ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಮಹಿಳಾಮಣಿಗಳು
Main Article Content
Abstract
ಭಾರತದ ಸ್ವಾತಂತ್ರ್ಯಾನಂತರ ಹೈದರಾಬಾದ್ ಕರ್ನಾಟಕವನ್ನು ಭಾರತದೊಡನೆ ವಿಲೀನಗೊಳಿಸಲು ನಡೆದ ಚಳವಳಿಯು ಅತ್ಯಂತ ರೋಚಕ ಮತ್ತು ಭಿನ್ನ ಸ್ವರೂಪದ್ದಾಗಿದೆ. ಹನ್ನೆರಡನೆಯ ಶತಮಾನದ ಶರಣರಿಂದ ಪ್ರೇರಣೆ ಪಡೆದ ಈ ಭಾಗದ ಹೋರಾಟದಲ್ಲಿ ಕೇವಲ ಪುರುಷರಲ್ಲದೆ ಮಹಿಳೆಯರೂ ವಿಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ. ನಿಜಾಮನ ಹಾಗೂ ರಜಾಕಾರರ ಕ್ರೂರ ದೌರ್ಜನ್ಯ, ಅತ್ಯಾಚಾರ ಮತ್ತು ಲೂಟಿಯ ವಿರುದ್ಧ ಮೈಸೆಟೆದು ನಿಂತು ಹೋರಾಡಿದ ಅನೇಕ ಮಹಿಳಾಮಣಿಗಳ ತ್ಯಾಗ ಹಾಗೂ ಬಲಿದಾನಗಳನ್ನು ಇಲ್ಲಿ ದಾಖಲಿಸಲಾಗಿದೆ. ಶ್ರೀಮತಿ ಶಾಂತಬಾಯಿ ದುಬೆ, ವಿಮಲಾಬಾಯಿ ಜೋಶಿ, ತುಳಸಾಬಾಯಿ, ಅಂಬವ್ವ ಬಣಮಗಿ, ದಾನಾಬಾಯಿ ಮುಂತಾದ ವೀರ ವನಿತೆಯರ ಶೌರ್ಯ ಮತ್ತು ದೇಶಭಕ್ತಿಯನ್ನು ವಿವರಿಸಲಾಗಿದೆ. ನಾಡು-ನುಡಿಯ ರಕ್ಷಣೆಗಾಗಿ ಹೋರಾಡಿದ ಇಂತಹ ದಿಟ್ಟ ಮಹಿಳೆಯರ ಕಥನಗಳು ಮುಂದಿನ ತಲೆಮಾರಿಗೆ ಅತ್ಯಂತ ಸ್ಫೂರ್ತಿದಾಯಕವಾಗಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಮರೇಶ ತ್ರಿಪಾಠಿ, ಸ್ವಾತಂತ್ರ್ಯದ ಹೋರಾಟ, ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ, ಹೊಸದೆಹಲಿ, 2001.
ಸದಾಶಿವ ಕೆ., ಭಾರತದ ಸ್ವಾತಂತ್ರ್ಯ ಹೋರಾಟ, ಪ್ರಿಯದರ್ಶಿನಿ ಪ್ರಕಾಶನ, 2008.
ಸೂರ್ಯನಾಥ ಯು. ಕಾಮತ್, ಕರ್ನಾಟಕ ರಾಜ್ಯ ಗೆಜೆಟಿಯರ್, ಕಲಬುರಗಿ ಜಿಲ್ಲೆ.