ಅಯಾಸ್, ಅಶ್ವತ್ಥಾಮನ್ ಮತ್ತು ಆಗ್ರಹ ನಾಟಕಗಳ ತೌಲನಿಕ ವಿಶ್ಲೇಷಣೆ

Main Article Content

ಮುರಳಿ ಕೆ. ವಿ.

Abstract

ಗ್ರೀಕ್‌ನ 'ಅಯಾಸ್' ನಾಟಕದ ಕಥಾವಸ್ತುವನ್ನು ಆಧರಿಸಿ ಬಿ.ಎಂ.ಶ್ರೀ ಅವರು ರಚಿಸಿದ 'ಅಶ್ವತ್ಥಾಮನ್' ಹಾಗೂ ಅದರ ಟೀಕೆಗಳ ಹಿನ್ನೆಲೆಯಲ್ಲಿ ವಿ.ಸೀತಾರಾಮಯ್ಯನವರು ಬರೆದ 'ಆಗ್ರಹ' ನಾಟಕಗಳ ತೌಲನಿಕ ವಿಶ್ಲೇಷಣೆಯನ್ನು ಮಂಡಿಸಲಾಗಿದೆ. ಅಶ್ವತ್ಥಾಮನ್ ನಾಟಕವು ಗ್ರೀಕ್ ರುದ್ರನಾಟಕದ ಮಾದರಿಯಲ್ಲಿ ಮಾನವೀಯ ಧೋರಣೆಯನ್ನು ಅಳವಡಿಸಿಕೊಂಡು, ಆತ್ಮಹತ್ಯೆಯ ಮೂಲಕ ಪಾತ್ರಕ್ಕೆ ಮುಕ್ತಿ ನೀಡುತ್ತದೆ. ಆದರೆ, ಈ ಪರಕೀಯ ಸಂಸ್ಕೃತಿಯ ಪ್ರಭಾವವನ್ನು ವಿರೋಧಿಸಿ, ಭಾರತೀಯ ಪುರಾಣ ಪ್ರಜ್ಞೆ ಮತ್ತು ಸಂಪ್ರದಾಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ 'ಆಗ್ರಹ' ನಾಟಕವನ್ನು ರಚಿಸಲಾಗಿದೆ. ಸಾತ್ವಿಕ ಸಿಟ್ಟಿನ ಆಗ್ರಹದ ಮೂಲಕ ದುರಂತವನ್ನು ಚಿತ್ರಿಸುವ ವಿ.ಸೀ. ಅವರ ಪ್ರಯತ್ನವು, ಹೇಗೆ ಸಾಂಪ್ರದಾಯಿಕ ನಂಬಿಕೆಗಳನ್ನು ಉಳಿಸಿಕೊಳ್ಳುತ್ತಲೇ ಆಧುನಿಕತೆಯ ಸ್ಪರ್ಶವನ್ನು ನೀಡಿದೆ ಎಂಬುದನ್ನು ಈ ಅಧ್ಯಯನವು ತುಲನಾತ್ಮಕವಾಗಿ ಚರ್ಚಿಸುತ್ತದೆ.

Article Details

Section

Research Articles

Author Biography

ಮುರಳಿ ಕೆ. ವಿ.

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ, ಪುತ್ತೂರು, ದ.ಕ.

How to Cite

ಮುರಳಿ ಕೆ. ವಿ. (2023). ಅಯಾಸ್, ಅಶ್ವತ್ಥಾಮನ್ ಮತ್ತು ಆಗ್ರಹ ನಾಟಕಗಳ ತೌಲನಿಕ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 2(08), 104 to 109. https://aksharasurya.com/index.php/latest/article/view/203

References

ಅಯಾಸ್, ಅನುವಾದ: ಹೆಚ್. ಎಂ. ಚೆನ್ನಯ್ಯ.

ಅಶ್ವತ್ಥಾಮನ್, ಬಿ.ಎಂ.ಶ್ರೀ., ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಆಗ್ರಹ (1931ರ ಮೊದಲ ಪ್ರಕಟಣೆ), ವಿ. ಸೀತಾರಾಮಯ್ಯ.

ಶ್ರೀನಿಧಿಯಲ್ಲಿನ ಅಶ್ವತ್ಥಾಮನ್ (ಲೇಖನ), ಕ. ವೆಂ. ರಾಜಗೋಪಾಲ್.

ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ (1983ರ ಮೊದಲ ಪ್ರಕಟದಿಂದ), ಡಾ॥ ಕೆ. ಎನ್. ಗೋಪಾಲಕೃಷ್ಣಯ್ಯ.