ಹೈದ್ರಾಬಾದ ಕರ್ನಾಟಕದ ಶಾಸ್ತ್ರಸಾಹಿತ್ಯ
Main Article Content
Abstract
ಹೈದ್ರಾಬಾದ ಕರ್ನಾಟಕ ಪ್ರದೇಶದ ಸಾಹಿತ್ಯವು ಕವಿರಾಜಮಾರ್ಗದಿಂದಲೇ ಆರಂಭವಾಗಿದ್ದು, ಇದು ಕಾವ್ಯ ಕೃತಿಯಾಗಿದ್ದರೂ ಶಾಸ್ತ್ರ ಗ್ರಂಥವಾಗಿರುವುದು ಬಹುಮುಖ್ಯವಾಗಿದೆ. ಈ ಭಾಗದಲ್ಲಿ ಶಾಸನ, ಭಾಷಾ ವಿಜ್ಞಾನ, ಕಾವ್ಯಮೀಮಾಂಸೆ ಹಾಗೂ ಛಂದಸ್ಸುಗಳನ್ನು ಒಳಗೊಂಡ ಶಾಸ್ತ್ರ ಸಾಹಿತ್ಯದ ಬೆಳೆವಣಿಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಶಾಸನಗಳ ಶೋಧನೆಯಲ್ಲಿ ಪಿ. ಬಿ. ದೇಸಾಯಿ, ಸೀತಾರಾಮ ಜಾಗೀರದಾರ್ ಮುಂತಾದ ವಿದ್ವಾಂಸರ ಕೊಡುಗೆ ಅಪಾರವಾಗಿದೆ. ಭಾಷಾ ವಿಜ್ಞಾನದ ನೆಲೆಯಲ್ಲಿ ಡಾ. ಸಂಗಮೇಶ ಸವದತ್ತಿಮಠರ ಕಾರ್ಯಗಳು ಗಮನಾರ್ಹವಾಗಿವೆ. ಛಂದಸ್ಸು ಮತ್ತು ಕಾವ್ಯಮೀಮಾಂಸೆಯ ಕ್ಷೇತ್ರಗಳಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿದ್ದರೂ, ಛಂದಶಾಸ್ತ್ರ ಕುರಿತು ಹೆಚ್ಚಿನ ಕೃತಿಗಳು ಹೊರಬರದಿರುವುದು ಕಳವಳಕಾರಿ ಅಂಶವಾಗಿದೆ. ಒಟ್ಟಾರೆಯಾಗಿ, ಹೈದ್ರಾಬಾದ ಕರ್ನಾಟಕ ಭಾಗವು ಶಾಸ್ತ್ರ ಸಾಹಿತ್ಯದಲ್ಲಿ ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿದೆ ಎಂಬುದನ್ನು ಇಲ್ಲಿ ಮಂಡಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಕಲ್ಯಾಣ ಕರ್ನಾಟಕ ಸಹಿತ್ಯ ಸಮೀಕ್ಷೆ (2002 ನವೆಂಬರ 5), ಭಾಲಚಂದ್ರ ಜಯಶೆಟ್ಟಿ (ಸಂ), ಶ್ರೀ ಸಿದ್ಧಲಿಂಗೇಶ್ವ ಪ್ರಕಾಶನ, ಸರಸ್ವತಿ ಗೋದಾಮ, ಗುಲ್ಬರ್ಗಾ.
ಹೈದ್ರಾಬಾದ ಕರ್ನಾಟಕದ ಅಧುನಿಕ ಸಾಹಿತ್ಯ ಮೀಮಾಂಸೆ (2020), ಡಾ. ಬಸವರಾಜ ಸಬರದ, ಪಲ್ಲವಿ ಪ್ರಕಾಶನ.