ವಚನಗಳಲ್ಲಿ ಜೀವನ ಮೌಲ್ಯಗಳು
Main Article Content
Abstract
ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವು ಕೇವಲ ಒಂದು ವಿಶಿಷ್ಟ ಕಾವ್ಯ ಪ್ರಕಾರವಾಗಿರದೆ, ಸಮಾಜದಲ್ಲಿನ ಮೌಢ್ಯ, ಜಾತಿಭೇದ ಹಾಗೂ ಅಸಮಾನತೆಗಳ ವಿರುದ್ಧ ಮೂಡಿದ ಬೃಹತ್ ಸಾಮಾಜಿಕ ಕ್ರಾಂತಿಯಾಗಿದೆ. ಬಸವಣ್ಣ, ಜೇಡರ ದಾಸಿಮಯ್ಯ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶರಣರು ಸರಳ ನುಡಿಗಳಲ್ಲಿ ರಚಿಸಿದ ವಚನಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದವು. ‘ಅನುಭವ ಮಂಟಪ’ದ ಮೂಲಕ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ತ್ರೀ ಸಮಾನತೆಯಂತಹ ಉನ್ನತ ವಿಚಾರಗಳನ್ನು ಸಮಾಜಕ್ಕೆ ನೀಡಲಾಯಿತು. ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಪ್ರತಿಯೊಬ್ಬರ ದುಡಿಮೆಯ ಘನತೆಯನ್ನು ಎತ್ತಿಹಿಡಿಯಲಾಯಿತು. ಇಂದಿನ ಭ್ರಷ್ಟಾಚಾರ, ಮಾನಸಿಕ ಒತ್ತಡ ಹಾಗೂ ಸಂಘರ್ಷಭರಿತ ಸಮಾಜಕ್ಕೆ ವಚನಗಳು ಕೇವಲ ಸಾಹಿತ್ಯವಾಗಿ ಉಳಿಯದೆ, ಸುಂದರ, ಸರಳ ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗುವ ಶ್ರೇಷ್ಠ ಜೀವನ ಮೌಲ್ಯಗಳನ್ನು ಹೇಗೆ ಬೋಧಿಸುತ್ತವೆ ಎಂಬುದನ್ನು ಇಲ್ಲಿ ಸವಿವರವಾಗಿ ವಿಶ್ಲೇಷಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ತಿಪ್ಪೇರುದ್ರಸ್ವಾಮಿ ಎಚ್., (1968), ಶರಣರ ಅನುಭಾವ ಸಾಹಿತ್ಯ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.
ಕಲಬುರ್ಗಿ ಎಂ.ಎಂ., (1993), ಸಮಗ್ರ ವಚನ ಸಂಪುಟ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಬಸವರಾಜು ಲ., (2001), ಬಸವ ವಚನಾಮೃತ, ಮೈಸೂರು: ಗೀತಾ ಬುಕ್ ಹೌಸ್.
ರಂಜಾನ್ ದರ್ಗಾ, (2007), ವಚನ: ಒಂದು ಸಾಮಾಜಿಕ ದರ್ಶನ, ಗದಗ: ಶ್ರೀ ತೋಂಟದಾರ್ಯ ಮಠ ಪ್ರಕಾಶನ.
ದೇಸಾಯಿ ಪಿ. ಬಿ., (1968), ಬಸವೇಶ್ವರ ಮತ್ತು ಅವರ ಕಾಲ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ.
ಶಿವರುದ್ರಪ್ಪ ಜಿ. ಎಸ್., (1974), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.