ಬಸವಣ್ಣನವರ ಒಂದು ಚಾರಿತ್ರಿಕ ಅವಲೋಕನ

Main Article Content

ಸುವರ್ಣಾ ಪಾಟೀಲ

Abstract

ಹನ್ನೆರಡನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಜೀವನ, ಕಲ್ಯಾಣ ಕ್ರಾಂತಿ ಹಾಗೂ ಅವರ ವ್ಯಕ್ತಿತ್ವವು ಸಾಹಿತ್ಯಕ-ಪೌರಾಣಿಕ ನೆಲೆಗಳಲ್ಲಿ ಹೇಗೆ ರೂಪುಗೊಂಡಿದೆ ಎಂಬುದರ ಸಮಗ್ರ ವಿಶ್ಲೇಷಣೆಯನ್ನು ಇಲ್ಲಿ ಮಂಡಿಸಲಾಗಿದೆ. ಇಂಗಳೇಶ್ವರ ಬಾಗೇವಾಡಿಯಿಂದ ಕೂಡಲಸಂಗಮ, ತದನಂತರ ಕಲ್ಯಾಣದವರೆಗಿನ ಬಸವಣ್ಣನವರ ಪಯಣ, ಅನುಭವ ಮಂಟಪದ ಸ್ಥಾಪನೆ ಮತ್ತು ಸಮಾನತೆಯ ಹರಿಕಾರರಾಗಿ ಅವರು ಕೈಗೊಂಡ ಸಾಮಾಜಿಕ-ಧಾರ್ಮಿಕ ಬದಲಾವಣೆಗಳನ್ನು ಇದು ದಾಖಲಿಸುತ್ತದೆ. ಜೊತೆಗೆ, ಹರಿಹರ, ಪಾಲ್ಕುರಿಕೆ ಸೋಮನಾಥ ಮತ್ತು ಭೀಮಕವಿಯಂತಹ ಕವಿಗಳು ತಮ್ಮ ಮಹಾಕಾವ್ಯಗಳಲ್ಲಿ ಬಸವಣ್ಣನವರ ಚಾರಿತ್ರಿಕ ಇತಿವೃತ್ತಾಂತಗಳನ್ನು ಪೌರಾಣಿಕ ಆವರಣದೊಂದಿಗೆ, ವಿಶೇಷವಾಗಿ ಷಟ್ಪದಿ ಹಾಗೂ ರಗಳೆಗಳ ಮೂಲಕ ಹೇಗೆ ಕಟ್ಟಿಕೊಟ್ಟಿದ್ದಾರೆಂಬುದನ್ನು ತುಲನಾತ್ಮಕವಾಗಿ ಚರ್ಚಿಸಲಾಗಿದೆ. ಒಟ್ಟಾರೆಯಾಗಿ ಬಸವ ಯುಗದ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಕ ಸ್ಥಿತ್ಯಂತರಗಳ ಸೂಕ್ಷ್ಮ ಅವಲೋಕನವನ್ನು ಇದು ಒಳಗೊಂಡಿದೆ.

Article Details

Section

Research Articles

Author Biography

ಸುವರ್ಣಾ ಪಾಟೀಲ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯ, ತಾಳಿಕೋಟಿ.

How to Cite

ಸುವರ್ಣಾ ಪಾಟೀಲ. (2026). ಬಸವಣ್ಣನವರ ಒಂದು ಚಾರಿತ್ರಿಕ ಅವಲೋಕನ. ಅಕ್ಷರಸೂರ್ಯ (AKSHARASURYA), 15(03), 75 to 79. https://aksharasurya.com/index.php/latest/article/view/2037

References

ಅಕ್ಕ ಅನ್ನಪೂರ್ಣತಾಯಿ, (2020), ಬಸವಲಿಂಗ ಪ್ರಾರ್ಥನೆ ಹಾಗೂ ಭಕ್ತಿ ಗೀತೆಗಳು, ಬೀದರ: ಬಸವ ಸಂಪದ ಪ್ರಕಾಶನ.

ಅಂಗಡಿ ಎಸ್. ಎಸ್., (2008), ವಚನ ಸಾಹಿತ್ಯ ಛಂದೋಲಯ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಅನಂತಮೂರ್ತಿ ಯು. ಆರ್., (2003), ವೀರಶೈವಧರ್ಮ ದರ್ಶನ (ಸಂಪುಟ 1-2), ಮೈಸೂರು: ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ.

ಅಮರೇಶ ನುಗಡೋಣಿ (ಸಂ.), (2010), ಅಲ್ಲಮಪ್ರಭು ವಚನಗಳ ಸಾಂಸ್ಕೃತಿಕ ಮುಖಾಮುಖಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಅರ್ಚನಾ ಅಥಣಿ, (2021), ಅಕ್ಕಮಹಾದೇವಿಯ ವಚನಗಳ ಮೀಮಾಂಸೆ, ಬೆಂಗಳೂರು: ಅಕ್ಷರ ಮಂಟಪ ಪ್ರಕಾಶನ.

ಅಯ್ಯನಗೌಡರ ಎಸ್. ವ್ಹಿ., (2014), ಆಧುನಿಕ ಜಗತ್ತಿಗೆ ಶ್ರೀ ಬಸವೇಶ್ವರ ಹೊಸ ಸಂದೇಶ, ಧಾರವಾಡ: ಅನುಗ್ರಹ ಪ್ರಕಾಶನ.

ಅಪರಾಜ ಆರ್. ಪಿ., (2014), ಲಿಂಗಾಯತ ಸಮಾಜ-ಸಂಸ್ಕೃತಿ, ಬೆಳಗಾವಿ: ವಚನ ಅಧ್ಯಯನ ಕೇಂದ್ರ, ನಾಗನೂರು ಶ್ರೀ ರುದ್ರಾಕ್ಷಿಮಠ.

ಕಲಬುರ್ಗಿ ಎಂ. ಎಂ., (1978), ಶಾಸನಗಳಲ್ಲಿ ಶಿವಶರಣರು, ಗದಗ: ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ.

ಕಲ್ಯಾಣಮ್ಮ ಲಂಗೋಟಿ, (2019), ವಿಚಾರ ಪತ್ನಿ ಶರಣೆ ಗಂಗಾಂಬಿಕೆಯವರು, ರಾಮದುರ್ಗ: ಜಗಜ್ಯೋತಿ ಬಸವೇಶ್ವರ ಅನುಭಾವಪೀಠ.

ಕಲಬುರ್ಗಿ ಎಂ. ಎಂ., (1993), ಬಸವಣ್ಣನವರ ವಚನ ಸಂಪುಟ-1, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

ಕಲಬುರ್ಗಿ ಎಂ. ಎಂ. (ಸಂ.), (1999), ಹರಿಹರನ ರಗಳೆಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.