ಭಾಷಾಂತರ ಸಮಸ್ಯೆಗಳು ಮತ್ತು ಸವಾಲುಗಳು

Main Article Content

ನಾಗರಾಜ ಪಿ. ವಿ.

Abstract

ಭಾಷಾಂತರವೆಂದರೆ ಕೇವಲ ಒಂದು ಭಾಷೆಯ ಪದಗಳಿಗೆ ಮತ್ತೊಂದು ಭಾಷೆಯ ಪದಗಳನ್ನು ಜೋಡಿಸುವ ಪ್ರಕ್ರಿಯೆಯಲ್ಲ, ಬದಲಾಗಿ ವಿಭಿನ್ನ ಸಂಸ್ಕೃತಿಗಳನ್ನು ಬೆಸೆಯುವ ಕಾರ್ಯವಾಗಿದೆ. ಅನುವಾದಕನು ಪ್ರಮುಖವಾಗಿ ಭಾಷಿಕ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವಚನ ಸಾಹಿತ್ಯ ಅಥವಾ ಧಾರ್ಮಿಕ-ಜಾನಪದ ಆಚರಣೆಗಳಿಗೆ ಸಂಬಂಧಿಸಿದ ವಿಶಿಷ್ಟ ಪದಗಳನ್ನು ಅನ್ಯ ಭಾಷೆಗೆ ಒಗ್ಗಿಸುವುದು ಕಷ್ಟಕರವಾಗಿರುತ್ತದೆ. ಪದಗಳ ಅರ್ಥವ್ಯಾಪ್ತಿ, ವಾಕ್ಯರಚನೆ, ವಚನ-ವ್ಯವಸ್ಥೆ ಹಾಗೂ ಸಾಂದರ್ಭಿಕ ಅರ್ಥದ (Semantics) ವ್ಯತ್ಯಾಸಗಳು ಅನುವಾದದಲ್ಲಿ ಗೊಂದಲ ಸೃಷ್ಟಿಸಬಹುದು. ಸಮರ್ಥ ಭಾಷಾಂತರಕಾರನಾಗಲು ಮೂಲ ಭಾಷೆ (Source Language) ಹಾಗೂ ಉದ್ದಿಷ್ಟ ಭಾಷೆಗಳ (Target Language) ವ್ಯಾಕರಣದ ಜೊತೆಗೆ ಆಯಾ ಭಾಷೆಗಳ ಸಾಂಸ್ಕೃತಿಕ ಒಳಹುಗಳು ಮತ್ತು ಸೂಕ್ಷ್ಮತೆಗಳ ಆಳವಾದ ಅರಿವು ಅತ್ಯಗತ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

Article Details

Section

Research Articles

Author Biography

ನಾಗರಾಜ ಪಿ. ವಿ.

ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿಜಯನಗರ, ಬೆಂಗಳೂರು.

References

ಪಂಪ ಭಾರತಂ, ಎನ್. ಅನಂತರಂಗಾಚಾರ್ (ಅನು,), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ರನ್ನನ ಸರಳ ಗಧಾಯುದ್ಧ, ಡಾ. ಎಲ್. ಬಸವರಾಜು, ಸಪ್ನ ಬುಕ್ ಹೌಸ್, ಬೆಂಗಳೂರು.

ಸರ್ವಜ್ಞನ ವಚನಗಳು, ಚನ್ನಪ್ಪ ಉತ್ತಂಗಿ (ಸಂ.), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಕರ್ನಾಟಕ ಭಾರತ ಕಥಾಮಂಜರಿ, ಕುಮಾರವ್ಯಾಸ.