ಡಿ.ಎಸ್. ವೀರಯ್ಯನವರ ರಾಜಕೀಯ ವಿಚಾರಗಳು

Main Article Content

ಸದಾಶಿವ ಬಿ.
ಡಾ. ಕೆ. ಶಾರದಾ

Abstract

ಡಿ.ಎಸ್. ವೀರಯ್ಯನವರ ರಾಜಕೀಯ ನಿಲುವುಗಳು ಅಂಬೇಡ್ಕರ್ ಅವರ ಸಮಾನತೆಯ ಆಶಯಗಳು, ದಲಿತ ಸಂವೇದನೆ ಹಾಗೂ ಎಡಪಂಥೀಯ ಚಿಂತನೆಗಳಿಂದ ರೂಪುಗೊಂಡಿವೆ. ಸತತ 12 ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿದ್ದ ಇವರು, ರಾಜಕಾರಣವನ್ನು ಸಮುದಾಯದ ಉದ್ಧಾರ ಮತ್ತು ಜನಸೇವೆಯ ಸಾಧನವನ್ನಾಗಿ ಕಂಡರೇ ವಿನಃ ಕೇವಲ ಅಧಿಕಾರದ ಮೆಟ್ಟಿಲನ್ನಾಗಿಯಲ್ಲ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ, ಜಾತಿ-ಹಣದ ಪ್ರಭಾವ ಹಾಗೂ ಸಂಸದೀಯ ಕಲಾಪಗಳ ಅಧೋಗತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವದ ಮೂಲ ಆಶಯಗಳು ಈಡೇರಲು ಹಾಗೂ ರಾಜಕೀಯವು ಕೇವಲ ‘ದುಡ್ಡು ಮಾಡುವ ಕಾರ್ಖಾನೆʼಯಾಗುವುದನ್ನು ತಪ್ಪಿಸಲು, ಮತದಾರರು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಜವಾಬ್ದಾರಿಯುತವಾಗಿ ಹಕ್ಕು ಚಲಾಯಿಸಬೇಕಾದ ಅನಿವಾರ್ಯತೆಯನ್ನು ಅವರು ದೃಢವಾಗಿ ಪ್ರತಿಪಾದಿಸಿದ್ದಾರೆ.

Article Details

Section

Research Articles

Author Biographies

ಸದಾಶಿವ ಬಿ.

ಸಂಶೋಧಕರು, ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ.

ಡಾ. ಕೆ. ಶಾರದಾ

ಪ್ರಾಧ್ಯಾಪಕರು, ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ.

How to Cite

ಸದಾಶಿವ ಬಿ., & ಕೆ. ಶಾರದಾ. (2026). ಡಿ.ಎಸ್. ವೀರಯ್ಯನವರ ರಾಜಕೀಯ ವಿಚಾರಗಳು. ಅಕ್ಷರಸೂರ್ಯ (AKSHARASURYA), 15(01), 80 to 89. https://aksharasurya.com/index.php/latest/article/view/1987

References

ರಾಜೇಶ್ವರಿ ಎಸ್. (ಸಂ.), (2022), ವಿಧಾನಪರಿಷತ್ತಿನಲ್ಲಿ ಡಿ.ಎಸ್. ವೀರಯ್ಯ, ಬೆಂಗಳೂರು: ಪಿತಾಮಹ ಪ್ರಕಾಶನ.

ವೀರಯ್ಯ ಡಿ.ಎಸ್., (2021), ಸಮಾಜಮುಖಿ - ಸಂಪುಟ-2, ಬೆಂಗಳೂರು: ಪಿತಾಮಹ ಪ್ರಕಾಶನ.