ಭಾರತೀಯ ಮಹಿಳೆಯರ ಆಶಾಕಿರಣ - ಡಾ. ಬಿ. ಆರ್. ಅಂಬೇಡ್ಕರ್

Main Article Content

ಡಾ. ಎಂ. ಎನ್. ಚಲವಾದಿ

Abstract

ಪ್ರಾಚೀನ ಕಾಲದಿಂದಲೂ ಪುರುಷಪ್ರಧಾನ ಸಮಾಜದಲ್ಲಿ ಶೋಷಣೆ, ತಾರತಮ್ಯ ಮತ್ತು ಅಜ್ಞಾನದ ಅಂಧಕಾರಕ್ಕೆ ದೂಡಲ್ಪಟ್ಟಿದ್ದ ಭಾರತೀಯ ಮಹಿಳೆಯರ ವಿಮೋಚನೆಗಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಡೆಸಿದ ಅವಿರತ ಹೋರಾಟ ಮತ್ತು ಅವರ ಕಾನೂನಾತ್ಮಕ ಕೊಡುಗೆಗಳ ಸಮಗ್ರ ಅವಲೋಕನ ಇಲ್ಲಿದೆ. ಶಿಕ್ಷಣದಿಂದ ವಂಚಿತರಾಗಿ ಎರಡನೇ ದರ್ಜೆಯ ಪ್ರಜೆಗಳಾಗಿದ್ದ ಮಹಿಳೆಯರಿಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ಹೊಸ ಬದುಕನ್ನು ಕಟ್ಟಿಕೊಡುವಲ್ಲಿ ಸಂವಿಧಾನದ ಪಾತ್ರ ಅತ್ಯಮೂಲ್ಯವಾದದ್ದು. ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಆಸ್ತಿ ಹಕ್ಕು, ವಿವಾಹ, ವಿಚ್ಛೇದನ ಹಾಗೂ ದತ್ತು ಸ್ವೀಕಾರದಂತಹ ಕ್ರಾಂತಿಕಾರಿಕ ಹಕ್ಕುಗಳನ್ನು ಒದಗಿಸಿದ ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಸಂವಿಧಾನದ ವಿವಿಧ ಅನುಚ್ಛೇದಗಳ ಮೂಲಕ ಸ್ತ್ರೀ ಸಬಲೀಕರಣಕ್ಕೆ ನಾಂದಿ ಹಾಡಿದ ಅವರ ದೂರದೃಷ್ಟಿ ಹಾಗೂ ಮಹಿಳಾಪರ ಕಾಳಜಿಯನ್ನು ಎತ್ತಿತೋರಿಸುತ್ತಾ, ಅಂಬೇಡ್ಕರ್ ಅವರನ್ನು ನೈಜ ಸ್ತ್ರೀವಾದಿ ನಾಯಕರನ್ನಾಗಿ ಬಿಂಬಿಸಲಾಗಿದೆ.

Article Details

Section

Research Articles

Author Biography

ಡಾ. ಎಂ. ಎನ್. ಚಲವಾದಿ

ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಯೋಗ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

How to Cite

ಎಂ. ಎನ್. ಚಲವಾದಿ. (2026). ಭಾರತೀಯ ಮಹಿಳೆಯರ ಆಶಾಕಿರಣ - ಡಾ. ಬಿ. ಆರ್. ಅಂಬೇಡ್ಕರ್ . ಅಕ್ಷರಸೂರ್ಯ (AKSHARASURYA), 15(05), 09 to 13. https://aksharasurya.com/index.php/latest/article/view/2079

References

ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಅಂಬೇಡ್ಕರ್ ರವರ ಬರಹಗಳು ಮತ್ತು ಭಾಷಣಗಳು, ಸಂಪುಟ: 14, ಕುವೆಂಪು ಭಾಷಾ ಭಾರತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ - 2012.

ಡಾ. ಎಚ್. ಎಸ್. ಅನುಪಮಾ – ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ, ಲಡಾಯಿ ಪ್ರಕಾಶನ, ಗದಗ - 2012.

ಮೂಲ: ಡಾ. ಬಿ. ಆರ್. ಅಂಬೇಡ್ಕರ್, ಅನುವಾದ: ಮ. ನ. ಜವರಯ್ಯ - ಜಾತಿ, ಸತಿ ಮತ್ತು ಮಹಿಳೆ, ಸಿದ್ದಾರ್ಥ ಗ್ರಂಥಮಾಲೆ, ಮೈಸೂರು - 2000.

ಡಾ. ಬಾಬುರಾವ್ ಮುಡಬಿ - ಮಹಿಳಾ ಸಬಲೀಕರಣ: ಅಂಬೇಡ್ಕರ್ ದೃಷ್ಟಿಕೋನಗಳು, ಲಕ್ಷ್ಮೀ ಪ್ರಕಾಶನ, ಶಿವಮೊಗ್ಗ - 2005.

ಸಂಪಾದಕರು: ಡಾ. ಸದಾಶಿವ ಮರ್ಜಿ, ಡಾ. ಸುಭಾಷ್ ಚಂದ್ರ ನಾಟಿಕಾರ – ಅಸ್ಪೃಶ್ಯತೆ, ಶೂದ್ರರು ಮತ್ತು ಹಿಂದೂ ಮಹಿಳೆಯರು - ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ - 2023.

ಪ್ರಧಾನ ಸಂಪಾದಕರು: ಎಮ್. ಎಲ್. ರಾಯಮನೆ – ಡಾ. ಬಾಬಾಸಾಹೇಬ್ ಅಂಬೇಡ್ಕರ್ – ದಿವ್ಯಚಂದ್ರ ಪ್ರಕಾಶನ, ಬೆಂಗಳೂರು – 2010.

ಡಾ. ಟಿ. ಎಂ. ಭಾಸ್ಕರ್ – ಮಹಿಳೆ ಮತ್ತು ಅಂಬೇಡ್ಕರ್ - 2005.

ಅರವಿಂದ ಮಾಲಗತ್ತಿ – ಭೀಮ ನಡೆಯ ಬೆಳಕು - ದಾಮಿನಿ ಸಾಹಿತ್ಯ ಪ್ರಕಾಶನ - 2006.

ಡಾ. ಎಚ್. ಡಿ. ಪೋಡೆ: ನೀರ ನೆಳಲು - 2009.

ಮೂಲ: ವಸಂತ ಮೂನ್, ಅನುವಾದ: ಬಿ. ಎ. ಸನದಿ – ಡಾ. ಬಾಬಾಸಾಹೇಬ್ ಅಂಬೇಡ್ಕರ್, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ಹೊಸದೆಹಲಿ - 2002.