ಶರಣ ಅಂಬಿಗರ ಚೌಡಯ್ಯನ ವಚನಗಳಲ್ಲಿ ಜೀವನ ಮೌಲ್ಯ
Main Article Content
Abstract
ಹನ್ನೆರಡನೆಯ ಶತಮಾನದ ಶರಣ ಚಳವಳಿಯಲ್ಲಿ ಅಂಬಿಗರ ಚೌಡಯ್ಯನವರದು ಅತ್ಯಂತ ವಿಶಿಷ್ಟ ಹಾಗೂ ದಿಟ್ಟ ವ್ಯಕ್ತಿತ್ವ. ವೃತ್ತಿಯಿಂದ ದೋಣಿ ನಡೆಸುವ ಅಂಬಿಗರಾದ ಇವರು, ಪ್ರವೃತ್ತಿಯಲ್ಲಿ ಅಸಾಧಾರಣ ಅನುಭಾವಿಯಾಗಿದ್ದರು. ಜಾತಿಭೇದ, ಲಿಂಗಭೇದ ಹಾಗೂ ಮೌಢ್ಯಗಳ ವಿರುದ್ಧ ತಮ್ಮ ವಚನಗಳ ಮೂಲಕ ನೇರವಾಗಿ ಸಿಡಿದೆದ್ದ ಚೌಡಯ್ಯನವರ ಸಾಹಿತ್ಯದಲ್ಲಿ ಅಡಗಿರುವ ಜೀವನ ಮೌಲ್ಯಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಡಾಂಭಿಕ ಭಕ್ತಿ, ಕಂದಾಚಾರ, ಮೂಢನಂಬಿಕೆ ಹಾಗೂ ಸ್ವಾರ್ಥಿ ಗುರು-ಶಿಷ್ಯ ಪರಂಪರೆಯನ್ನು ಕಟುವಾಗಿ ಟೀಕಿಸುವ ಇವರ ವಚನಗಳು, ನೈತಿಕ ಮತ್ತು ಪರಿಶುದ್ಧ ಬದುಕಿಗೆ ಒತ್ತು ನೀಡುತ್ತವೆ. ಮನುಷ್ಯನ ತ್ರಿಕರಣ ಶುದ್ಧಿಯೇ ನಿಜವಾದ ಭಕ್ತಿ ಎಂದು ಪ್ರತಿಪಾದಿಸುತ್ತಾ, ಹುಟ್ಟಿನ ಬದಲು ಗುಣ-ನಡವಳಿಕೆಗಳ ಆಧಾರದ ಮೇಲೆ ಮನುಷ್ಯನ ಶ್ರೇಷ್ಠತೆಯನ್ನು ಅವರು ಅಳೆಯುತ್ತಾರೆ. ಸಮಾನತೆ, ಸತ್ಯ ಮತ್ತು ಸಾಮಾಜಿಕ ಕಳಕಳಿಯನ್ನು ಸಾರುವ ಚೌಡಯ್ಯನವರ ಚಿಂತನೆಗಳು ಇಂದಿಗೂ ಹೇಗೆ ಪ್ರಸ್ತುತ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ.ಎಂ. ಹಾಗೂ ಇತರೆ (ಸಂಪಾದಕರು), (1993), ಸಮಗ್ರ ವಚನ ಸಂಪುಟಗಳು 1-15, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ವೀರಣ್ಣ ರಾಜೂರ (ಸಂ.), (2003), ಬಸವಣ್ಣನವರ ಪ್ರಮುಖ ಚಿಂತನೆಗಳು, ಧಾರವಾಡ: ಶ್ರೀ ಬಸವೇಶ್ವರ ಪೀಠ, ಕರ್ನಾಟಕ ವಿಶ್ವವಿದ್ಯಾಲಯ.
ವೀರಣ್ಣ ರಾಜೂರ (ಸಂ.), (2003), ವಚನಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ, ಧಾರವಾಡ: ಶ್ರೀ ಬಸವೇಶ್ವರ ಪೀಠ, ಕರ್ನಾಟಕ ವಿಶ್ವವಿದ್ಯಾಲಯ.
ಶಿವಮೂರ್ತಿ ಮುರುಘಾ ಶರಣರು, (2019), ಮಹಾಬೆರಗು, ಚಿತ್ರದುರ್ಗ: ಅಲ್ಲಮಪ್ರಭು ಸಂಶೋಧನ ಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಗ್ರಂಥಮಾಲೆ, ಬಸವಕೇಂದ್ರ, ಶ್ರೀ ಮುರುಘಾಮಠ.
ಶಿವಮೂರ್ತಿ ಮುರುಘಾ ಶರಣರು, (2022), ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ, ಚಿತ್ರದುರ್ಗ: ಅಲ್ಲಮಪ್ರಭು ಸಂಶೋಧನ ಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಗ್ರಂಥಮಾಲೆ, ಬಸವಕೇಂದ್ರ, ಶ್ರೀ ಮುರುಘಾಮಠ.
ಉಮೇಶ ಎಚ್.ಎಸ್. (ಸಂ.), (2022), ಅರುಹು ಕುರುಹು (ಸಂಪುಟ-12, ಸಂಚಿಕೆ-47, ಜನವರಿ-ಮಾರ್ಚ್)