ವೆಂಕಾಮಾತ್ಯ ರಾಮಾಯಣದ ಬಾಲಕಾಂಡದ ವೈಶಿಷ್ಟ್ಯತೆ
Main Article Content
Abstract
18ನೇ ಶತಮಾನದ ಕವಿ ಹಾಗೂ ಬಹುಭಾಷಾ ವಿದ್ವಾಂಸ ವೆಂಕಾಮಾತ್ಯನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ ‘ಶ್ರೀರಾಮಕಥಾಮೃತʼವು ಕೇವಲ ವಾಲ್ಮೀಕಿ ರಾಮಾಯಣದ ಅನುವಾದವಲ್ಲ; ಅದೊಂದು ವಿಶಿಷ್ಟ ಹಾಗೂ ಸ್ವತಂತ್ರ ಭಕ್ತಿಕಾವ್ಯ. ವಾಲ್ಮೀಕಿ ರಾಮಾಯಣದ ಬಾಲಕಾಂಡಕ್ಕೂ ವೆಂಕಾಮಾತ್ಯನ ಬಾಲಕಾಂಡಕ್ಕೂ ಇರುವ ನಿರೂಪಣಾ ವ್ಯತ್ಯಾಸಗಳು, ತಾತ್ವಿಕ ಚಿಂತನೆ ಹಾಗೂ ಭಕ್ತಿಪಾರಮ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕವಿಯು ಶ್ರೀರಾಮನನ್ನು ಸಾಮಾನ್ಯ ಮಾನವನನ್ನಾಗಿ ಚಿತ್ರಿಸದೆ, ಆರಂಭದಿಂದಲೇ ಸಾಕ್ಷಾತ್ ಪರಬ್ರಹ್ಮನೆಂದು ಶಿವ-ಪಾರ್ವತಿಯರ ಸಂವಾದದ ಮೂಲಕ ಪ್ರತಿಷ್ಠಾಪಿಸುತ್ತಾನೆ. ದಶರಥನ ಪುತ್ರಕಾಮೇಷ್ಟಿ, ಅಹಲ್ಯಾ ಶಾಪವಿಮೋಚನೆ, ಸೀತಾ ಸ್ವಯಂವರ ಮತ್ತು ಪರಶುರಾಮ ಗರ್ವಭಂಗದಂತಹ ಪ್ರಮುಖ ಪ್ರಸಂಗಗಳಲ್ಲಿ ವೆಂಕಾಮಾತ್ಯನು ಮಾಡಿರುವ ಸೃಜನಶೀಲ ಮಾರ್ಪಾಡುಗಳು ಆತನ ವೈಷ್ಣವ ನಿಲುವು ಹಾಗೂ ಸ್ವಂತಿಕೆಯನ್ನು ಅನಾವರಣಗೊಳಿಸುತ್ತವೆ. ವಾಲ್ಮೀಕಿಯ ಕಥಾಹಂದರವನ್ನು ಉಳಿಸಿಕೊಂಡು, ಪೌರಾಣಿಕ ಕಥೆಗಳು ಹಾಗೂ ಮಾನವೀಯ ಸಂವೇದನೆಗಳ ಸಮನ್ವಯದೊಂದಿಗೆ ರೂಪುಗೊಂಡಿರುವ ವೆಂಕಾಮಾತ್ಯನ ಬಾಲಕಾಂಡದ ಸಾಹಿತ್ಯಕ ಮೌಲ್ಯವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾರಾಯಣ ಪಿ.ವಿ. (ಸಂ.), (2024), ಶ್ರೀರಾಮಕಥಾಮೃತ ಸಂ.1, ಬೆಂಗಳೂರು: ಪ್ರಧಾನ್ ಪ್ರಕಾಶನ.
ಚಂದ್ರಶೇಖರನ್ ಟಿ. (ಸಂ.), (1956), ವೆಂಕಾಮಾತ್ಯಕವಿವಿರಚಿತಂ ಶ್ರೀಮದ್ರಾಮಾಯಣಂ ಬಾಲಕಾಂಡಂ, ಮದ್ರಾಸ್: ಗವರ್ನ್ಮೆಂಟ್ ಓರಿಯೆಂಟಲ್ ಮಾನ್ಯುಸ್ಕ್ರಿಪ್ಟ್ ಲೈಬ್ರರಿ.
ನಾರಾಯಣ ಪಿ.ವಿ., (2020), ಶ್ರೀರಾಮಕಥಾಮೃತ ಸಂ 1, ಬೆಂಗಳೂರು: ವಸಂತ ಪ್ರಕಾಶನ.
ರಂಗನಾಥಶರ್ಮಾ ಎನ್. (ಅನು.), (19೭2), ಶ್ರೀಮದ್ವಾಲ್ಮೀಕಿರಾಮಾಯಣಮ್ ಬಾಲಕಾಂಡಃ, ಬೆಂಗಳೂರು: ರಾಮಾಯಣ ಪ್ರಕಾಶನ ಸಮಿತಿ.
ಶ್ರೀನಿವಾಸ ಅಯ್ಯಂಗಾರ್ ಸಿ.ಎನ್., (2024), ಕನ್ನಡ ವಾಲ್ಮೀಕಿ ರಾಮಾಯಣ (ಮೊದಲನೆಯ ಸಂಪುಟ), ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.