ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಜಾತಿ-ಮತ-ಧರ್ಮ ಸಾಮರಸ್ಯದ ನೆಲೆಗಳು

Main Article Content

ಡಾ. ಚಂದ್ರಶೇಖರ ಪಿ.

Abstract

‘ಸಾಮರಸ್ಯʼ ಎಂಬ ಪದ ಅಥವಾ ಪರಿಕಲ್ಪನೆಗೆ ಅರ್ಥ ಕೋಶದಲ್ಲಿ ಹೊಂದಾಣಿಕೆ, ಸಹೋದರತೆ, ಸಮರಸ, ಹಿತ, ಸಾಂಗತ್ಯ, ಐಕ್ಯಮತ, ಸಹಬಾಳ್ವೆ, ಸಮಾನತೆ ಎಂಬ ಅರ್ಥಗಳನ್ನು ನೀಡಲಾಗಿದೆ. ಎಲ್ಲವನ್ನು ಎಲ್ಲರಿಗೂ ಹಂಚುವುದು ಅಥವಾ ಎಲ್ಲರನ್ನೂ ಸಮಾನವಾಗಿ ನೋಡುವುದು ಅಥವಾ ಎಲ್ಲ ಧರ್ಮಗಳನ್ನು ಸಮಾನ ಅಂತರದಲ್ಲಿಟ್ಟು ನೋಡುವುದು ಸಾಮರಸ್ಯ ಎನಿಸಿಕೊಳ್ಳುತ್ತದೆ. ಕೇವಲ ನೋಡಿದ ಮಾತ್ರಕ್ಕೆ ಸಾಮರಸ್ಯ ಸಾಧಿಸಲು ಸಾಧ್ಯವಾಗುವುದಿಲ್ಲ. ಸಹ ಹಿತಕ್ಕಾಗಿ ಒಂದಾಗಿ ಬದುಕಿದಾಗ ಮಾತ್ರ ಸಾಮರಸ್ಯ ಪ್ರಜ್ಞೆ ಹುಟ್ಟಲು ಸಾಧ್ಯ. ‘ಸಾಮರಸ್ಯʼ ಎಂಬ ಪದವು ವಿಶಾಲ ಅರ್ಥದ ಮನೋಭಾವದಲ್ಲಿ ಮನುಷ್ಯ ಪ್ರಜ್ಞೆಯ ಸ್ಥಿತಿಯಾಗಿದೆ. ಸುತ್ತಮುತ್ತಲಿನ ಎಲ್ಲದಕ್ಕೂ ಪ್ರೀತಿಯ ಭಾವನೆ, ಶುದ್ಧತೆಯ ಮನಸ್ಸು, ಆರೋಗ್ಯಕರ ಮಾತು, ಸಕಾರಾತ್ಮಕ ಭಾವನೆಗಳ ಜೊತೆಯಲ್ಲಿ ಸ್ಥಾಪಿತವಾದ ಪ್ರಜ್ಞೆಯಲ್ಲಿ ಸಾಮರಸ್ಯ ಎಂಬ ಪರಿಸರ ಪ್ರಜ್ಞೆಯು ನಿರ್ಮಾಣವಾಗುತ್ತದೆ. ಒಂದು ರೀತಿಯಲ್ಲಿ ಸಾಮರಸ್ಯ ಎಂಬ ಪರಿಸರ ಪ್ರಜ್ಞೆಯು ಮನುಷ್ಯ ಸಂಬಂಧದಿಂದ ಒಂದು ರೀತಿಯಲ್ಲಿ ಸಾಮರಸ್ಯ ಪ್ರಜ್ಞೆಯು ಮನುಷ್ಯ ಸಂಬಂಧದಿಂದ ಹುಟ್ಟಿದ ಬದುಕಿನ ಲಯವಾಗಿದೆ. ಲ್ಯಾಟಿನ್ ಭಾಷೆಯ ‘ಹಾರ್ಮೋನಿʼ ಎಂಬ ಶಬ್ದ ಯಥಾ ಸ್ಥಿತಿಯಲ್ಲಿ ಇಂಗ್ಲಿಷಿನಲ್ಲಿ ಬಳಕೆಯಾಗುತ್ತಿದ್ದು ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಸಾಮರಸ್ಯʼ ಪದ ಬಳಕೆಯಾಗುತ್ತಿದೆ.

Article Details

Section

Research Articles

Author Biography

ಡಾ. ಚಂದ್ರಶೇಖರ ಪಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ನಗರ.

How to Cite

ಚಂದ್ರಶೇಖರ ಪಿ. (2026). ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಜಾತಿ-ಮತ-ಧರ್ಮ ಸಾಮರಸ್ಯದ ನೆಲೆಗಳು. ಅಕ್ಷರಸೂರ್ಯ (AKSHARASURYA), 15(01), 32 to 39. https://aksharasurya.com/index.php/latest/article/view/1981

References

ಮುಗಳಿ ರಂ. ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಉಷಾ ಸಾಹಿತ್ಯ ಮಾಲೆ.

ಅರವಿಂದ ಮಾಲಗತ್ತಿ (ಸಂ.), (2014), ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.

ಶಿವರುದ್ರಪ್ಪ ಜಿ. ಎಸ್. (ಸಂ.), (1975), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ 2), ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಶಿವರುದ್ರಪ್ಪ ಜಿ. ಎಸ್., (1999), ಕನ್ನಡ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.