ನೀಲಾಂಬಿಕೆ: ವಚನ ಚಳುವಳಿಯ ಇತಿಹಾಸದಲ್ಲಿ ಒಂದು ಮಹತ್ವದ ಮಹಿಳಾ ಶಕ್ತಿ
Main Article Content
Abstract
ಹನ್ನೆರಡನೆಯ ಶತಮಾನದ ವಚನ ಚಳವಳಿಯಲ್ಲಿ ನೀಲಾಂಬಿಕೆಯು ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ಶರಣೆಯಾಗಿ ಗುರುತಿಸಿಕೊಂಡಿದ್ದಾಳೆ. ಕೇವಲ ಬಸವಣ್ಣನವರ ಮಡದಿಯಾಗಿರದೆ, ‘ವಿಚಾರಪತ್ನಿ’ಯಾಗಿ ಕಲ್ಯಾಣದ ಕ್ರಾಂತಿಯಲ್ಲಿ ಸಕ್ರಿಯ ಪಾತ್ರ ವಹಿಸಿರುವುದು ಆಕೆಯ ವ್ಯಕ್ತಿತ್ವದ ಉನ್ನತಿಯನ್ನು ತೋರುತ್ತದೆ. ‘ಸಂಗಯ್ಯ’ ಎಂಬ ಅಂಕಿತನಾಮದಲ್ಲಿ 288ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಈಕೆಯ ಸಾಹಿತ್ಯದಲ್ಲಿ ಆತ್ಮನಿವೇದನೆ, ಬಸವನಿಷ್ಠೆ, ಲಿಂಗನಿಷ್ಠೆ ಹಾಗೂ ಅಸಾಧಾರಣ ವೈಚಾರಿಕತೆ ಮೇಳೈಸಿದೆ. ಇವರಿಬ್ಬರ ಒಡನಾಟವು ನಾಡಿನ ಪ್ರಥಮ ಅಂತರ್ಜಾತಿ ಹಾಗೂ ಪ್ರೇಮ ವಿವಾಹವೆಂದು ವಿಶ್ಲೇಷಿಸಲಾಗಿದೆ. ಮಹಿಳೆಯರ ನೇರ ಅಭಿವ್ಯಕ್ತಿ ಹಾಗೂ ಸ್ವತಂತ್ರ ವಿಚಾರಪರತೆಗೆ ಕನ್ನಡಿಯಾಗಿರುವ ನೀಲಾಂಬಿಕೆಯ ವಚನಗಳು, ಕೇವಲ ಅನುಭವದಿಂದ ಅನುಭಾವದೆಡೆಗಿನ ಆಧ್ಯಾತ್ಮಿಕ ಪಯಣವನ್ನು ಮಾತ್ರವಲ್ಲದೆ, ಸಮಕಾಲೀನ ಚಾರಿತ್ರಿಕ ಘಟನಾವಳಿಗಳನ್ನೂ ಕಟ್ಟಿಕೊಡುತ್ತವೆ. ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡು ತತ್ವನಿಷ್ಠ ಬದುಕು ಸವೆಸಿದ ಶರಣೆಯ ಜೀವನ ಮೌಲ್ಯಗಳನ್ನು ಇಲ್ಲಿ ಸಮಗ್ರವಾಗಿ ಕಟ್ಟಿಕೊಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವಿಜಯಶ್ರೀ ಸಬರದ, (2022), ಶಿವಶರಣೆಯರ ಸಾಹಿತ್ಯ ಚರಿತ್ರೆ, ಬೆಂಗಳೂರು: ಕ್ರಿಯಾ ಮಾಧ್ಯಮ.
ಕಾವ್ಯಶ್ರೀ. ಜಿ, (2015), ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ, ಚಿತ್ರದುರ್ಗ: ಆದಿತ್ಯ ಪಬ್ಲಿಕೇಶನ್.
ವಿಜಯಶ್ರೀ ಸಬರದ, (2022), ಶಿವಶರಣೆಯರ ಸಾಹಿತ್ಯ ಚರಿತ್ರೆ, ಬೆಂಗಳೂರು: ಕ್ರಿಯಾ ಮಾಧ್ಯಮ.
ಮ.ನಿ.ಪ್ರ. ಹಿರಿಶಾಂತವೀರ ಮಹಾಸ್ವಾಮಿಗಳು, (2016), ಗಂಗಾಂಬಿಕೆ ನೀಲಾಂಬಿಕೆ ಒಂದು ಅಧ್ಯಯನ, ಸೊಂಡೂರು: ಪ್ರಭುದೇವರ ಜನಕಲ್ಯಾಣ ಸಂಸ್ಥೆ.
ಕಾವ್ಯಶ್ರೀ. ಜಿ, (2015), ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ, ಚಿತ್ರದುರ್ಗ: ಆದಿತ್ಯ ಪಬ್ಲಿಕೇಶನ್.