ವಚನಗಳಲ್ಲಿ ದಾಸೋಹ ತತ್ವ

Main Article Content

ಡಾ. ವಾಲಪ್ಪ ಎಸ್. ಲಮಾಣಿ

Abstract

ಹನ್ನೆರಡನೆಯ ಶತಮಾನದ ಶರಣ ಚಳವಳಿಯಲ್ಲಿ ‘ದಾಸೋಹ’ ತತ್ವವು ಅತ್ಯಂತ ಪ್ರಮುಖ ಮೌಲ್ಯವಾಗಿದೆ. ಕಾಯಕ ಮತ್ತು ದಾಸೋಹಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ‘ನಾನು ದಾಸ’ ಎಂಬ ಕಿಂಕರ ಭಾವನೆಯೊಂದಿಗೆ ಅಹಂಕಾರವನ್ನು ತೊರೆದು, ತ್ರಿಕರಣ ಶುದ್ಧಿಯಿಂದ ಗುರು, ಲಿಂಗ ಮತ್ತು ಜಂಗಮಕ್ಕೆ ಸೇವೆ ಸಲ್ಲಿಸುವುದೇ ದಾಸೋಹದ ಮೂಲ ಆಶಯ. ಕೇವಲ ಸಂಪತ್ತಿನ ಹಂಚುವಿಕೆಯಷ್ಟೇ ದಾಸೋಹವಲ್ಲ; ಬದಲಾಗಿ ತನು, ಮನ ಮತ್ತು ಧನಗಳನ್ನು ಸದಾಚಾರ ಹಾಗೂ ಸಮರ್ಪಣಾ ಭಾವದಿಂದ ಅರ್ಪಿಸುವ ‘ತ್ರಿವಿಧ ದಾಸೋಹ’ವನ್ನು ಬಸವಣ್ಣ, ಅಲ್ಲಮಪ್ರಭು ಮುಂತಾದ ಶರಣರು ಎತ್ತಿಹಿಡಿದರು. ದಾನದಲ್ಲಿ ದಾತೃವಿನ ಅಹಂಭಾವವಿರುತ್ತದೆ, ಆದರೆ ದಾಸೋಹವು ಮನುಷ್ಯನ ಮದ ಮತ್ತು ಮತ್ಸರಗಳನ್ನು ನಾಶಪಡಿಸುತ್ತದೆ. ಸತ್ಯಶುದ್ಧ ಕಾಯಕದಿಂದ ಗಳಿಸಿದ ಸಂಪತ್ತಿನಿಂದ ಮಾತ್ರ ನಿಜವಾದ ದಾಸೋಹ ಸಾಧ್ಯ ಹಾಗೂ ಇದು ವ್ಯಕ್ತಿಯನ್ನು ಅಹಂಕಾರ ನಿರಸನದತ್ತ ಕೊಂಡೊಯ್ಯುತ್ತದೆ ಎಂಬುದನ್ನು ವಿವಿಧ ವಚನಗಳ ಹಿನ್ನೆಲೆಯಲ್ಲಿ ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಡಾ. ವಾಲಪ್ಪ ಎಸ್. ಲಮಾಣಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಂ.ಜಿ.ವ್ಹಿ.ಸಿ, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಮುದ್ದೇಬಿಹಾಳ.

How to Cite

ವಾಲಪ್ಪ ಎಸ್. ಲಮಾಣಿ. (2026). ವಚನಗಳಲ್ಲಿ ದಾಸೋಹ ತತ್ವ . ಅಕ್ಷರಸೂರ್ಯ (AKSHARASURYA), 15(03), 38 to 44. https://aksharasurya.com/index.php/latest/article/view/2032

References

ಕಲಬುರ್ಗಿ ಎಂ. ಎಂ. (ಸಂ.), (1993), ಸಮಗ್ರ ವಚನ ಸಂಪುಟ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

ತಿಪ್ಪೇರುದ್ರಸ್ವಾಮಿ ಎಚ್., (1968), ಶರಣರ ಅನುಭಾವ ಸಾಹಿತ್ಯ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.

ಬಸವರಾಜು ಎಲ್., (2001), ಬಸವಣ್ಣನವರ ವಚನಗಳು, ಮೈಸೂರು: ಗೀತಾ ಬುಕ್ ಹೌಸ್.

ಶಿವರುದ್ರಪ್ಪ ಜಿ. ಎಸ್., (1979), ವಚನ ಸಾಹಿತ್ಯ: ಒಂದು ಅಧ್ಯಯನ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ನರಸಿಂಹಾಚಾರ್ ಪು. ತಿ., (1939), ಗಣೇಶ ದರ್ಶನ, ಮೈಸೂರು: ಕಾವ್ಯಾಲಯ ಪ್ರಕಾಶನ.

ಚಿದಾನಂದಮೂರ್ತಿ ಎಂ., (1966), ವಚನ ಸಾಹಿತ್ಯ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಹಳಕಟ್ಟಿ ಫ. ಗು., (1923), ಶಿವಶರಣರ ವಚನಗಳು, ಬಿಜಾಪುರ: ಹಿತಚಿಂತಕ ಮುದ್ರಣಾಲಯ.