ಸಿಂದಗಿ ತಾಲೂಕಿನ ಕಲ್ಯಾಣಿ ಚಾಲುಕ್ಯರ ಶಾಸನೋಕ್ತ ದೇವಾಲಯಗಳು
Main Article Content
Abstract
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಪ್ರಮುಖ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಕೇಂದ್ರವಾಗಿ ಅಭಿವೃದ್ಧಿ ಸಾಧಿಸಿತ್ತು. ಸಿಂದಗಿ ಪರಿಸರದ ಚಟ್ಟರಕಿ, ಕೊಂಡುಗುಳಿ, ದೇವರ ಹಿಪ್ಪರಗಿ, ಜಾಲವಾದ ಮತ್ತು ದೇವಣಗಾಂವಗಳಲ್ಲಿ ಲಭ್ಯವಿರುವ ಶಾಸನೋಕ್ತ ದೇವಾಲಯಗಳ ವಾಸ್ತುಶಿಲ್ಪ, ಮೂರ್ತಿಶಿಲ್ಪ ಹಾಗೂ ಐತಿಹಾಸಿಕ ಮಹತ್ವವನ್ನು ಇಲ್ಲಿ ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ದತ್ತಾತ್ರೇಯ, ಸೋಮೇಶ್ವರ, ಕಲ್ಮೇಶ್ವರ, ಶಂಕರಲಿಂಗ ಹಾಗೂ ಕಲ್ಲಾಲಿಂಗ ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಲಾ ಶ್ರೀಮಂತಿಕೆಯ ಜೀವಂತ ಸಾಕ್ಷಿಗಳಾಗಿವೆ. ಈ ದೇವಾಲಯಗಳ ಗರ್ಭಗೃಹ, ಕಕ್ಷಾಸನ ಸಹಿತ ಮುಖಮಂಟಪ, ವಿಶಾಲವಾದ ನವರಂಗ, ಆಳವಾದ ಭುವನೇಶ್ವರಿ ಹಾಗೂ ನಟರಾಜ, ಹರಿಹರ, ಸಪ್ತಮಾತೃಕೆಯರಂತಹ ಆಕರ್ಷಕ ಶಿಲ್ಪಗಳ ರಚನಾ ವೈಶಿಷ್ಟ್ಯಗಳನ್ನು ವಿವರಿಸಲಾಗಿದೆ. ಜೊತೆಗೆ, ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯ, ಕಳಚುರಿ ಬಿಜ್ಜಳ ಹಾಗೂ ಯಾದವ ಮನೆತನದ ಅರಸರ ಶಾಸನಗಳ ಆಧಾರದ ಮೇಲೆ ಈ ಸ್ಮಾರಕಗಳ ಧಾರ್ಮಿಕ ದತ್ತಿಗಳು ಮತ್ತು ಐತಿಹಾಸಿಕ ಪರಂಪರೆಯ ಮೇಲೆ ಬೆಳಕು ಚೆಲ್ಲಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮುನಿಸ್ವಾಮಿ (ಮುಖ್ಯ ಸಂಪಾದಕರು), (1884-1896), ಬಾಂಬೆ ಮತ್ತು ಬಿಜಾಪುರ ಜಿಲ್ಲಾ ಗ್ಯಾಸೆಟಿಯರ್, ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ.
ಕೊಪ್ಪಾ ಎಸ್. ಕೆ., (1990), ತರ್ದವಾಡಿ ನಾಡು ಒಂದು ಅಧ್ಯಯನ, ಇಂಡಿ: ಪ್ರತಿಭಾ ಪ್ರಕಾಶನ.
ಷೇಕ್ ಅಲಿ ಬಿ. (ಪ್ರಧಾನ ಸಂಪಾದಕರು), (2018), ಕರ್ನಾಟಕ ಚರಿತ್ರೆ ಸಂಪುಟ-4, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಕಡಕೋಳ ಎಚ್. ಎಂ., (2010), ಬಿಜಾಪುರ ಜಿಲ್ಲಾ ಸಾಂಸ್ಕೃತಿಕ ಪರಂಪರೆ, ಬಿಜಾಪುರ: ಕನ್ನಡ ಸಾಹಿತ್ಯ ಪರಿಷತ್ತು.
ಡಾ. ದೇವರಕೊಂಡಾರೆಡ್ಡಿ, (2011), ಬಿಜಾಪುರ ಜಿಲ್ಲೆಯ ಶಾಸನಸೂಚಿ, ಹಂಪಿ (ವಿದ್ಯಾರಣ್ಯ): ಕನ್ನಡ ವಿಶ್ವವಿದ್ಯಾಲಯ.
ಸುರೇಶ್ ಭೀ. ಹೂಗಾರ, ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳು, ಬೆಂಗಳೂರು: ವಾಸನ್ ಪಬ್ಲಿಕೇಶನ್ಸ್.
ಕೋಟಿ ಎನ್. ಪಿ., ವಿಜಯಪುರ ಜಿಲ್ಲೆಯ ಐತಿಹಾಸಿಕ ಪ್ರವಾಸಿತಾಣಗಳ ಹಿನ್ನೆಲೆ ಒಂದು ಸಾಂಸ್ಕೃತಿಕ ಅಧ್ಯಯನ (ಸಂಶೋಧನಾ ಪ್ರಬಂಧ).
ಅಣ್ಣಿಗೇರಿ ಎ.ಎಂ., ಬಿಜಾಪುರದ ಶಿಲ್ಪ ಕಲಾ ವೈಭವ, ಧಾರವಾಡ.