ಚೆನ್ನವೀರ ಕಣವಿಯವರ ಕಾಲ ನಿಲ್ಲುವುದಿಲ್ಲ ಕವಿತೆಯ ತಾತ್ವಿಕ ಅವಲೋಕನ

Main Article Content

ಶ್ರೀಮತಿ‌ ಕಾವೇರಿ ಬೋಲಾ

Abstract

ಚೆನ್ನವೀರ ಕಣವಿಯವರ 'ಕಾಲ ನಿಲ್ಲುವುದಿಲ್ಲ' ಕವಿತೆಯು ಕಾಲದ ನಿರಂತರತೆ ಮತ್ತು ಅದರ ಮಹತ್ವವನ್ನು ತಾತ್ವಿಕವಾಗಿ ವಿಶ್ಲೇಷಿಸುತ್ತದೆ. ಕಾಲವು ಯಾರಿಗಾಗಿಯೂ ಕಾಯುವುದಿಲ್ಲ, ಅದರೊಡನೆ ಹೆಜ್ಜೆ ಹಾಕದಿದ್ದರೆ ಪಶ್ಚಾತಾಪ ಕಟ್ಟಿಟ್ಟ ಬುತ್ತಿ ಎಂಬುದನ್ನು ಕವಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಪ್ರಕೃತಿಯ ಸೂರ್ಯ, ಚಂದ್ರ, ಋತುಗಳು ತಮ್ಮ ಕರ್ತವ್ಯವನ್ನು ನಿರಂತರವಾಗಿ ಮಾಡುತ್ತಿರುವಾಗ, ಮಾನವನು ಮಾತ್ರ ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಾನೆ. ಆಧುನಿಕತೆಯ ಭರಾಟೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಹಾಗೂ ಕೊಳ್ಳುಬಾಕುತನದಿಂದಾಗಿ ಮಾನವನ ನೆಮ್ಮದಿ ಮರೀಚಿಕೆಯಾಗಿದೆ. ಸಾಹಿತ್ಯ ಮತ್ತು ಬದುಕಿನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತಿದ್ದರೂ, ಕಾಲವು ಮಾತ್ರ ಯಾರಿಗೂ ನಿಲುಕದ, ಜಂಗಮಸ್ವರೂಪಿಯಾದ ಅದೃಶ್ಯ ಶಕ್ತಿಯಾಗಿ ಸದಾ ಚಲನಶೀಲವಾಗಿದೆ ಎಂಬುದನ್ನು ಈ ಕವನ ಸಾರುತ್ತದೆ.

Article Details

Section

Research Articles

Author Biography

ಶ್ರೀಮತಿ‌ ಕಾವೇರಿ ಬೋಲಾ

ಸಹಾಯಕ ಪ್ರಾಧ್ಯಾಪಕರು, ಶ್ರೀ ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುಂಡರಗಿ, ಗದಗ.

How to Cite

ಶ್ರೀಮತಿ‌ ಕಾವೇರಿ ಬೋಲಾ. (2023). ಚೆನ್ನವೀರ ಕಣವಿಯವರ ಕಾಲ ನಿಲ್ಲುವುದಿಲ್ಲ ಕವಿತೆಯ ತಾತ್ವಿಕ ಅವಲೋಕನ. ಅಕ್ಷರಸೂರ್ಯ (AKSHARASURYA), 2(08), 133 to 138. https://aksharasurya.com/index.php/latest/article/view/208

References

ಕಣವಿ ಸಮಗ್ರ ಕಾವ್ಯ (1989, ಮೊದಲ ಮುದ್ರಣ), ಸಂವಹನ ಪ್ರಕಾಶನ, ಮೈಸೂರು.

ಚೆನ್ನವೀರ ಕಣವಿ ಸಮಗ್ರ: ಸಂಪುಟ-7 (1965), ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ.

ಅಕ್ಷರ ಆಕರದಲ್ಲಿ ಚೆನ್ನವೀರ ಕಣವಿ (16 ಫೆಬ್ರುವರಿ 2022), ಡಾ. ಜಿ. ಎಮ್. ಹೆಗಡೆ, ಪ್ರಜಾವಾಣಿ ವಿಶೇಷ.