್ಗದರ್ಶಕರಾಗಿ ಮತ್ತು ಸ್ಫೂರ್ತಿದಾಯಕರಾಗಿ ಸ್ವೀಕರಿಸಿ, ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಮಹಿಳೆಯರು ಅವರನ್ನು ತಮ್ಮ ದೃಷ್ಟಿಕೋನದಲ್ಲಿ ಒಬ್ಬ ಧೀಮಂತ ನಾಯಕನನ್ನಾಗಿ ನೋಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಮಹಿಳೆಯರ ಸಾಮರ್ಥ್ಯದ ಬಗ್ಗೆ ಅರಿವಿಲ್ಲದ ಸಮಾಜಕ್ಕೆ, ಮಹಿಳಾ ಶಕ್ತಿಯನ್ನು ತೋರಿಸಿಕೊಟ್ಟ ಮಹಾನ್ ನಾಯಕರಲ್ಲಿ ಅಂಬೇಡ್ಕರ್ ಅವರು ಪ್ರಮುಖರಾಗಿದ್ದಾರೆ. ಮಹಿಳಾ ಶಿಕ್ಷಣಕ್ಕಾಗಿ ಅವರು ಹಲವಾರು ಚಳುವಳಿಗಳನ್ನು ರೂಪಿಸಿದರು. ಮಹಿಳೆಯರು ತಮ್ಮ ಸ್ಥಾನಮಾನಗಳನ್ನು ಬದಲಾಯಿಸಿಕೊಳ್ಳಲು ಶಿಕ್ಷಣವು ಅತ್ಯಗತ್ಯ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಅಂಬೇಡ್ಕರ್ ಯಶಸ್ವಿಯಾದರು. ಅದೇ ರೀತಿ ‘ಹಿಂದೂ ಕೋಡ್ ಬಿಲ್’ ಮೂಲಕ ಮಹಿಳೆಯರಿಗೆ ಉತ್ತರಾಧಿಕಾರದ ಹಕ್ಕು ಮತ್ತು ವಿಧವಾ ಪುನರ್ವಿವಾಹ ಕಾಯ್ದೆಯನ್ನು ತಂದು ಮಹಿಳೆಯನ್ನು ಸಮಾಜದ ಶಕ್ತಿಯನ್ನಾಗಿ ರೂಪಿಸಿದರು. ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದರು. ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗಾಗಿ ಕಾರ್ಖಾನೆಗಳು ಕಡ್ಡಾಯವಾಗಿ ಮೂಲಸೌಕರ್ಯಗಳನ್ನು ಹೊಂದಿರಬೇಕೆಂದು ನಿಯಮ ರೂಪಿಸಿದರು. ಮಹಿಳೆಯರ ಸಮಸ್ಯೆಗಳ ಕುರಿತು ಕಾರ್ಖಾನೆ ಮಾಲೀಕರಿಗೆ ಮನವರಿಕೆ ಮಾಡಿಕೊಡುವ ಮುಖಾಂತರ ಅಲ್ಲಿನ ವ್ಯವಸ್ಥೆಯನ್ನು ಬದಲಾಯಿಸಿದರು. ಅದೇ ರೀತಿ ತಮ್ಮ ಚಳುವಳಿಗಳಲ್ಲಿಯೂ ಮಹಿಳೆಯರು ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಇದರಿಂದಾಗಿ ಹಲವಾರು ಮಹಿಳೆಯರು ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸಿದರು ಮತ್ತು ಅಂಬೇಡ್ಕರ್ ಅವರೊಂದಿಗಿನ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರಾರಂಭಿಸಿದರು. ದಕ್ಷಿಣ ಏಷ್ಯಾದ ದೇಶಗಳಲ್ಲಿಯೇ ಮೊದಲ ಬಾರಿಗೆ ಇಂತಹ ಕಾಯ್ದೆಗಳನ್ನು ಜಾರಿಗೆ ತಂದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಮತ್ತು ಇದರ ಸಂಪೂರ್ಣ ಶ್ರೇಯಸ್ಸು ನೇರವಾಗಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇಂತಹ ಹಲವಾರು ಮಹತ್ಕಾರ್ಯಗಳನ್ನು ನಿರ್ವಹಿಸಿದ ಅಂಬೇಡ್ಕರ್ ಅವರು ಇಂದು ಮಹಿಳೆಯರ ಆಲೋಚನೆಗಳಲ್ಲಿ ಜೀವಂತವಾಗಿದ್ದಾರೆ. ಸಮಾಜದ ಪ್ರತಿಯೊಬ್ಬ ಸದಸ್ಯರೂ ಇವರ ಕಾರ್ಯಗಳ ಮಹತ್ವವನ್ನು ಅರಿತು, ತಮ್ಮದೇ ಆದ ದೃಷ್ಟಿಕೋನದಲ್ಲಿ ಅವರನ್ನು ಗೌರವಿಸುತ್ತಿರುವುದಕ್ಕೆ ಮತ್ತು ಮಾರ್ಗದರ್ಶಕರಾಗಿ ಸ್ವೀಕರಿಸಿರುವುದಕ್ಕೆ ಹಲವಾರು ಉದಾಹರಣೆಗಳು ನಮಗೆ ಸಿಗುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಭಾರತ ಸರ್ಕಾರ. (1955). ಹಿಂದೂ ವಿವಾಹ ಕಾಯ್ದೆ (The Hindu Marriage Act, 1955).
ಭಾರತ ಸರ್ಕಾರ. (1956). ಹಿಂದೂ ಉತ್ತರಾಧಿಕಾರ ಕಾಯ್ದೆ (The Hindu Succession Act, 1956).
ಭಾರತ ಸರ್ಕಾರ. (1956). ಹಿಂದೂ ಅಪ್ರಾಪ್ತ ವಯಸ್ಕರ ಮತ್ತು ಪಾಲಕರ ಕಾಯ್ದೆ (The Hindu Minority and Guardianship Act, 1956).
ಭಾರತ ಸರ್ಕಾರ. (1956). ಹಿಂದೂ ಕೋಡ್ ಬಿಲ್ (The Hindu Code Bill).
ಭಾರತ ಸರ್ಕಾರ. (1961). ಮಾತೃತ್ವ ಲಾಭ ಕಾಯ್ದೆ (The Maternity Benefit Act, 1961).
ಭಾರತ ಸರ್ಕಾರ. (1976). ಸಮಾನ ವೇತನ ಕಾಯ್ದೆ (The Equal Remuneration Act, 1976).
ಅಂಬೇಡ್ಕರ್, ಬಿ. ಆರ್. ಮೂಕನಾಯಕ (ಮರಾಠಿ ಪತ್ರಿಕೆ – ಸಂಪಾದಕೀಯ ಬರಹಗಳು).
ಅಂಬೇಡ್ಕರ್, ಬಿ. ಆರ್. ಬಹಿಷ್ಕೃತ ಭಾರತ (ಮರಾಠಿ ಪತ್ರಿಕೆ – ಸಂಪಾದಕೀಯ ಬರಹಗಳು).
ಅಂಬೇಡ್ಕರ್, ಬಿ. ಆರ್. ಡಾ. ಬಾಬಾಸಾಹೇಬ್ ಅಂಬೇಡ್ಕರ್ ರೈಟಿಂಗ್ಸ್ ಅಂಡ್ ಸ್ಪೀಚಸ್ (ಸಂಪುಟ 14, ಭಾಗ 1 ಮತ್ತು 2), ಶಿಕ್ಷಣ ಇಲಾಖೆ, ಮಹಾರಾಷ್ಟ್ರ ಸರ್ಕಾರ.
ಬನ್ಸೋಡೆ, ತುಳಸಿಬಾಯಿ. ಚೋಖಾಮೇಳ (ಪತ್ರಿಕೆ).
ಬೋವ್ಹಾರ್, ಸಿಮೋನ್ ದಿ. (1949). ದ ಸೆಕೆಂಡ್ ಸೆಕ್ಸ್ (The Second Sex).
ರೇಗೆ, ಶರ್ಮಿಳಾ. (2013). ಅಗೇನ್ಸ್ಟ್ ದಿ ಮ್ಯಾಡ್ನೆಸ್ ಆಫ್ ಮನು: ಬಿ.ಆರ್. ಅಂಬೇಡ್ಕರ್ಸ್ ರೈಟಿಂಗ್ಸ್ ಆನ್ ಬ್ರಾಹ್ಮಣಿಕಲ್ ಪೇಟ್ರಿಯಾರ್ಕಿ. ನವಯಾನ ಪಬ್ಲಿಷಿಂಗ್.