ಸುರಪುರ ತಾಲ್ಲೂಕಿನ ಬಸವ ಪೂರ್ವಯುಗದ ವಚನಕಾರರು

Main Article Content

ಡಾ. ಎಂ.ಎಸ್. ಮಾಗಣಗೇರಿ

Abstract

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕು ವಚನ ಸಾಹಿತ್ಯಕ್ಕೆ, ವಿಶೇಷವಾಗಿ ಬಸವಪೂರ್ವ ಯುಗದ ಶರಣರ ಕೊಡುಗೆಯಿಂದಾಗಿ ಅತ್ಯಂತ ಶ್ರೀಮಂತವಾಗಿದೆ. ದೇವರ ದಾಸಿಮಯ್ಯ, ಕೆಂಭಾವಿ ಭೋಗಣ್ಣ ಹಾಗೂ ಹಾವಿನಹಾಳ ಕಲ್ಲಯ್ಯನಂತಹ ಆದ್ಯ ವಚನಕಾರರು ಈ ಭಾಗದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ. ದೇವರ ದಾಸಿಮಯ್ಯನವರು ಡಾಂಭಿಕ ಭಕ್ತಿಯನ್ನು ಖಂಡಿಸಿ ಕಾಯಕದ ಮಹತ್ವವನ್ನು ಸಾರಿದರೆ, ಕೆಂಭಾವಿ ಭೋಗಣ್ಣನವರು ವರ್ಣ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಶೋಷಿತರ ಪರ ದನಿ ಎತ್ತಿದರು. ಅಂತೆಯೇ, ಹಾವಿನಹಾಳ ಕಲ್ಲಯ್ಯನವರು ವೈದಿಕ ಧರ್ಮದ ಅಸಮಾನತೆಯನ್ನು ಧಿಕ್ಕರಿಸಿ ಸಕಲ ಮನುಕುಲದ ಸಮಾನತೆಯನ್ನು ದಿಟ್ಟವಾಗಿ ಪ್ರತಿಪಾದಿಸಿದರು. ಈ ಮೂವರೂ ಶರಣರು ಮೂಢನಂಬಿಕೆಗಳನ್ನು ನಿರಾಕರಿಸಿ, ಸತ್ಯ, ಸಮಾನತೆ ಹಾಗೂ ನಿಜಭಕ್ತಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಹಾಕಿದ ಭದ್ರ ಬುನಾದಿ ಮತ್ತು ಅವರ ಸಾಹಿತ್ಯಕ ಸಾಧನೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಡಾ. ಎಂ.ಎಸ್. ಮಾಗಣಗೇರಿ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಚಡಚಣ.

How to Cite

ಎಂ.ಎಸ್. ಮಾಗಣಗೇರಿ. (2026). ಸುರಪುರ ತಾಲ್ಲೂಕಿನ ಬಸವ ಪೂರ್ವಯುಗದ ವಚನಕಾರರು. ಅಕ್ಷರಸೂರ್ಯ (AKSHARASURYA), 15(03), 22 to 33. https://aksharasurya.com/index.php/latest/article/view/2027

References

ಹಿರೇಮಠ ಬಿ.ಆರ್. (ಸಂ.), (1993), ಸಂಕೀರ್ಣ ವಚನ ಸಂಪುಟ-3, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

ವಿದ್ಯಾಶಂಕರ ಎಸ್. (ಸಂ.), (2001), ಸಂಕೀರ್ಣ ವಚನ ಸಂಪುಟ-2 (ದ್ವಿತೀಯ ಪರಿಷ್ಕೃತ ಮುದ್ರಣ), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

ನಾಗಭೂಷಣ ಸಿ., (2000), ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್.

ವಿದ್ಯಾಶಂಕರ ಎಸ್., (2013), ವೀರಶೈವ ಸಾಹಿತ್ಯ ಚರಿತ್ರೆ 1, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.

ನಾಯಕ ಹಾ.ಮಾ. (ಸಂ.), (1977), ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ-4, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಗಿರಡ್ಡಿ ಗೋವಿಂದರಾಜ, (2018), ವಚನ ವಿನ್ಯಾಸ, ಧಾರವಾಡ: ಮನೋಹರ ಗ್ರಂಥಮಾಲಾ.

ರಂಜಾನ್ ದರ್ಗಾ, (2013), ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಬಳ್ಳಾರಿ: ಲೋಹಿಯಾ ಪ್ರಕಾಶನ.

ಭೂಸನೂರಮಠ ಶಿ. (ಸಂ.), (2006), ವಚನ ಸಾಹಿತ್ಯ ಸಂಗ್ರಹ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಶಾಂತಲಾ ಎಸ್. ಮುಕ್ಕುಂದಿಮಠ, (2020), ಶರಣ ಹಾವಿನಹಾಳ ಕಲ್ಲಯ್ಯ, ಹುಬ್ಬಳ್ಳಿ: ಶ್ರೀ ವಿಶ್ವಮತ ಸಾಹಿತ್ಯ ಪ್ರಚಾರ ಸಮಿತಿ.

ಶ್ರೀ ಧರೆಪ್ಪ ಅಣ್ಣಪ್ಪ ಶಿರನಾಳ, (2018), ಶರಣ ಹಾವಿನಹಾಳ ಕಲ್ಲಯ್ಯ, ಚಡಚಣ: ರವಿಕಿರಣ ಆಫ್ ಸೆಟ್.